ಕಳೆದ ಕೆಲವು ದಿನಗಳಿಂದ ಉತ್ತರಾಖಂಡದಲ್ಲಿ ಭಾರೀ ಮಳೆ ಸುರಿದಿದ್ದು 100ಕ್ಕೂ ಹೆಚ್ಚು ರಸ್ತೆಗಳನ್ನು ಬಂದ್ ಮಾಡಲಾಗಿದೆ. ಕಣಿವೆ ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಚಂಪಾವತ್, ಅಲ್ಮೋರಾ, ಪಿಥೋರಗಢ, ಉಧಮ್‌ಸಿಂಗ್ ನಗರ ಮತ್ತು ಕುಮಾವೂನ್ ಪ್ರದೇಶದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಉತ್ತರಾಖಂಡದ ಹವಾಮಾನ ಇಲಾಖೆಯು ನೀಡಿದೆ. ಡೆಹ್ರಾಡೂನ್, ಪೌರಿ, ತೆಹ್ರಿ ಮತ್ತು ಹರಿದ್ವಾರದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇನ್ನು ನಿರಂತರ ಮಳೆಯಿಂದಾಗಿ ಗಂಗಾ, ಅಲಕನಂದಾ, ಭಾಗೀರಥಿ, ಶಾರದಾ, ಮಂದಾಕಿನಿ ಮತ್ತು ಕೋಸಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಅಪಾಯದ ಮಟ್ಟವನ್ನು ಮೀರಿ ನದಿಗಳು ಉಕ್ಕಿ ಹರಿದಿದ್ದು, 100ಕ್ಕೂ ಹೆಚ್ಚು ರಸ್ತೆಗಳನ್ನು ಮುಚ್ಚಲಾಗಿದೆ.
ಇದನ್ನು ಓದಿದ್ದೀರಾ? ಉತ್ತರಾಖಂಡ | 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಹತ್ಯೆ; ಬಿಜೆಪಿ ನಾಯಕನ ವಿರುದ್ಧ ದೂರು
ರುದ್ರಪ್ರಯಾಗ ಜಿಲ್ಲೆಯಲ್ಲಿ ಅಲಕನಂದಾ ನದಿಯಲ್ಲಿ ತುಂಬಿದ ನೀರು 10 ಅಡಿ ಎತ್ತರದ ಶಿವನ ವಿಗ್ರಹವನ್ನು ಮುಳುಗಿಸಿದೆ. ನೀರು ಹೆಚ್ಚುತ್ತಿರುವ ಕಾರಣ ಜನರು ತಗ್ಗು ಪ್ರದೇಶಗಳಿಗೆ ಅಥವಾ ನದಿ ದಡಗಳಿಗೆ ಹೋಗದಂತೆ ಹವಾಮಾನ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಸಲಹೆ ನೀಡಿದೆ.
ಪೌರಿ ಮತ್ತು ನೈನಿತಾಲ್ ಜಿಲ್ಲೆಗಳಲ್ಲಿ ಎಲ್ಲಾ ಸರ್ಕಾರೇತರ ಶಾಲೆಗಳನ್ನು ಮುಚ್ಚಲಾಗಿದೆ. ವಿಪತ್ತಿನ ಸಂದರ್ಭದಲ್ಲಿ ತಕ್ಷಣದ ರಕ್ಷಣೆಗೆ ಸಿದ್ಧರಾಗಿರಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿಪತ್ತು ನಿರ್ವಹಣಾ ಇಲಾಖೆಗಳು ಹಾಗೂ ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಗಂಗಾ ಮತ್ತು ಸರಾಯು ಅಪಾಯದ ಮಟ್ಟಕ್ಕಿಂತ ಕೆಲವೇ ಮೀಟರ್‌ಗಳಷ್ಟು ಕೆಳಗೆ ಹರಿಯುತ್ತಿದ್ದರೆ, ಅಲಕನಂದಾ, ಮಂದಕಣಿ ಮತ್ತು ಭಾಗೀರಥಿ ನದಿಗಳು ಅಪಾಯದ ಮಟ್ಟವನ್ನು ದಾಟಿವೆ. ಗೋಮತಿ, ಕಾಳಿ, ಗೌರಿ, ಶಾರದಾ ನದಿಗಳ ನೀರಿನ ಮಟ್ಟವೂ ಏರಿಕೆಯಾಗುತ್ತಿದೆ.
ಭೂಕುಸಿತದಿಂದಾಗಿ ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯ ಪೀಪಲ್ ಕೋಠಿ ಬಳಿ ಪಾಗಲ್ ನಾಲ್ ಮತ್ತು ಮಾಲ್ವಾ ಮಾರ್ಗವನ್ನು ನಿರ್ಬಂಧಿಸಲಾಗಿದೆ. ಯಮುನೋತ್ರಿ ಹೆದ್ದಾರಿ, ಧಾರ್ಚುಲಾ ಮತ್ತು ತವಾ ಘಾಟ್ ರಾಷ್ಟ್ರೀಯ ಹೆದ್ದಾರಿಯ ರಸ್ತೆಗಳನ್ನು ಸಹ ನಿರ್ಬಂಧಿಸಲಾಗಿದೆ.
Heavy rain since last night in upper Tons Valley Uttarakhand. Finally soil is saturated, you can see water standing in our khet.
Power off and on, internet goes and comes… But hi monsoon! You are the most important link in the circle of life.@shubhamtorres09 pic.twitter.com/gYenRr6nIO
— Anand Sankar (@kalapian_) July 4, 2024