ಬಿಜೆಪಿ ಶಾಸಕ ಟಿ ರಾಜಾ ಸಿಂಗ್ನಿಂದ ಬೆದರಿಕೆ ಸ್ವೀಕರಿಸಿದ ನಂತರ ಹಾಸ್ಯ ಕಲಾವಿದ ಡೇನಿಯಲ್ ಫರ್ನಾಂಡಿಸ್ ಹೈದರಾಬಾಬ್ನಲ್ಲಿ ಹಮ್ಮಿಕೊಂಡಿದ್ದ ತಮ್ಮ ಸ್ಟ್ಯಾಂಡ್ ಅಪ್ ಕಾಮಿಡಿ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.
ಒಂದು ವೇಳೆ ಕಾರ್ಯಕ್ರಮ ಹಮ್ಮಿಕೊಂಡರೆ ದೈಹಿಕವಾಗಿ ಹಲ್ಲೆ ನಡೆಸುವುದಾಗಿ ಬಿಜೆಪಿ ಶಾಸಕ ಬೆದರಿಕೆ ಹಾಕಿದ್ದ.
ಡೇನಿಯಲ್ ಫರ್ನಾಂಡಿಸ್ ಕಾರ್ಯಕ್ರಮವೊಂದರಲ್ಲಿ ಜೈನ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಎಂಬ ಕಾರಣದಿಂದ ಬಿಜೆಪಿ ಶಾಸಕ ಆಕ್ರೋಶಗೊಂಡಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸ್ವಾಮೀಜಿಗಳಿಗೆ ಈ ಭಂಡತನ ಬಂದದ್ದಾದರೂ ಎಲ್ಲಿಂದ?
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಡೇನಿಯಲ್ ಅವರು ಇನ್ಸ್ಟಾಗ್ರಾಂ ಮೂಲಕ ಕ್ಷಮೆ ಕೇಳಿದ್ದರು. ವಿವಾದಿತ ವಿಡಿಯೋವನ್ನು ಅಳಿಸಿದ ನಂತರವೂ ಅವರು ಬೆದರಿಕೆ ಕರೆಗಳನ್ನು ಸ್ವೀಕರಿಸುತ್ತಿದ್ದಾರೆ.
“ಜನರ ಭಾವನೆಗಳಿಗೆ ಧಕ್ಕೆಯಾದ ಕಾರಣ ನಾನು ವಿವಾದಿತ ವಿಡಿಯೋವನ್ನು ಅಳಿಸಿಹಾಕಿದ್ದೆ. ಆದರೂ ನಾವು ಕರೆಗಳು, ಸಂದೇಶಗಳು ಹಾಗೂ ಇಮೇಲ್ಗಳ ಮೂಲಕ ಬೆದರಿಕೆಯನ್ನು ಸ್ವೀಕರಿಸುತ್ತಿದ್ದೇವೆ. ನನ್ನ ಮಾತು ಜೈನ ಸಮುದಾಯವನ್ನು ನೋಯಿಸುವ ಯಾವುದೇ ಉದ್ದೇಶವನ್ನು ಹೊಂದಿರಲಿಲ್ಲ. ನಿಮ್ಮ ಭಾವನೆಗಳಿಗೆ ನೋವಾಗಿರುವುದಕ್ಕೆ ಕ್ಷಮೆಯಾಚಿಸುತ್ತೇನೆ” ಎಂದು ತಿಳಿಸಿದ್ದಾರೆ.
ಮುಂಬೈ ಮೂಲದ ಡೇನಿಯಲ್ ಫರ್ನಾಂಡಿಸ್ ಸ್ಟಾಂಡ್ ಅಪ್ ಕಾಮಿಡಿ ನೀಡುವ ಹಾಸ್ಯ ಕಲಾವಿದರಾಗಿದ್ದಾರೆ.
