ಇಬ್ಬರು ಯುವಕರಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪದ ಮೇಲೆ ಬಂಧಿತನಾಗಿರುವ ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಗೆ ಬೆಂಗಳೂರಿನ ಸಷೆನ್ಸ್ ನ್ಯಾಯಾಲಯ ಜುಲೈ 18ರವರೆಗೂ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಪ್ರಕರಣಗಳಿಗೆ ಸಂಬಂಧಿಸಿದಂತೆ ಜುಲೈ 1ರಂದು 42ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟೆನ್ ಮ್ಯಾಜಿಸ್ಟ್ರೇಟ್ ಅವರು ಜುಲೈ 3ರವರೆಗೂ ಸಿಐಡಿ ಕಸ್ಟಡಿಗೆ ನೀಡಿದ್ದರು.
ಸಿಐಡಿ ತಂಡ ಕಳೆದ ವಾರ ಈತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿತ್ತು. ಈತನ ಡಿಎನ್‌ಎ ಮಾದರಿಗಳನ್ನು ಕೂಡ ಸಂಗ್ರಹಿಸಲಾಗಿತ್ತು. ಸೂರಜ್‌ನನ್ನು ಜೂನ್ 23ರಂದು ಬಂಧಿಸಲಾಗಿದ್ದು,ಪುರುಷತ್ವ ಪರೀಕ್ಷೆಗೊಳಪಡಿಸಲಾಗಿದೆ.
ಅದೇ ರೀತಿ ಸಿಐಡಿ ತಂಡ ಶಾಸಕನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗ ಇಬ್ಬರು ಸಂತ್ರಸ್ತರ ಡಿಎನ್‌ಎ ಮಾದರಿಯನ್ನು ಕೂಡ ಸಂಗ್ರಹಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗಾಯ ನೆಕ್ಕಿಕೊಳ್ಳುತ್ತಿರುವ ಮೋದಿ ಎಚ್ಚರಿಕೆ- ಹೊಸ ದಮನ ದಾಳಿ ದಸ್ತಗಿರಿಗಳ ಮುನ್ಸೂಚನೆ
ಮೊದಲ ಪ್ರಕರಣದಲ್ಲಿ, ಹಾಸನ ಜಿಲ್ಲೆಯ ಯುವಕರೊಬ್ಬರು ಸೂರಜ್ ರೇವಣ್ಣ ಜೂನ್ 16ರಂದು ಫಾರ್ಮ್‌ಹೌಸ್‌ನಲ್ಲಿ ತನ್ನನ್ನು ಲೈಂಗಿಕವಾಗಿ ಕಿರುಕುಳ ನೀಡಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಿದ್ದಾರೆ.
ಎರಡನೇ ಪ್ರಕರಣದಲ್ಲಿ,36 ವರ್ಷದ ಯುವಕರೊಬ್ಬರು ದೂರು ನೀಡಿದ್ದು, ಕೋವಿಡ್ ಸಾಂಕ್ರಾಮಿಕ ಕಾಲದ ಅವಧಿಯಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ ಎಂದು ಆರೋಪಿಸಿದ್ದಾನೆ.
ಇವೆರೆಡೂ ದೂರುಗಳ ಆಧಾರದ ಮೇಲೆ ಸೂರಜ್ ವಿರುದ್ಧ 377, 342, 506 ಸೆಕ್ಷನ್‌ಗಳು ಸೇರಿದಂತೆ ಐಪಿಸಿಯ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಸೂರಜ್ ರೇವಣ್ಣ ಸೋದರ ಜೆಡಿಎಸ್‌ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಕೂಡ ಹಲವು ಲೈಂಗಿಕ ಕಿರುಕುಳಗಳ ಆರೋಪದ ಮೇಲೆ ಬಂಧಿಸಲಾಗಿದೆ.
