ತೊಟ್ಟಿ ನನ್ನ ಮಗನ ಮಾತು ಕೇಳಿ ನಿಂತಿದ್ದೀಯಾ? ಮೊದಲು ನಾಮಪತ್ರ ವಾಪಸ್‌ ಪಡಿ: ಸೋಮಣ್ಣ ಆಡಿಯೊ ವೈರಲ್‌

Date:

Advertisements
  • ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಸ್ವಾಮಿಗೆ ಕರೆ ಮಾಡಿದ್ರಾ ಸೋಮಣ್ಣ?
  • ಸೋಮಣ್ಣ ಅವರೇ ಕರೆ ಮಾಡಿದ್ದು ಎಂಬುದನ್ನು ದೃಢಪಡಿಸಿದ ಮಲ್ಲಿಕಾರ್ಜುನ್ ಸ್ವಾಮಿ

ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಚಿವ ವಿ ಸೋಮಣ್ಣ ಮ್ಯಾಚ್ ಫಿಕ್ಸಿಂಗ್‌ಗೆ ಮುಂದಾದರೇ ಎನ್ನುವ ಅನುಮಾನ ಹುಟ್ಟಿಕೊಂಡಿದೆ.

ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಸ್ವಾಮಿ ಅಲಿಯಾಸ್ ಆಲೂರು ಮಲ್ಲು ಜೊತೆ ವಿ ಸೋಮಣ್ಣ ಕಾಲ್ ಮಾಡಿದ್ದಾರೆ ಎನ್ನಲಾದ ಆಡಿಯೋ  ವೈರಲ್ ಆಗುತ್ತಿದ್ದು, ಆಡಿಯೋದಲ್ಲಿ “ನಾಮಪತ್ರ ವಾಪಸ್ ತಗೋ, ನಿನಗೆ ಅನುಕೂಲ ಮಾಡಿಕೊಡ್ತೀನಿ” ಎಂದು ಹೇಳಲಾಗಿದೆ.

“ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನಿನಗೆ ಗೂಟದ ಕಾರು ಕೊಡ್ತೀವಿ. ಮೊದಲು ವಾಪಸ್ ತಗೋ. ತೊಟ್ಟಿ ನನ್ನ ಮಗನ ಮಾತು ಕೇಳಿ ನಿಂತಿದ್ದೀಯಾ? ಮೊದಲು ತೆಗಿ, ಆಮೇಲೆ ಎಲ್ಲ ಮಾತನಾಡೋಣ. ನಿನ್ನ ಬದುಕಿಗೆ ಏನು ಬೇಕೋ ಅದು ಮಾಡುವೆ. ನಿನ್ನ ಹಿತ ಕಾಪಾಡುತ್ತೇನೆ” ಅಂತ ಆಡಿಯೋದಲ್ಲಿ ಇದೆ.

Advertisements

ಸೋಮಣ್ಣ ಅವರೇ ಕರೆ ಮಾಡಿದ್ದರು ಎನ್ನುವುದನ್ನು ಆಲೂರು ಮಲ್ಲು ಕೂಡ ದೃಢಪಡಿಸಿದ್ದಾರೆ.

ವೈರಲ್ ಆದ ಆಡಿಯೋದ ಸಂಭಾಷಣೆ ಇಲ್ಲಿದೆ

ಆಲೂರು ಮಲ್ಲು: ಅಣ್ಣಾ…ನಮಸ್ಕಾರ

ಸೋಮಣ್ಣ: ಮೊದಲು ತಕೊಳ್ಳಯ್ಯ, ಆಮೇಲೆ ಏನು ಬೇಕಾದ್ರು ಮಾಡ್ತೀನಿ.

ಆಲೂರು ಮಲ್ಲು: ಅಣ್ಣಾ ತೆಗೆಯೋಕೆ ಆಗೋದಿಲ್ಲ ಅಣ್ಣಾ, ನೀವು ಹೇಳಿದಂಗೆ ನಾನು ಇರ್ತೀನಿ

ಸೋಮಣ್ಣ: ಇದೆಲ್ಲಾ ಕಥೆ ಬೇಡ.. ಹೇಳೋತನಕ ಕೇಳು.. ನಾನು ಮಾತಾಡೋದನ್ನ ಕೇಳು ಇಲ್ಲಿ

ಆಲೂರು ಮಲ್ಲು: ಅಣ್ಣಾ…

ಸೋಮಣ್ಣ: ನೀನು ನನಗೊಬ್ಬ ಹಳೇ ಸ್ನೇಹಿತ.. ಅವನ್ಯಾವನೋ ತೊಟ್ಟಿ ನನ್ ಮಗನ್ ಮಾತು ಕೇಳೋದಕ್ಕೆ ಹೋಗಬೇಡ.

ಆಲೂರು ಮಲ್ಲು: ಇಲ್ಲಣ್ಣ ಇಲ್ಲಣ್ಣ..

