ಮಳೆಗಾಲ ಪ್ರಾರಂಭವಾಗಿದ್ದು, ಪ್ರವಾಹ ಉಂಟಾದರೆ ಕೃಷಿ ಚಟುವಟಿಕೆ ಹಾಗೂ ಜನ ಜಾನುವಾರುಗಳಿಗೆ ತೊಂದರೆ ಆಗದಂತೆ ಅಗತ್ಯ ಮುಂಜಾಗೃತಾ ಕ್ರಮವಹಿಸಿ. ಕಾಳಜಿ ಕೇಂದ್ರಗಳನ್ನು ಗುರುತಿಸಿ ಎಲ್ಲ ಸಿದ್ದತೆ ಮಾಡಿಕೊಳ್ಳಬೇಕೆಂದು ಶಾಸಕ ರಾಜು ಕಾಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ
ಬೆಳಗಾವಿ ಜಿಲ್ಲೆ ಕಾಗವಾಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ತಾಲೂಕು ಮಟ್ಟದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಪ್ರವಾಹ ನಿಯಂತ್ರಣಕ್ಕೆ ಸಿದ್ದತೆ ಮಾಡಿಕೊಳ್ಳಬೇಕು. ದೋಣಿಗಳನ್ನು ಸುಸ್ಥಿತಿಯಲ್ಲಿಡಬೇಕು ಹಾಗೂ ಕಾಳಜಿ ಕೇಂದ್ರ ಗುರುತಿಸಿ ಅಗತ್ಯ ಸೌಲಭ್ಯ ಮಾಡಿಕೊಳ್ಳಬೇಕು. ಇದಕ್ಕಾಗಿ ಒಬ್ಬ ಅಧಿಕಾರಿಯನ್ನೂ ನೇಮಿಸಬೇಕು” ಎಂದು ಸೂಚಿಸಿದರು.
“ಮಳೆಗಾಲ ಪ್ರಾರಂಭವಾಗಿರುವದರಿಂದ ಕೃಷಿ ಚಟುವಟಿಕೆಗಳಿಗೆ ಅಗತ್ಯ ಬೀಜ ರಸಗೊಬ್ಬರ ದಾಸ್ತಾನು ಇಟ್ಟು ರೈತರಿಗೆ ಸಕಾಲದಲ್ಲಿ ಪೂರೈಕೆ ಆಗುವಂತೆ ನಿಗಾವಹಿಸಬೇಕು” ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
“ಬಸವೇಶ್ವರ ಏತ ನೀರಾವರಿ ಯೋಜನೆ ಪ್ರಾರಂಭ ಮಾಡಲಿದ್ದು. ಅದಕ್ಕೆ ಬೇಕಾದ ಅಗತ್ಯ
ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ” ಎಂದು ಸಚಿವರು ನೀರಾವರಿ ಇಲಾಖೆಯ ಅಧಿಕಾರಿ ಎಇಇ ಕೆ ರವಿ ಹಾಗೂ ಹೆಸ್ಕಾಂ ಅಧಿಕಾರಿ ಎಇಇ ದುರ್ಯೋಧನ ಮಾಳಿ ಅವರಿಗೆ ಸೂಚನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಾಮಾಜಿಕ ಜಾಲತಾಣ ಬಳಕೆಯಿಂದ ಮಾಧ್ಯಮಗಳ ಪ್ರಭಾವ ತಗ್ಗುತ್ತಿದೆ: ಪ್ರಾ. ರಮೇಶ ಅರೋಲಿ
ಕಾಗವಾಡ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ತಹಶೀಲ್ದಾರ್ ರಾಜೇಶ ಬುರ್ಲಿ, ಸಂಜೀವಕುಮಾರ ಸದಲಗಿ, ಡಿ ಜೆ ಕಾಂಬಳೆ, ಮಾಹಾಂತೇಶ ಕವಲಾಪೂರ, ಜಯಾನಂದ ಹಿರೇಮಠ, ಮಾಹಾಂತೇಶ ಭಂಡಗರ, ಪ್ರಶಾಂತ ಗಾಣಿಗೇರ, ನಿಂಗನಗೌಡ ಬಿರಾದಾರ, ಎ ಡಿ ಅನ್ಸಾರಿ, ಕೆ ರವಿ, ಇ.ಒ ಈರಣ್ಣ ವಾಲಿ, ಎಂ ಆರ್ ಮುಂಜೆ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಇದ್ದರು.
