ಗದಗ | ಕೃಷಿ ಮಹಿಳೆಯರಿಗೆ ಉದ್ಯೋಗವಾದ ಬೇವಿನ ಬೀಜ

Date:

ಗದಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮಹಿಳೆಯರು ಮಳೆಗಾಲದಲ್ಲಿ ಕೂಲಿ ಕೆಲಸ ಕಡಿಮೆಯಾದಾಗ ನೈಸರ್ಗಿಕವಾಗಿ ಬೆಳೆಯುವ ಬೇವಿನ ಬೀಜ ಹೆಕ್ಕುವುದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿರುವುದು ವಿಶೇಷ. ಹೊಲದ ಬದುವುಗಳಲ್ಲಿ, ಕಿನಾಲು ದಂಡೆಗಳ ಮೇಲೆ, ಅರಣ್ಯ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೇವಿನ ಮರಗಳು ಬೆಳೆದಿರುತ್ತವೆ. ಯುಗಾದಿ ಸಮಯದಲ್ಲಿ ಬೇವಿನ ಮರಗಳು ಹೂವುಗಳನ್ನು ಬಿಟ್ಟು, ಜೂನ್ ಜುಲೈ ತಿಂಗಳಲ್ಲಿ ಹಣ್ಣಾಗುತ್ತವೆ. ಹಣ್ಣುಗಳನ್ನು ಪಕ್ಷಿಗಳು ತಿಂದು, ಬರಿ ಬೀಜಗಳು ಗಿಡಗಳಲ್ಲಿ ಉಳಿದಿರುತ್ತವೆ.  ಬೀಜಗಳು ತೊಟ್ಟು ಉದುರಿ ಕೆಳಗೆ ಬೀಳುತ್ತವೆ.

- Advertisement -

ಇದೇ ಜೂನ್ ಸಮಯದಲ್ಲಿ ಮಳೆಗಾಲ ಆರಂಭವಾಗಿ ಮುಂಗಾರು ಬಿತ್ತನೆ ಕಾರ್ಯ ಆಗತಾನೆ ಆರಂಭವಾಗಿರುತ್ತದೆ. ಈ ಸಂದರ್ಭದಲ್ಲಿ ಕೃಷಿ ಮಹಿಳೆಯರಿಗೆ ಹೊಲಗಳಲ್ಲ ಕೃಷಿ ಕೆಲಸ ಕಡಿಮೆ ಇರುವುದರಿಂದ, ಹೊಲದ ಬದುವುಗಳಲ್ಲಿ, ಕೆರೆಯ ದಂಡೆಗಳ ಮೇಲೆ ಬೆಳೆದಿರುವ ಬೇವಿನ ಮರಗಳನ್ನು ಹುಡುಕಿ ಬೀಜಗಳನ್ನು ಒಂದೊಂದಾಗಿ ಆರಿಸಿ, ಸಂಗ್ರಹಿಸಿ, ಅವುಗಳನ್ನು ಮಾರಾಟ ಮಾಡಿ ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಆರು ಡಂಬಿ ಸೇರಿ ಒಂದು ಚೀಲಕ್ಕೆ ಬೇವಿನ ಬೀಜಕ್ಕೆ 650 ರೂ.ಗಳಿಂದ 700 ರೂ. ಇರುತ್ತದೆ. ಕೃಷಿ ಮಹಿಳೆಯರು ಅಡವಿಗಳಲ್ಲಿ ಅಲೆದಾಡಿ ದಿನಕ್ಕೆ ನಾಲ್ಕರಿಂದ ಐದು ಡಂಬಿಗಳಷ್ಟು ಬೀಜಗಳನ್ನು ಸಂಗ್ರಹಿಸುತ್ತಾರೆ. ಕೃಷಿ ಮಹಿಳೆಯರು ದಿನಕ್ಕೆ ನಾಲ್ಕುನೂರರಿಂದ ಐದುನೂರು ರೂಪಾಯಿಗಳಷ್ಟು ಆದಾಯ ಗಳಿಸುತ್ತಾರೆ. ಹೀಗೆ ಹದಿನೈದರಿಂದ ಒಂದು ತಿಂಗಳುಗಳ ಕಾಲ ಬೇವಿನ ಬೀಜ ಹೆಕ್ಕುವ ಉದ್ಯೋಗವನ್ನು ಅವಲಂಬಿಸಿರುತ್ತಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಎಪಿಎಂಸಿಯಲ್ಲಿ ಬೇವಿನ ಬೀಜದ ದೊಡ್ಡ ಮಾರುಕಟ್ಟೆ ಇದೆ. ಈ ಮಾರುಕಟ್ಟೆಯ ಖರೀದಿದಾರರು, ರೋಣ, ಗಜೇಂದ್ರಗಡ, ಹುನಗುಂದ, ಲಿಂಗಸೂರು, ಯಲಬುರ್ಗಾ ತಾಲೂಕಿನ ಹಳ್ಳಿ ಹಳ್ಳಿಗಳಿಗೆ ಹೋಗಿ, ಕೃಷಿ ಮಹಿಳೆಯರು ಸಂಗ್ರಹಿಸಿದ ಬೀಜಗಳನ್ನು ಖರೀದಿ ಮಾಡ್ಕೊಂಡು ಹೋಗುತ್ತಾರೆ.

