ನಿರಂತರ ಮಳೆಯಿಂದಾಗಿ ಎರಡು ಪ್ರಮುಖ ನದಿಗಳ ಅಡೆಕಟ್ಟುಗಳು ಒಡೆದಿದ್ದು, ಮಣಿಪುರದ ಇಂಫಾಲ್ ಪಶ್ಚಿಮ ಮತ್ತು ಇಂಫಾಲ್ ಪೂರ್ವ ಜಿಲ್ಲೆಗಳಲ್ಲಿ ಹಲವಾರು ಸ್ಥಳಗಳಲ್ಲಿ ಪ್ರವಾಹ ಉಂಟಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಎಲ್ಲಾ ಸರ್ಕಾರಿ ಕಚೇರಿಗಳಿಗೆ ಬುಧವಾರ ರಜೆ ಘೋಷಿಸಿದ್ದು, ಶಾಲಾ ಕಾಲೇಜುಗಳಿಗೂ ಕೂಡಾ ರಜೆ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇಂಫಾಲ್ ಪಶ್ಚಿಮದ ಸಿಂಗ್ಜಮೇಯ್ ಓಯನಾಮ್ ಥಿಂಗೆಲ್‌ನಲ್ಲಿ ಇಂಫಾಲ್ ನದಿ ಮತ್ತು ಕೊಂಗ್ಬಾ ಇರಾಂಗ್‌ನಲ್ಲಿ, ಇಂಫಾಲ್ ಪೂರ್ವದ ಕೀರಾವೊದ ಕೆಲವು ಭಾಗಗಳಲ್ಲಿ ಕೊಂಗ್ಬಾ ನದಿ ಅಣೆಕಟ್ಟಿನಿಂದ ಹೊರ ಹರಿಯುತ್ತಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ: ‘ಮಣಿಪುರಕ್ಕೆ ನ್ಯಾಯ ಒದಗಿಸಿ’ ಎಂದು ವಿಪಕ್ಷಗಳಿಂದ ಧರಣಿ
ಇನ್ನು ಇರಿಲ್ ನದಿಯು ಸಾವೊಂಬಂಗ್ ಮತ್ತು ಇಂಫಾಲ್ ಪೂರ್ವದ ಕ್ಷೇತ್ರೀಗಾವೊ ಭಾಗಗಳಲ್ಲಿ ಉಕ್ಕಿ ಹರಿದಿದೆ.
ದೊಡ್ಡ ಪ್ರಮಾಣದಲ್ಲಿ ನದಿಯ ನೀರು ವಸತಿ ಪ್ರದೇಶಗಳಿಗೆ ಪ್ರವೇಶಿಸಿದೆ. ಭಾರತ-ಮಯನ್ಮಾರ್ ರಸ್ತೆಯ 3-ಕಿಮೀ ವ್ಯಾಪ್ತಿಯಲ್ಲೂ ಸಹ ಪ್ರವಾಹ ಉಂಟಾಗಿದೆ. ಸುಮಾರು 1,000ಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ. ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ.
ಈ ನಡುವೆ ಮಂಗಳವಾರ ಮಧ್ಯಾಹ್ನ ಸೇನಾಪತಿ ನದಿಗೆ ಬಿದ್ದ 25 ವರ್ಷದ ಯುವಕನ ಮೃತದೇಹವನ್ನು ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ತಂಡವು ಸ್ಥಳೀಯರ ಸಹಾಯದಿಂದ ಹೊರತೆಗೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Distributing emergency food items to the volunteers who are trying to build bamboo walls at the broken floods bank of Imphal River last night. Manipur is under water twice in the last 20 days. Pray for Manipur! 🙏 pic.twitter.com/c6JmCdHThE
— Licypriya Kangujam (@LicypriyaK) July 3, 2024