ಗದಗ | ದಲಿತ ಚಳವಳಿ- 50; ನ.23, 24ರಂದು ಸಮಾವೇಶ ನಡೆಸಲು ನಿರ್ಧಾರ

Date:

Advertisements

ರಾಜ್ಯದಲ್ಲಿ ನಡೆದ ದಲಿತ ಚಳುವಳಿ- ಹೋರಾಟ ನಡೆದು ಬಂದ ದಾರಿಯ ಐತಿಹಾಸಿಕ ಮಹತ್ವದ ಹೆಜ್ಜೆಗಳ ಕುರಿತು ಅವಲೋಕನ ಮಾಡುವ ಮತ್ತು ಚಳವಳಿಯ ಮುನ್ನೋಟವನ್ನು ಚರ್ಚೆಗೆ ಒಡ್ಡಿಕೊಳ್ಳುತ್ತ ಈ ಕಾಲದ ಶೋಷಿತ ಸಮುದಾಯಗಳ ಸಮಸ್ಯೆ ಸಂಕಟಗಳ ಆಧಾರದ ಮೇಲೆ ಸಾಗಬೇಕಾದ ಚಳವಳಿಯ ದಾರಿಯ ಸ್ವರೂಪದ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ಸಾಹಿತಿ ಬಸವರಾಜ ಸೂಳಿಬಾವಿ ಹೇಳಿದರು.

ಗದಗ ನಗರದಲ್ಲಿ ಹಮ್ಮಿಕೊಂಡಿದ್ದ ದಲಿತ ಚಳವಳಿ 50 ಅವಲೋಕನ ಮತ್ತು ಮುನ್ನೋಟ ಸಮಾವೇಶದ ಸಂಘಟನಾ ಸಭೆಯಲ್ಲಿ ಮಾತನಾಡಿದರು.

“ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ಅಂಬೇಡ್ಕರ್ ತಾತ್ತ್ವಿಕತೆಯಿಂದ ಪ್ರೇರಣೆ ಪಡೆದು ದಲಿತ ಚಳವಳಿಗಳು ನಡೆದಿವೆ. ಅದೇ ಅವಧಿಯಲ್ಲಿ ರೈತ, ಮಹಿಳಾ, ಎಡವಾದಿ ಚಳವಳಿಗಳು ಕರ್ನಾಟಕದಲ್ಲಿ ನಡೆದಿವೆ. ಇಂತಹ ಚಳವಳಿಗಳ ನಡುವಿದ್ದ ಸಾಮರಸ್ಯ ಮತ್ತು ಭಿನ್ನತೆಗೆ ಕಾರಣವಾದ ಸಂಗತಿಗಳನ್ನು ಅವಲೋಕಿಸಿಕೊಳ್ಳುವ ಅಗತ್ಯ ಕಾಣುತ್ತದೆ” ಎಂದು ಸಾಹಿತಿ ಬಸವರಾಜ ಸೂಳಿಬಾವಿ ಹೇಳಿದರು

Advertisements

“1971ರಲ್ಲಿ ಜಾತಿ ವಿನಾಶ ಚಳವಳಿ ಸಮಾವೇಶ ನಡೆಯಿತು, ಧರ್ಮಲಿಂಗಂ, ನಂಜುಂಡಸ್ವಾಮಿ, ತೇಜಸ್ವಿ ಇದರಲ್ಲಿದ್ದರು. ಈ ಸಮಾವೇಶದ ನಂತರ ನಡೆದ ಬೂಸಾ ಚಳವಳಿ ರಾಜ್ಯದಲ್ಲಿ ದಲಿತ ಚಳವಳಿಯ ಪ್ರಜ್ಞೆ ಗಟ್ಟಿಗೊಳ್ಳಲು ಕಾರಣವಾಯಿತು. 1973-74ರಲ್ಲಿ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಚಳವಳಿಯ ಪ್ರೇರಣೆ ಬೆಳಗಾವಿ ಭಾಗದಲ್ಲಿ ಆಗಿ ದಲಿತ ಪ್ಯಾಂಥರ್ಸ್ ಚಟುವಟಿಕೆಗಳು ಆರಂಭಗೊಂಡಿದ್ದು ಇತಿಹಾಸ. ಆ ವರ್ಷವೇ ದಲಿತ ಸಂಘರ್ಷ ಸಮಿತಿ ನೋಂದಣಿಗೊಂಡಿತು. 76ರಲ್ಲಿ ದಲಿತ ಯುವಪಡೆ ಸಮಾವೇಶ, 77ರಲ್ಲಿ ದಲಿತ ಚಿಂತಕರ ಸಭೆಯಿಂದ ಸಂಘಟನಾತ್ಮಕ ರೂಪ ಪಡೆದ ದಲಿತ ಸಂಘರ್ಷ ಸಮಿತಿಯಿಂದ ದಲಿತ ಚಳವಳಿಗೆ ಬಂದ ವೇಗ ಕರ್ನಾಟಕದ ಜನಜೀವನದಲ್ಲಿ ದೊಡ್ಡ ಪಲ್ಲಟ ಮಾಡಿದ ಸಂಗತಿಗಳನ್ನು ಈ ಸಮಾವೇಶದಲ್ಲಿ ಹೊಸ ತಲೆಮಾರಿನ ದೃಷ್ಟಿಯಿಂದ ಮನನ ಮಾಡಿಕೊಳ್ಳುವ ಅಗತ್ಯ ಇದೆ” ಎಂದು ಹೇಳಿದರು

