ಹರಿದ್ವಾರದಲ್ಲಿ 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಮಾಡಿದ ಪ್ರಕರಣದಲ್ಲಿ ಬಿಜೆಪಿ ನಾಯಕ ಮತ್ತು ಉತ್ತರಾಖಂಡದ ಒಬಿಸಿ ಆಯೋಗದ ಸದಸ್ಯರ ಪೈಕಿ ಇಬ್ಬರನ್ನು ಬುಧವಾರ ಬಂಧಿಸಲಾಗಿದೆ.
ರೂರ್ಕಿ-ಹರಿದ್ವಾರ ಹೆದ್ದಾರಿಯಲ್ಲಿ ಸಂತ್ರಸ್ತೆಯ ಶವ ಪತ್ತೆಯಾಗಿದೆ. ಸಂತ್ರಸ್ತೆಯ ತಾಯಿ ತನ್ನ ದೂರಿನಲ್ಲಿ ಸ್ಥಳೀಯ ಗ್ರಾಮದ ಮುಖ್ಯಸ್ಥರ ಪತಿ, ಬಿಜೆಪಿಯ ಉತ್ತರಾಖಂಡ ಒಬಿಸಿ ಮೋರ್ಚಾದ ಸದಸ್ಯ ಮತ್ತು ರಾಜ್ಯ ಸರ್ಕಾರದ ಒಬಿಸಿ ಆಯೋಗದ ಸದಸ್ಯ, ಆತನ ಸಹಚರನು ತನ್ನ ಮಗಳ ಮೇಲೆ ಅತ್ಯಾಚಾರ ಮಾಡಿ ಕೊಂದಿದ್ದಾರೆ ಎಂದು ಆರೋಪಿದ್ದಾರೆ.
ಎಫ್‌ಐಆರ್‌ನಲ್ಲಿ ಆರೋಪಿಗಳನ್ನು ಆದಿತ್ಯ ರಾಜ್ ಸೈನಿ ಮತ್ತು ಅಮಿತ್ ಸೈನಿ ಎಂದು ಹೆಸರಿಸಲಾಗಿದೆ. ಇದೀಗ ಬಿಜೆಪಿ ಹಾಗೂ ರಾಜ್ಯದ ಒಬಿಸಿ ಆಯೋಗದಿಂದ ಆರೋಪಿಗಳನ್ನು ತೆಗೆದುಹಾಕಲಾಗಿದೆ. ಇಬ್ಬರು ಶಂಕಿತರ ವಿರುದ್ಧ ಕೊಲೆ, ಸಾಮೂಹಿಕ ಅತ್ಯಾಚಾರ ಮತ್ತು ಪೋಕ್ಸೊ ಸೇರಿದಂತೆ ಹಲವು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಹರಿದ್ವಾರ ಪೊಲೀಸರು ಪ್ರಕರಣದ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಎಸ್‌ಪಿಗೆ ಅಗತ್ಯ ಸೂಚನೆ ನೀಡಲಾಗಿದೆ. ಪ್ರಕರಣದ ತ್ವರಿತ ತನಿಖೆಗಾಗಿ ಐದು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮುರುಘಾ ಶ್ರೀ ವಿರುದ್ಧದ ಸಾಮೂಹಿಕ ಅತ್ಯಾಚಾರ, ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಪ್ರಕರಣ ರದ್ದು
“ವೈಜ್ಞಾನಿಕ ಪುರಾವೆಗಳು ಮತ್ತು ಇತರ ಪುರಾವೆಗಳನ್ನು ಸಂಗ್ರಹಿಸಲು ರಚಿಸಲಾದ ಎಲ್ಲಾ ತಂಡಗಳಿಗೆ ವಿಭಿನ್ನ ಕಾರ್ಯಗಳನ್ನು ನೀಡಲಾಗಿದೆ. ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಬಿಡಲಾಗುವುದಿಲ್ಲ” ಎಂದು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಮೇಂದ್ರ ದೋಭಾಲ್ ತಿಳಿಸಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ಆರೋಪಿಗಳ ಬಂಧನದ ಬಗ್ಗೆ ಸಿಟಿ ಎಸ್‌ಪಿ ಸ್ವತಂತ್ರ ಕುಮಾರ್ ಸಿಂಗ್ ಅವರನ್ನು ಪ್ರಶ್ನಿಸಿದ್ದು, “ಪ್ರಕರಣದಲ್ಲಿ ಹೆಸರಿಸಲಾದವರು ಶಂಕಿತರಾಗಿದ್ದು, ತನಿಖೆಯ ಬಳಿಕ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾವಿಗೆ ಕಾರಣ ದೃಢಪಡಲಿದೆ” ಎಂದೂ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | 23 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಕೊಠಾರಿ ಬುಧವಾರ ಆದಿತ್ಯ ರಾಜ್ ಸೈನಿ ಉಚ್ಚಾಟನೆ ಪತ್ರವನ್ನು ಹೊರಡಿಸಿದ್ದು, “ಬಿಜೆಪಿ ರಾಜ್ಯಾಧ್ಯಕ್ಷ ಮಹೇಂದ್ರ ಭಟ್ ಅವರ ಸೂಚನೆಯಂತೆ ಒಬಿಸಿ ಮೋರ್ಚಾದ ರಾಜ್ಯ ಕಾರ್ಯಕಾರಿ ಸದಸ್ಯ ಆದಿತ್ಯ ರಾಜ್ ಸೈನಿ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಲಾಗಿದೆ” ಎಂದು ತಿಳಿಸಿದ್ದಾರೆ.
ಇನ್ನು, “ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹಳಿ ತಪ್ಪಿದೆ. ಉತ್ತರಾಖಂಡ್‌ನಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚುತ್ತಿವೆ” ಎಂದು ಉತ್ತರಾಖಂಡ ಕಾಂಗ್ರೆಸ್‌ನ ಮುಖ್ಯ ವಕ್ತಾರ ಗರಿಮಾ ಮೆಹ್ರಾ ದಸೌನಿ ಹೇಳಿದ್ದಾರೆ.
13-year-old girl gang-raped, found dead along Haridwar highway; mother accuses BJP worker.
The main accused, Adityaraj Saini, was a member of the local BJP OBC Morcha. https://t.co/FQwKyRy9KJ— Mohammed Zubair (@zoo_bear) June 26, 2024