ಸೋಮಣ್ಣ: ನಾನು ಹೇಳೋತನಕ ಕೇಳೋ ಇಲ್ಲಿ.. ನಿನಗೆ ಬದುಕೋದಕ್ಕೆ ಏನೆಲ್ಲಾ ಬೇಕು ಎಲ್ಲ ಮಾಡ್ತೀನಿ.. ಅಣ್ಣ ಇದ್ದಾರೆ.. ಮೊದಲು ವಾಪಾಸ್ ತಕೋ ಆಮೇಲೆ ನಾನು ಮಾತಾಡ್ತೀನಿ.. ಮೊದಲು ವಾಪಾಸ್ ತೊಕೋ ನನ್ ಮಾತು ಕೇಳು.. ನಿನ್ನ ಹಿತ ಕಾಪಾಡೋದು ನನ್ ಜವಾಬ್ದಾರಿ.. ಮರಂಕಲ್ಲು.. ನಾನು.. ಸುದೀಪಣ್ಣ ಮೂರು ಜನ ಇರ್ತೀವಿ… ನಿನ್ನ ತಕ್ಕೊಂಡು ಎಲ್ಲಿ ಬಿಡಬೇಕೋ.. ಮದರ್ ಪ್ರಾಮಿಸ್… ದೇವಸ್ಥಾನದಲ್ಲಿ ಇದ್ದೀನಿ.. ಉಪ್ಪಾರ ದೇವಸ್ಥಾನದಲ್ಲಿ ಇದ್ದೀನಿ… ಮೊದಲು ನಾನು ಹೇಳೋದ್ನ ಮಾಡು.. ನಿನ್ ಕೈ ಮುಗೀತೀನಿ…

ಆಲೂರು ಮಲ್ಲು: ಸರಿ ಅಣ್ಣಾ.. ಸರಿ ಅಣ್ಣಾ… ಮಾತಾಡ್ತೀನಿ ಬಿಡಣ್ಣ.. ಮಾತಾಡ್ತೀನಿ…

ಸೋಮಣ್ಣ: ಇರೋದು ಇನ್ನು ಒಂದು ಗಂಟೆ… ಅದ್ಯಾವನೋ ಪೋಲಿ ನನ್ನ ಮಗನ ಮಾತು ಕೇಳಿಕೊಂಡು..

ಆಲೂರು ಮಲ್ಲು: ಯಾರ ಮಾತು ಕೇಳಿಲ್ಲ ಅಣ್ಣ… ನೀವು ಮುಖ್ಯಮಂತ್ರಿ ಆಗಬೇಕು ಅಂತ ನಾನು…

ಸೋಮಣ್ಣ: ಸರ್ಕಾರ ಬರುತ್ತೆ… ಒಂದು ಗೂಟದ ಕಾರು ಬೇಕು… ಮುಚ್ಕೊಂಡು ವಾಪಸ್ ತಕೋ.. ನಾನು ದೇವರ ಮುಂದೆ ನಿಂತ್ಕೊಂಡಿದ್ದೀನಿ…

ಆಲೂರು ಮಲ್ಲು: ಆಯ್ತಣ್ಣ… ಆಯ್ತಣ್ಣ…

ಸೋಮಣ್ಣ: ಉಪ್ಪಾರ ದೇವರ ಮುಂದೆ ನಿಂತಿದ್ದೀನಿ… ತಕೋ ಮೊದಲು… ಯಾರನ್ನೂ ಕೇಳೋದಕ್ಕೆ ಹೋಗಬೇಡ.. ಜಿ.ಟಿ. ದೇವೇಗೌಡ ನಾನು ಫ್ರೆಂಡ್ಸ್… ನೀನು ವಾಪಸ್ ತಕೋ…

ಹೀಗೆ ವೈರಲ್ ಆದ ಆಡಿಯೋದಲ್ಲಿ ಸಂಭಾಷಣೆ ನಡೆಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಾಮರಾಜನಗರ | ಎಸ್ಸಿಪಿ, ಟಿಎಸ್ಪಿ ಯೋಜನೆ ಫಲಾನುಭವಿಗಳ ಆಯ್ಕೆ ಪಾರದರ್ಶಕತೆಗೆ ಸೂಚನೆ

ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆಯಡಿ...

ಗುಂಡ್ಲುಪೇಟೆ | ಆನೆ ದಾಳಿಯಿಂದ ಬದುಕಿ ಬಂದವನಿಗೆ ಅರಣ್ಯ ಇಲಾಖೆಯಿಂದ ಭಾರೀ ದಂಡ

ಬಂಡೀಪುರ ಅರಣ್ಯದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ, ಆನೆದ ದಾಳಿಗೆ ತುತ್ತಾಗಿ, ಬದುಕಿ...

ಚಾಮರಾಜನಗರ | ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷಾ ಕಾರ್ಯಕ್ಕೆ ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ...

ಚಾಮರಾಜನಗರ | ಸರ್ವರ ಸಹಕಾರದೊಂದಿಗೆ ಸ್ವಾತಂತ್ರ್ಯ ದಿನಾಚರಣೆ : ಟಿ ಜವರೇಗೌಡ

ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರ ದಿನಾಚರಣೆ ಸಂಬಂಧ ವಿವಿಧ ಸಂಘಟನೆಗಳ...

Download Eedina App Android / iOS

X