“ನಮ್ಮ ಚರಿತ್ರೆಯನ್ನು ನಾವೇ ಕಟ್ಟಿಕೊಳ್ಳಬೇಕಿದೆ. ನಮ್ಮ ಕರ್ನಾಟಕದಲ್ಲಿಯೇ ಈ ಚರಿತ್ರೆಯನ್ನು ನೋಡಬೇಕು. ರಾಜ್ಯದಲ್ಲಿ ಈ 50 ವರ್ಷಗಳಲ್ಲಿ ಯಾವ ಚಳವಳಿಗಳು ಎಲ್ಲಿಲ್ಲಿ ನಡೆದವು, ಅವುಗಳನ್ನು ಕಟ್ಟಿದವರಾರು? ಯಾವ ಕಾರಣಗಳಿಗೆ ಈ ಚಳವಳಿ ನಡೆದವು. ಅವುಗಳ ಪರಿಣಾಮ ಎಷ್ಟಾಯಿತು. ಈ ಸಂಗತಿಗಳ ಮೂಲಕವೇ ಚರಿತ್ರೆ ಕಟ್ಟುವ ಕೆಲಸ ಆಗಬೇಕಾಗಿದೆ. ಹಾಗೆ ಗದಗಿಗೂ ಕೂಡ ದಲಿತ ಚಳವಳಿಯ ಚರಿತ್ರೆ ಅಂಬೇಡ್ಕರ್ ಅವರ ಕಾಲದಿಂದಲೂ ಇದೆ. ಅದನ್ನು ಸರಿಯಾಗಿ ದಾಖಲಿಸುವ ಕೆಲಸಗಳು ಆಗಿಲ್ಲ. ಅವೆಲ್ಲ ಸಂಗತಿ ಶೋಧಿಸಿ, ರೂಪಿಸುವ ಮೂಲಕ ನಾವು ಚರಿತ್ರೆ ಕಟ್ಟುವ ಕೆಲಸ ಮಾಡಬೇಕಿದೆ ಎಂದೂ ಅವರು ಹೇಳಿದರು. ಈ ಸಮಾವೇಶದಿಂದ ಆ ಕೆಲಸಕ್ಕೊಂದು ಚಾಲನೆ ಕೊಡುವ ಕೆಲಸ ಆಗಬೇಕು” ಎಂದರು.

ಹೋರಾಟಗಾರ ಷರೀಫ್ ಬಿಲಿಯಲಿ ಮಾತನಾಡಿ, “ಹಿಂದೆಯೂ ಕೂಡ ಶೋಷಿತರ ಪರವಾಗಿ ಅನೇಕ ಹೋರಾಟಗಳು ನಡೆದಿದ್ದವು. 74ರ ನಂತರ ದಲಿತ ಸಂಘರ್ಷ ಸಮಿತಿ ಹುಟ್ಟಿಕೊಂಡಿತು. ಆ ಹಿನ್ನಲೆಯಲ್ಲಿ ಗದಗದಲ್ಲಿ ಅಂಬೇಡ್ಕರ ನಗರಗಳು ತಲೆ ಎತ್ತಿವೆ. ಹಾಗಾಗಿ ಈ ಸಮಾವೇಶದ ಮುಖ್ಯ ಗುರಿ ದಲಿತ ಚಳವಳಿ ಅವಲೋಕನ ಮುನ್ನೋಟ ಇರಲಿ” ಎಂದರು.