ಬೇವಿನ ಬೀಜದಿಂದ ಆದಾಯ ಕಳಿಸುವ ಬಗ್ಗೆ ಈದಿನ.ಕಾಮ್‌ ಜೊತೆ ಮಾತನಾಡಿದ ಕುಷ್ಟಗಿ ತಾಲೂಕಿನ ರೈತ ವೀರೇಶ್ ಕಟ್ಟಿಮನಿ, “ಬೇವಿನ ಬೀಜಗಳಿಂದ ಕೂದಲು ಎಣ್ಣೆ, ಔಷಧಿಗಳನ್ನು ತಯಾರಿಸುತ್ತಾರೆ. ಬೀಜದ ಹಿಂಡಿಯನ್ನು ಮರ, ಗಿಡ, ಬೆಳೆಗಳ ಬುಡಕ್ಕೆ ಹಾಕಿದರೆ ಹೆಚ್ಚು ಆರೋಗ್ಯವಾಗಿ, ಒಳ್ಳೆಯ ರೀತಿಯಲ್ಲಿ ಬೆಳೆಯುತ್ತವೆ” ಎಂದು ಹೇಳಿದರು.

ಈದಿನ.ಕಾಮ್ ಜೊತೆಗೆ ಮಾತನಾಡಿದ ರೋಣ ತಾಲೂಕಿನ ಚಿಕ್ಕಮನ್ನೂರು ಗ್ರಾಮದ ಕೃಷಿ ಮಹಿಳೆ ಮುತ್ತವ್ವ, “ಮುಂಜಾನೆಯಿಂದ ಸಂಜೆವರೆಗೂ ಆರಿಸಿದ್ರು ಮೂರರಿಂದ ನಾಲ್ಕು ಡಬ್ಬಿ ಅರಿಸ್ತೀವಿ. ದಿನಕ್ಕೆ ನಾಲ್ಕುನೂರು ದುಡಿತೀವಿ” ಎಂದು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಧಿಕಾರಿಗಳ ನಿರ್ಲಕ್ಷ್ಯದಿಂದ ದೌರ್ಜನ್ಯಗಳಿಗೆ ಕಡಿವಾಣ ಬೀಳುತ್ತಿಲ್ಲ : ಸಂಜೀವ ಬಳ್ಕೂರು

ರಾಯಚೂರು ಜಿಲ್ಲೆಯಲ್ಲಿ ದಲಿತ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ ಹಾಗೂ...

ಗದಗ | ಅಲ್ಪಸಂಖ್ಯಾತರ ಅಭಿವೃಧ್ದಿ ನಿಗಮದಲ್ಲಿ ಮಧ್ಯವರ್ತಿಗಳ ಹಾವಳಿ: ಕಡಿವಾಣಕ್ಕೆ ಆಗ್ರಹ

ಗದಗ ಜಿಲ್ಲೆಯ ಬಡ ಅಲ್ಪಸಂಖ್ಯಾತರ ಕುಟುಂಬಗಳಿಗೆ ಸರ್ಕಾರದ ಯೋಜನೆಗಳು ಪ್ರಮಾಣಿಕವಾಗಿ ದೊರಕಿಸಿ...

ಕೋಲಾರ | ವಿದ್ಯಾರ್ಥಿನಿಯ ನಾಲ್ಕು ವರ್ಷದ ವಿದ್ಯಾಭ್ಯಾಸಕ್ಕೆ ಎಲ್.ಜಿ. ಫೌಂಡೇಶನ್ ನೆರವು

ವಕ್ಕಲೇರಿ ಗ್ರಾಮದ ಕೂಲಿ ಕಾರ್ಮಿಕ ನಾಗರಾಜ್ ಅವರ ಪುತ್ರಿಯ ನಾಲ್ಕು ವರ್ಷದ...