ಅದಾನಿ ಕಂಪನಿಗಳ ಬಗ್ಗೆ ಕಳೆದ ವರ್ಷ ಬಿಡುಗಡೆ ಮಾಡಲಾಗಿದ್ದ ಸಂಶೋಧನಾ ವರದಿಯ ಬಗ್ಗೆ ಭಾರತದ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ(ಸೆಬಿ) ನೀಡಿರುವ ಶೋಕಾಸ್ ನೋಟಿಸ್ಗೆ ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡನ್ಬರ್ಗ್ ಪ್ರತಿಕ್ರಿಯೆ ನೀಡಿದೆ.
“ಅದಾನಿ ಕುರಿತ ನಮ್ಮ ಸಂಶೋಧನೆ ಬಗ್ಗೆ ಅತ್ಯಂತ ಹೆಮ್ಮೆಯಿದೆ” ಎಂದು ಸೆಬಿಗೆ ಹಿಂಡನ್ಬರ್ಗ್ ಪ್ರತಿಕ್ರಿಯೆ ನೀಡಿದೆ.
2023ರ ಜನವರಿಯಲ್ಲಿ ಅದಾನಿ ಸಮೂಹ ಕಂಪನಿಗಳ ಬಗ್ಗೆ ಸಂಶೋಧವಾ ವರದಿ ಬಿಡುಗಡೆ ಮಾಡಿದ್ದ ಹಿಂಡನ್ಬರ್ಗ್, ಅದಾನಿ ಕಂಪನಿಯು ಷೇರು ಮಾರುಕಟ್ಟೆಯನ್ನು ತಿರುಚಿದೆ ಹಾಗೂ ಲೆಕ್ಕಪತ್ರಗಳನ್ನು ವಂಚಿಸಿದೆ ಎಂದು ತಿಳಿಸಿತ್ತು.
ವರದಿ ಬಿಡುಗಡೆಯಾದ ನಂತರ ಆರೋಪಗಳನ್ನು ನಿರಾಕರಿಸಿದರೂ ಸಹ ಅದಾನಿ ಸಮೂಹದ ಷೇರು ಮಾರುಕಟ್ಟೆ 150 ಬಿಲಿಯನ್ ಡಾಲರ್ವರೆಗೆ ಕುಸಿದಿತ್ತು. ನಂತರ ಅದಾನಿ ಸಂಸ್ಥೆಗಳ ವಿರುದ್ಧ ಕೈಗೊಳ್ಳಲಾಗಿದ್ದ ತನಿಖೆಯು ಆಧಾರರಹಿತ ಎಂದು ಹೇಳಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಮಾನನಷ್ಟ ಮೊಕದ್ದಮೆ | ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ಗೆ 5 ತಿಂಗಳ ಜೈಲು ಶಿಕ್ಷೆ
46 ಪುಟಗಳ ಶೋಕಾಸ್ ನೋಟಿಸ್ಗೆ ಬ್ಲಾಗ್ನಲ್ಲಿ ಪ್ರತಿಕ್ರಿಯೆ ನೀಡಿರುವ ಹಿಂಡನ್ಬರ್ಗ್ ಇದೊಂದು ಅಸಂಬದ್ಧ ಎಂದು ತಿಳಿಸಿದೆ.
“ಪೂರ್ವ ನಿರ್ದೇಶಿತ ಉದ್ದೇಶವನ್ನು ಪೂರೈಸಲು ರೂಪಿಸಿರುವ ಇದನ್ನು ನಾವು ಅಸಂಬದ್ಧೆ ಎಂದು ಭಾವಿಸುತ್ತೇವೆ. ಭ್ರಷ್ಟಾಚಾರವನ್ನು ಬಯಲಿಗೆಳೆಯುವವರನ್ನು ಬೆದರಿಸಿ ಮೌನಗೊಳಿಸುವ ಪ್ರಯತ್ನ ಇದಾಗಿದೆ. ಭಾರತದ ಅತ್ಯಂತ ಪ್ರಬಲ ಸಂಸ್ಥೆಯೊಂದು ವಂಚನೆಯಸಗಿದೆ” ಎಂದು ಹಿಂಡನ್ಬರ್ಗ್ ಆರೋಪಿಸಿದೆ.
“ಇಂದಿಗೂ ಕೂಡ ಅದಾನಿ ಸಂಸ್ಥೆ ನಮ್ಮ ಸಂಸ್ಥೆ ಕೈಗೊಳ್ಳಲಾದ ವರದಿ ಅಥವಾ ಹಲವಾರು ಮಾಧ್ಯಮ ತನಿಖೆಗಳ ಬಗ್ಗೆ ನೇರವಾಗಿ ಸ್ಪಷ್ಟನೆ ನೀಡಿಲ್ಲ ಬದಲಿಗೆ ಆಧಾರರಹಿತ, ದಾರಿ ತಪ್ಪಿಸುವ ನಿರಾಕರಣೆ ನೀಡುತ್ತ ಬಂದಿದೆ” ಎಂದು ಹಿಂಡನ್ಬರ್ಗ್ ತಿಳಿಸಿದೆ.
