ಮಾಜಿ ಉಪಪ್ರಧಾನಿ ಮತ್ತು ಹಿರಿಯ ಭಾರತೀಯ ಜನತಾ ಪಕ್ಷದ ನಾಯಕ ಲಾಲ್ ಕೃಷ್ಣ ಅಡ್ವಾಣಿ (ಎಲ್‌ಕೆ ಅಡ್ವಾಣಿ) ಆರೋಗ್ಯದಲ್ಲಿ ಏರುಪೇರಾಗಿದ್ದು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ರಾತ್ರಿ ಅಡ್ವಾಣಿ ಆರೋಗ್ಯದಲ್ಲಿ ಏರುಪೇರಾದ ಬಳಿಕ ಅವರನ್ನು ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಜೂನ್ 26ರಂದು ಅಡ್ವಾಣಿ ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಗೆ ದಾಖಲಿಸಲಾಗಿತ್ತು.
ಇದನ್ನು ಓದಿದ್ದೀರಾ? ಹಿರಿಯ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು
96 ವರ್ಷದ ಅಡ್ವಾಣಿ ಅವರನ್ನು ಏಮ್ಸ್‌ನ ಹಳೆಯ ಖಾಸಗಿ ವಾರ್ಡ್‌ನಲ್ಲಿ ದಾಖಲಿಸಲಾಗಿತ್ತು. ಮೂತ್ರಶಾಸ್ತ್ರ ಮತ್ತು ಜೆರಿಯಾಟ್ರಿಕ್ ಮೆಡಿಸಿನ್ ಸೇರಿದಂತೆ ವಿವಿಧ ವಿಶೇಷತೆಗಳ ವೈದ್ಯರ ತಂಡವು ಅಡ್ವಾಣಿಯ ಪರೀಕ್ಷೆ ಮಾಡಿದ್ದರು ಎಂದು ವರದಿಯಾಗಿದೆ.
ಇದಾದ ಬಳಿಕ ಹತ್ತು ದಿನದೊಳಗೆ ಮತ್ತೆ ಎಲ್‌ಕೆ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೆಗೆದು ಬಿದ್ದರೆ ನಾನಂತೂ ಅಳಲ್ಲ.ದೇಶ ಹಾಳು ಮಾಡುವುದಕ್ಕೆ ಅಡಿಗಲ್ಲು ಇಟ್ಟವನು ಇವನು.ಮೋದಿಯ ಮುಂದೆ ಸಂಭಾವಿತನಂತೆ ಕಾಣುತ್ತಾನೆ,ಆದರೆ ಮೂಲದಲ್ಲಿ ಇವೆಲ್ಲ ಒಂದೇ ಹುತ್ತದ ಹಾವುಗಳು.