ಹಿರಿಯ ಸಾಹಿತಿ ಅರ್ಜುನ್ ಗೊಳಸಂಗಿ ಮಾತನಾಡಿ, “ಹಂಪಿ ವಿವಿಯು ದಲಿತ ಚಳವಳಿಗಳ ಕುರಿತು ಅಧ್ಯಯನ ನಡೆಸುತ್ತಿದೆ. ಹಾಗೆ ಮಹಾ ಪ್ರಬಂಧಗಳು ಬಂದಿವೆ. ಪ್ರತಿ ಜಿಲ್ಲೆಯಲ್ಲಿ ದಲಿತ ಚಳವಳಿಯ ಕುರಿತು, ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸಬೇಕು. ಡಿಎಸ್ಎಸ್ ಅವರನ್ನು ಕರೆದುಕೊಂಡು ಮಾಡಬೇಕೋ ಅಥವಾ ಸಾಹಿತಿಗಳನ್ನು ಕರೆದುಕೊಂಡು ಮಾಡಬೇಕೋ ಚರ್ಚಿಸೋಣ. ಹೊಸದಾಗಿ ಡಿಎಸ್ಎಸ್ ಕಟ್ಟುವ ಯುವಕರು ಯಾವುದೇ ಬಣವಿರಲಿ ಎಲ್ಲರೂ ಸೇರಬೇಕು. ದಲಿತ ಚಳವಳಿಗಳು ಕರ್ನಾಟಕಕ್ಕೆ ಸಂಬಂಧಿಸಿದ್ದು, ಹಿನ್ನಲೆಯಲ್ಲಿ ವಿಭಾಗ ಮಟ್ಟದಲ್ಲಿ ಸಭೆಗಳನ್ನು ಮಾಡಿ ಚರ್ಚಿಸಬೇಕು. ಜಿಲ್ಲೆಗಳಲ್ಲಿ ಕಾರ್ಯಕ್ರಮ ರೂಪಿಸುವುದಾಗಬೇಕು. ಆಗ ಈ ಸಮಾವೇಶ ಯಶಸ್ವಿಯಾಗಲು ಸಾಧ್ಯ” ಎಂದು ಹೇಳಿದರು.

ಹೋರಾಟಗಾರ ರತ್ನಾಕರ ಮಾತನಾಡಿ, “ಬಿ ಕೃಷ್ಣಪ್ಪ ಅವರು ಗದಗದಲ್ಲಿ ಕೊನೆಯುಸಿರೆಳೆದರು. ಆಗ ಅವರು ವೈಯಕ್ತಿಕ ಕೆಲಸಕ್ಕಾಗಿ ಬಂದಿರಲಿಲ್ಲ. ಚಳವಳಿಗಾಗಿಯೇ ಬಂದಿದ್ದ ವೇಳೆ ಇಲ್ಲಿಯೇ ಕೊನೆಯುಸಿರೆಳೆದರು. ಹಾಗಾಗಿ ಕೃಷ್ಣಪ್ಪ ಅವರ ಚಳವಳಿಯ ನೆನಪಿನ ಭಾಗವಾಗಿ ಈ ಸಮಾವೇಶ ನಡೆದು ಚಳವಳಿಗೆ ಹೊಸರೂಪ ಬರುವಂತಾಗಲಿ. ಯುವಕರು ದೊಡ್ಡ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಜೊತೆಯಾಗಿಸಬೇಕು. ಈ ಮೂಲಕ ಅವರನ್ನು ಚಳವಳಿ ಕಟ್ಟೋಕೆ ಹಾಗೂ ಸಮಾವೇಶಕ್ಕೆ ಹೇಗೆ ಒಗ್ಗೂಡಿಸಬೇಕೆಂದು ಚರ್ಚಿಸಬೇಕು” ಎಂದು ಹೇಳಿದರು.

ಸಭೆಯಲ್ಲಿ ಅನೇಕ ಸಂಗತಿಗಳನ್ನು ಚರ್ಚಿಸಿದ ನಂತರದಲ್ಲಿ ಗದಗ ನಗರದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನವೆಂಬರ್ ತಿಂಗಳು 23, 24ರಂದು ದಲಿತ ಚಳುವಳಿ-50ರ ಸಮಾವೇಶವನ್ನು ನಡೆಸಲು ನಿರ್ಧರಿಸಲಾಯಿತು.

