ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕಿನ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದ್ದು, 13 ಸ್ಥಾನಗಳ ಪೈಕಿ ಕೇವಲ ಓರ್ವ ಅಭ್ಯರ್ಥಿ ಗೆಲುವು ಕಂಡಿದ್ದರೆ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಸಹಕಾರಿ ಧುರೀಣ ಆರ್ ಎಂ ಮಂಜುನಾಥ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಈ ಕುರಿತಂತೆ ಚುನಾವಣಾಧಿಕಾರಿ ಸತ್ಯನಾರಾಯಣ್ ಮಾಹಿತಿ ನೀಡಿದ್ದು, “ಬೇಳೂರು ಗೋಪಾಲಕೃಷ್ಣ, ಸಿ ಹನುಮಂತಪ್ಪ, ಎಸ್ ಪಿ ಚಂದ್ರಶೇಖರ್ ಗೌಡ, ಎಸ್ ಕೆ ಮರಿಯಪ್ಪ, ಜಿ ಎನ್ ಸುಧೀರ, ಕೆ ಪಿ ರುದ್ರಗೌಡ, ಟಿ ಶಿವಶಂಕರಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ 13 ಮಂದಿ ಗೆಲುವು ಸಾಧಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಕ್ಷೇತ್ರವಾರು ಗೆದ್ದ ಅಭ್ಯರ್ಥಿಗಳು ಹಾಗೂ ಪಡೆದ ಮತಗಳ ವಿವರ
ಕ್ಷೇತ್ರ-1 ಶಿವಮೊಗ್ಗ ತಾಲೂಕು: ಕೆ ಪಿ ದುಗ್ಗಪ್ಪ ಗೌಡ 13 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಶಿವನಂಜಪ್ಪ 12 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಭದ್ರಾವತಿ ತಾಲೂಕು: ಸಿ ಹನುಮಂತಪ್ಪ 9 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಹೆಚ್ ಎಲ್ ಷಡಾಕ್ಷರಿ 7 ಮತಗಳೊಂದಿಗೆ ಸೋಲು ಕಂಡಿದ್ದಾರೆ.
ತೀರ್ಥಹಳ್ಳಿ ತಾಲೂಕು: ಬಸವಾನಿ ವಿಜಯದೇವ್ 14 ಮತಗಳಿಂದ ಗೆಲುವು ಸಾಧಿಸಿದರೆ, ಪ್ರತಿಸ್ಪರ್ಧಿ ಕೆ ಎಸ್ ಶಿವಕುಮಾರ್ 9 ಮತಗಳೊಂದಿಗೆ ಸೋಲು ಕಂಡಿದ್ದಾರೆ.
ಸಾಗರ ತಾಲೂಕು: ಶಾಸಕ ಬೇಳೂರು ಗೋಪಾಲಕೃಷ್ಣ ಅವರು 15 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ರತ್ನಾಕರ ಹೊನಗೋಡು 14 ಮತಗಳನ್ನು ಪಡೆದರೂ 1 ಮತದಿಂದ ಸೋಲನುಭವಿಸುವಂತಾಗಿದೆ.
ಸೊರಬ ತಾಲೂಕು: ಕೆ ಪಿ ರುದ್ರಗೌಡ ಅವರು 14 ಮತಗಳಿಂದ ಗೆಲುವು ಸಾಧಿಸಿದರೆ, ಶಿವಮೂರ್ತಿ ಗೌಡ 10 ಮತಗಳಿಂದ ಸೋತಿದ್ದಾರೆ. ಹೊಸನಗರ ತಾಲೂಕಿನಲ್ಲಿ ಎಂ ಎಂ ಪರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕ್ಷೇತ್ರ-2 ಶಿವಮೊಗ್ಗ ಉಪವಿಭಾಗ: ಆರ್ ಎಂ ಮಂಜುನಾಥ ಗೌಡ ಅವರು 15 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ವಿರೂಪಾಕ್ಷಪ್ಪ 3 ಮತಗಳನ್ನು ಪಡೆದಿದ್ದಾರೆ.
ಸಾಗರ ಉಪವಿಭಾಗ: ಜಿ ಎನ್ ಸುಧೀರ್ 23 ಮತಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದ್ದರೆ, ಬಿ ಡಿ ಭೂಕಾಂತ್ 21 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಕ್ಷೇತ್ರ-3, ಶಿವಮೊಗ್ಗ ಉಪವಿಭಾಗ: ಎಸ್ ಕೆ ಮರಿಯಪ್ಪ 39 ಮತ ಪಡೆದು ಗೆಲುವು, ಎಸ್ ಪಿ ದಿನೇಶ್ 16 ಮತಗಳೊಂದಿಗೆ ಸೋತಿದ್ದಾರೆ.
ಶಿಕಾರಿಪುರ ತಾಲ್ಲೂಕು: ಬಿಜೆಪಿಯ ಅಭ್ಯರ್ಥಿ ಪಿಎಲ್ ಬಸವರಾಜ್ 32 ಮತಗಳಿಂದ ಗೆಲುವು ಸಾಧಿಸಿದ್ರೇ, ರವೀಂದ್ರ ಹೆಚ್ ಎಸ್ 21 ಮತಗಳೊಂದಿಗೆ ಸೋಲು ಕಂಡಿದ್ದಾರೆ.
ಕ್ಷೇತ್ರ-4ರ ಶಿವಮೊಗ್ಗ ಉಪ ವಿಭಾಗ: ಮಹಾಲಿಂಗಯ್ಯ ಶಾಸ್ತ್ರಿ 47 ಮತಗಳೊಂದಿಗೆ ಗೆಲುವು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಕೆ.ಎಲ್ ಜಗದೀಶ್ವರ್ 45, ಡಿ.ಆನಂದ್ 16, ಜೆ.ಪಿ ಯೋಗೇಶ್ 14 ಮತಗಳನ್ನು ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಲಿಂಗತ್ವ ಅಲ್ಪಸಂಖ್ಯಾತರಿಗೆ ಗೌರವದ ಬದುಕು ಕೊಡಿ: ಬಿ ಮಂಜಮ್ಮ ಜೋಗತಿ
ಸಾಗರ ಉಪ ವಿಭಾಗ: ಟಿ ಶಿವಶಂಕರಪ್ಪ 75 ಮತಗಳೊಂದಿಗೆ ಗೆಲುವು ಕಂಡಿದ್ದರೇ, ಎಂ ಡಿ ಹರೀಶ್ 61 ಮತಗಳೊಂದಿಗೆ ಸೋಲು ಕಂಡಿದ್ದಾರೆ.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯ ಮತದಾನದಲ್ಲಿ 621 ಮಂದಿ ಭಾಗಿಯಾಗಿ ತಮ್ಮ ಮತವನ್ನು ಚಲಾಯಿಸಿದ್ದರು. ಇವುಗಳಲ್ಲಿ 5 ಮತಗಳು ತಿರಸ್ಕೃತಗೊಂಡಿವೆ.
