ಪ್ರಧಾನಿ ಮೋದಿಗೆ ಜನರನ್ನು ದಾರಿ ತಪ್ಪಿಸುವ ಹ್ಯಾಬಿಟ್ (ಅಭ್ಯಾಸ) ಇದೆ ಎಂದು ಟಿಎಂಸಿ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಷ್ ಹೇಳಿದ್ದಾರೆ.
ಬುಧವಾರ ರಾಜ್ಯಸಭೆಯಲ್ಲಿ ಬಂಗಾಳದ ಲಾಠಿ ಪ್ರಹಾರ ಘಟನೆಯನ್ನು ಉಲ್ಲೇಖಿಸಿದ್ದ ಮೋದಿ, ಟಿಎಂಸಿ ವಿರುದ್ಧ ಆರೋಪ ಮಾಡಿದ್ದರು. ಮೋದಿ ಆರೋಪಕ್ಕೆ ತಿರುಗೇಟು ನೀಡಿರುವ ಘೋಷ್, “ರಾಜ್ಯ ಪೊಲೀಸರು ‘ತ್ವರಿತ ಕ್ರಮ’ ತೆಗೆದುಕೊಂಡಿದ್ದಾರೆ” ಎಂದು ಹೇಳಿದ್ದಾರೆ.
“ಬಂಗಾಳದಲ್ಲಿ ಪೊಲೀಸರು ಭಯದಿಂದ ಕಾರ್ಯನಿರ್ವಹಿಸುತ್ತಿಲ್ಲ ಅಥವಾ ಯಾರದ್ದೇ ಪರವಾಗಿಲ್ಲ. ರಾಜ್ಯದಲ್ಲಿ ಅಪರಾಧಗಳಿಗೆ ಶೂನ್ಯ ಸಹಿಷ್ಣುತೆ ಇದೆ. ಪ್ರಕರಣದ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಆತ ಜೈಲಿನಲ್ಲಿದ್ದಾರೆ. ಪೊಲೀಸರು ಸ್ವಯಂಪ್ರೇರಿತವಾಗಿ ತನಿಖೆ ಆರಂಭಿಸಿದ್ದಾರೆ. ನೀವು (ನಿಮ್ಮ ಅಜಯ್ ಮಿಶ್ರಾ ಟೆನಿಸ್ ಮತ್ತು ಬ್ರಿಜ್ ಭೂಷಣರೊಂದಿಗೆ) ಬಂಗಾಳದಿಂದ ಕೆಲವು ವಿವೇಕಯುತ ಆಡಳಿತ ಮತ್ತು ಕಠಿಣ ಕ್ರಮಗಳ ಬಗ್ಗೆ ಕಲಿಯಬೇಕು” ಎಂದು ಘೋಷ್ ಟ್ವೀಟ್ ಮಾಡಿದ್ದಾರೆ.
Dear Shri @narendramodi , you have a habit of misleading people as you did on this incident. In Bengal the police acts without fear or favour. There is zero tolerance of crimes. The accused in this case has already been arrested , he is in jail and police have launched a suo… https://t.co/pu8RdHjwAq
— Sagarika Ghose (@sagarikaghose) July 3, 2024
“ಬಂಗಾಳ ಸರ್ಕಾರ ಮತ್ತು ಬಂಗಾಳ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ. ಹಿಂಸೆಗೆ ಶೂನ್ಯ ಸಹಿಷ್ಣುತೆ ಇದೆ. ಪ್ರಧಾನಿಯವರು ಮೊದಲು ತಮ್ಮ ಪಕ್ಷದಲ್ಲಿರುವ ಲೈಂಗಿಕ ಪರಭಕ್ಷಕರನ್ನು ವಜಾ ಮಾಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.