ಸದ್ಯ 1 ಲೀ. ಹಾಲಿನ ಜತೆಗೆ 50 ಎಂಎಲ್ ಹಾಲು ನೀಡುತ್ತೇವೆಂದು ಕೆಎಂಎಫ್ ಹಾಲಿನ ದರದಲ್ಲಿ ₹2 ಏರಿಕೆ ಮಾಡಿದೆ. 1ಲೀ. 50 ಎಂಎಲ್ ಹಾಲಿನ ದರ ₹44ಗೆ ಏರಿಕೆಯಾಗಲಿದೆ. ಈ ಬೆನ್ನಲ್ಲೇ, ರಾಜ್ಯ ಹೋಟೆಲ್ ಮಾಲೀಕರ ಸಂಘವು ಕಾಫಿ, ಟೀ ದರ ಏರಿಕೆ ಮಾಡಲು ಚಿಂತನೆ ನಡೆಸಿದೆ.
ಪೆಟ್ರೊಲ್, ಡಿಸೇಲ್, ತರಕಾರಿ ಸೇರಿದಂತೆ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಎದುರಾಗುವ ನಷ್ಟವನ್ನು ಪರಿಗಣಿಸಿ ಕಾಫಿ, ಟೀ ಬೆಲೆಯಲ್ಲಿ ₹2 ಏರಿಕೆ ಮಾಡಲು ಹೋಟೆಲ್ ಮಾಲೀಕರು ಚಿಂತನೆ ನಡೆಸಿದ್ದಾರೆ.
ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೇ, ನಮ್ಮಲ್ಲಿ ಕಾಫಿ, ಟೀ ಬೆಲೆ ಕಡಿಮೆ ಇದೆ. ಅಲ್ಲದೇ, ಕಾಫಿ ಹಾಗೂ ಟೀ ಪೌಡರ್ಗಳ ಬೆಲೆ ಹೆಚ್ಚಳವಾಗಿದೆ. ಹಾಗಾಗಿ, ಕನಿಷ್ಠ ₹2 ಏರಿಕೆ ಮಾಡುವ ಬಗ್ಗೆ ಹೋಟೆಲ್ ಮಾಲೀಕರು ಚಿಂತನೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತೆರಿಗೆ ಕಟ್ಟುತ್ತಿರುವವರ ಮೇಲೆ ಹೊರೆ ಹೊರಿಸುತ್ತಿರುವ ಬಿಬಿಎಂಪಿ: ಎಎಪಿ ಆಕ್ರೋಶ
1 ಲೀಗೆ ಹೆಚ್ಚುವರಿ 50 ಎಂಎಲ್ ಹಾಲು ಸೇರ್ಪಡೆ ಮಾಡಿ ದರ ಪರಿಷ್ಕರಣೆಯೊಂದಿಗೆ ಇಂದಿನಿಂದ ಹಾಲಿನ ಪ್ಯಾಕೆಟ್ ಮಾರಾಟವಾಗುತ್ತಿದೆ. ಸದ್ಯ ರಾಜ್ಯದಲ್ಲಿ ಹಾಲಿನ ದರ ಹೆಚ್ಚಳದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇದು ದರ ಏರಿಕೆಯಲ್ಲ. 50 ಎಂಎಲ್ ಹೆಚ್ಚು ಹಾಳು ನೀಡುತ್ತಿದ್ದೇವೆ. ಅದಕ್ಕೆ ಈ ₹2 ಎಂದು ಸ್ಪಷ್ಟನೆ ನೀಡಿದ್ದಾರೆ.