ಕನ್ನಡ ನಟ ಯಶ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ‘ಕಲ್ಕಿ 2898 ಎಡಿ’ ಚಿತ್ರದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು ನಾಗ್ ಅಶ್ವಿನ್ ಅವರ ನಿರ್ದೇಶನ ಹಾಗೂ ಕಲಾವಿದರನ್ನು ಶ್ಲಾಘಿಸಿದ್ದಾರೆ ಹಾಗೂ ಸಿನಿಮಾ ‘ಸೃಜನಾತ್ಮಕ ಕಥಾಹಂದರ’ ಹೊಂದಿದೆ ಎಂದು ಹೇಳಿದ್ದಾರೆ.
“ಸಿನಿಮಾ ದೃಗ್ಗೋಚರವಾಗಿ ಅದ್ಭುತವಾದ ಚಮತ್ಕಾರ ಸೃಷ್ಟಿಸಿದೆ. ‘ಕಲ್ಕಿ 2898AD’ ಚಿತ್ರ ತಂಡಕ್ಕೆ ಅಭಿನಂದನೆಗಳು! ಈ ಚಿತ್ರವು ಹೆಚ್ಚು ಸೃಜನಶೀಲ ಕಥೆ ಹೇಳಲು ಅನುವು ಮಾಡಿಕೊಡುತ್ತದೆ. ನಾಗ್ ಅಶ್ವಿನ್ – ನಿಮ್ಮ ಆಲೋಚನೆ ಮತ್ತು ಧೈರ್ಯವು ಸ್ಫೂರ್ತಿ ನೀಡುತ್ತದೆ. ಅನೇಕರು ದೊಡ್ಡ ದಾಪುಗಾಲಿಡಲು ನಿರ್ಧರಿಸಲು ಈ ಸಿನಿಮಾ ಎಡೆಮಾಡಿಕೊಡುತ್ತದೆ” ಎಂದು ಯಶ್ ಹೇಳಿಕೊಂಡಿದ್ದಾರೆ.
“ಡಾರ್ಲಿಂಗ್ ಪ್ರಭಾಸ್, ಬಚ್ಚನ್ ಸರ್, ಕಮಲ್ ಹಾಸನ್ ಸರ್, ದೀಪಿಕಾ ಪಡುಕೋಣೆ ಹಾಗೂ ಕೆಲವು ಹಿರಿಯ ಕಲಾವಿದರನ್ನು ಆಶ್ಚರ್ಯಕರ ಅತಿಥಿ ಪಾತ್ರಗಳಲ್ಲಿ ಒಟ್ಟಿಗೆ ನೋಡುವುದು ಒಂದು ಅದ್ಭುತ ಅನುಭವ. ಈ ಚಿತ್ರವನ್ನು ನಿರ್ಮಿಸಲು ದುಡಿದ ಎಲ್ಲರಿಗೂ ಅಭಿನಂದನೆಗಳು – ಇದು ನಿಜವಾಗಿಯೂ ಬೆಳ್ಳಿತೆರೆಯಲ್ಲಿ ಅಬ್ಬರಿಸುತ್ತದೆ” ಎಂದು ಯಶ್ ಹೇಳಿದ್ದಾರೆ.
ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅಭಿನಯದ ‘ಕಲ್ಕಿ 2898 AD’ ಜೂನ್ 27 ರಂದು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಿದೆ. ಇದು ಮಹಾಭಾರತ ಯುದ್ಧದ ಸಾವಿರಾರು ವರ್ಷಗಳ ನಂತರ ಕಾಶಿ ನಗರದಲ್ಲಿ ನಡೆದ ‘ಡಿಸ್ಟೋಪಿಯನ್’ ಕತೆಯನ್ನು ಹೇಳುವ ಚಿತ್ರವಾಗಿದೆ.
ಸಿನಿಮಾದಲ್ಲಿ ಜಗತ್ತನ್ನು ಸುಪ್ರೀಂ ಯಾಸ್ಕಿನ್ (ಕಮಲ್ ಹಾಸನ್) ಆಳುತ್ತಾನೆ. ನಗರದಲ್ಲಿ ಬಡವರು ಬಳಲುತ್ತಿದ್ದಾರೆ. ಶ್ರೀಮಂತರು ತಮ್ಮ ಜೀವನವನ್ನು ಉತ್ತಮ ಸವಲತ್ತುಗಳಿಂದ ನಿರ್ಮಿಸಲಾದ ಕಾಂಪ್ಲೆಕ್ಸ್‌ಗಳಲ್ಲಿ ಆನಂದಿಸುತ್ತಾರೆ. ಕಾಂಪ್ಲೆಕ್ಸ್‌ಗೆ ಬರುವುದು ಭೈರವನ (ಪ್ರಭಾಸ್) ಕನಸು. ಭೈರವ ಕಾಂಪ್ಲೆಕ್ಸ್‌ಗೆ ಹೇಗೆ ಹೋಗುತ್ತಾನೆ ಮತ್ತು ಅಲ್ಲಿ ಏನು ಮಾಡುತ್ತಾನೆ ಎಂಬುದನ್ನು ಚಿತ್ರವು ಹೇಳುತ್ತಾ ಸಾಗುತ್ತದೆ. ಚಿತ್ರವು ಪ್ರಸ್ತುತ ವಿಶ್ವಾದ್ಯಂತ ಥಿಯೇಟರ್‌ಗಳಲ್ಲಿ ಓಡುತ್ತಿದೆ.