ಪ್ರಕಾಶ್ ಅಂಬೇಡ್ಕರ್, ದೇವನೂರು ಮಹಾದೇವ, ಕಂಚ ಐಲಯ್ಯ, ಸುಖದೇವ ಥೋರಾಟ, ಜಿಗ್ನೇಶ್ ಮೇವಾನಿ, ಗೋಪಾಲ ಗುರು, ಚಂದ್ರಶೇಖರ ರಾವಣ, ಇಂದಿರಾ ಕೃಷ್ಣಪ್ಪ, ರಮಾಬಾಯಿ ಆಂಬೇಡ್ಕರ್, ಹಗನವಾಡಿ ರುದ್ರಪ್ಪ, ಜ್ಞಾನ ಪ್ರಕಾಶ ಸ್ವಾಮಿ ಚೆನ್ನಬಸವ ಪ್ರಭುಸ್ವಾಮಿ, ನಿಜಗುಣನಂದ ಸ್ವಾಮಿ, ಡಿಎಸ್‌ಎಸ್ ಸಂಘಟನೆಗಳ ರಾಜ್ಯ ಸಂಚಾಲಕ ದಲಿತ ಚಳುವಳಿ 50: ಸಮಾವೇಶದಲ್ಲಿ ಉದ್ಘಾಟನಾಗೋಷ್ಟಿಗೆ ಕರೆಯಲು ಮೇಲಿನ ಹೆಸರುಗಳು ಕೇಳಿ ಬಂದವು

ದಲಿತ ಚಳುವಳಿ 50: ಸಮಾವೇಶದ ಕಾರ್ಯಕ್ರಮ ರೂಪಿಸಲು ರಚಿಸಲಾದ ಕೋರ್ ಕಮಿಟಿಯಲ್ಲಿ, ಇಂದಿರಾ ಕೃಷ್ಣಪ್ಪ, ಬಿ ಎಮ್ ಪುಟ್ಟಯ್ಯ, ಆರ್ ಮಾನಸಯ್ಯ, ಹುಲಿಕುಂಟೆಮೂರ್ತಿ, ಅನಸೂಯ ಕಾಂಬಳೆ, ಗುರುಪ್ರಸಾದ್ ಕೆರೆಗೋಡ, ಇಂದೂಧರ್ ಹೊನ್ನಾಪುರ, ಬಿ ಶ್ರೀನಿವಾಸ, ಅನಿಲ ಹೊಸಮನಿ, ಮಾವಳ್ಳಿ ಶಂಕರ್, ಕೆ ರಾಮಯ್ಯ ಅವರ ಒಪ್ಪಿಗೆ ಪಡೆದು ಸೇರಿಸಬೇಕು ಎಂದಾಯಿತು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಭದ್ರಾ ಮೇಲ್ದಂಡೆ ಕಾಮಗಾರಿಗೆ ಶೀಘ್ರ ₹5,300 ಕೋಟಿ ಅನುದಾನ ಬಿಡುಗಡೆ: ಸಂಸದ ಗೋವಿಂದ ಎಂ ಕಾರಜೋಳ

ಸಭೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ಹಾಗೂ ಬಾಗಲಕೋಟೆಯಿಂದ ಸದಾಶಿವ ಸಿಂಗೆ,‌ ರೋಣ ತಾಲೂಕಿನ ದಲಿತ ಮುಖಂಡರುಗಳಾದ ಜೋಗಣ್ಣವರ, ಪ್ರಕಾಶ ಹೊಸಳ್ಳಿ, ವೀರಪ್ಪ ತೆಗ್ಗಿನಮನಿ, ಹನುಮಂತ ಕಿನ್ನಾಳ, ರಾಮಚಂದ್ರ ಹಂಸನೂರ, ಆನಂದ ಶಿಂಗಾಡಿ, ಯಲ್ಲಪ್ಪ ರಾಮಗಿರಿ, ರಾಮಕೃಷ್ಣ, ಕೊರವರ, ಮುತ್ತು ಚವಡಣ್ಣವರ, ನಾಗರಾಜ್ ಗೋಕಾವಿ, ಎಚ್ ಎಸ್ ರಾಮನಗೌಡ, ವಾಸಂತಿ ಮಲ್ಲಾಪುರ, ನಾಗಮ್ಮ ಹಾಲಿನವರ, ರಮೇಶ ಕೋಳೂರ, ಮಂಜುನಾಥ ಮುಳಗುಂದ, ದೇವರಾಜ್ ಕಟ್ಟಿಮನಿ, ಹುಚ್ಚಪ್ಪ ಚಲವಾದಿ, ಸತೀಶ್ ಸತ್ಯಮ್ಮನವರ, ರವಿ ಚಲವಾದಿ, ಶಿವಾನಂದ ತಮ್ಮಣ್ಣವರ, ಅನಿಲ್ ಕಾಳೆ, ಪರಶು ಕಾಳೆ, ಮಂಜುನಾಥ ಹಗೆದಾಳ, ರವಿ ಕಾಳೆ ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

Download Eedina App Android / iOS

X