ಇವದೋಪು ಸಿನಿಮಾ
ಈ ಸಿನಿಮಾವನ್ನು ಹಲವು ಸಿನಿಪ್ರಿಯರು ಅಪ್ಪಿ ಸ್ವಾಗತಿಸಿದ್ದರೇ, ಇನ್ನು ಕೆಲವರು ಈ ಸಿನಿಮಾವನ್ನು ಇವದೋಪು ಸಿನಿಮಾ ಇದು ಎಂದು ಕಮೆಂಟ್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾವೇರಿ | ಭೀಕರ ಅಪಘಾತ; ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ ಸಿಎಂ
“₹600 ಕೋಟಿ ಬಜೆಟ್‌ನಲ್ಲಿ ಅರ್ಧದಷ್ಟು ಹಣವನ್ನು ಕೇವಲ ಸೆಟ್ಅಪ್‌ಗಾಗಿ ಖರ್ಚು ಮಾಡಲಾಗಿದೆ. ಹಲವು ಹಾಲಿವುಡ್ ಸೈಟಿಫಿಕ್ ಬ್ಲಾಕ್‌ಬಾಸ್ಟರ್ ಸಿನಿಮಾಗಳಿಂದ ಪ್ರೇರೇಪಿತರಾಗಿ ಈ ಸಿನಿಮಾ ಮಾಡಲಾಗಿದೆ. ಸಿನಿಮಾದ ಮೊದಲಾರ್ಧವು ಅನಪೇಕ್ಷಿತ ಹೋರಾಟದ 15 ನಿಮಿಷಗಳ ದೃಶ್ಯಗಳನ್ನು ಹೊಂದಿದ್ದು, ಬೇಸರ ಉಂಟು ಮಾಡುತ್ತದೆ. ಪ್ರಭಾಸ್ ಅವರು ಕಾಣಿಸಿಕೊಳ್ಳುವ ದೃಶ್ಯಗಳನ್ನು ಹೊರತುಪಡಿಸಿ ಉಳಿದೆಲ್ಲ ಪಾತ್ರಗಳ ದೃಶ್ಯಗಳು ಕಥಾವಸ್ತುವಿಗೆ ಹೆಚ್ಚು ಕೊಡುಗೆ ನೀಡುತ್ತವೆ. ಕತೆಯ ಕೇಂದ್ರಬಿಂದು ಭೈರವ ಆಗಿದ್ದರೂ, ಆತನ ಪಾತ್ರ ಆಕರ್ಷಕ ಆಥವಾ ಅದ್ಭುತವನ್ನು ಸೃಷ್ಠಿಸುವಲ್ಲಿ ಕೊರತೆಗಳನ್ನು ಹೊಂದಿದೆ” ಎಂದು ಹಲವರು ಹೇಳುತ್ತಿದ್ದಾರೆ.
ಕನ್ನಡ ಡಬ್ಬಿಂಗ್ ಬೆಂಬಲಿಗನಾಗಿ ಪ್ರಭಾಸ್ ಕಲ್ಕಿ ನೋಡಿದೆ. ಸ್ಟಾರ್ ವಾರ್ಸ್, ಡ್ಯೂನ್ ಮೂವಿ ಜೊತೆಗೆ ಮಹಾಭಾರತ ಉಪಕತೆ ಸೇರಿಸಿ ಮಾಡಿರೋ ಇವದೋಪು ಸಿನೆಮಾ ಇದು.😂😂
ಕನ್ನಡ ಡಬ್ಬಿಂಗ್ ಕ್ವಾಲಿಟಿ ಚೆನ್ನಾಗಿದೆ. Watchable..
— ಬಾಲಾಜಿ ಎಸ್ | Balaji S (@Balaji_blr1) June 27, 2024
ಬಾಲಾಜಿ ಎಂಬುವವರು, “ಕನ್ನಡ ಡಬ್ಬಿಂಗ್ ಬೆಂಬಲಿಗನಾಗಿ ಪ್ರಭಾಸ್ ಕಲ್ಕಿ ನೋಡಿದೆ. ಸ್ಟಾರ್ ವಾರ್ಸ್, ಡ್ಯೂನ್ ಮೂವಿ ಜೊತೆಗೆ ಮಹಾಭಾರತ ಉಪಕತೆ ಸೇರಿಸಿ ಮಾಡಿರೋ ಇವದೋಪು ಸಿನೆಮಾ ಇದು. ಕನ್ನಡ ಡಬ್ಬಿಂಗ್ ಕ್ವಾಲಿಟಿ ಚೆನ್ನಾಗಿದೆ. ನೋಡಬಹುದಾದ ಚಿತ್ರ” ಎಂದು ಬರೆದುಕೊಂಡಿದ್ದಾರೆ.