ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಚುನಾವಣೆ ನಡೆಸುವ ಮೂಲಕ 2024-25ನೇ ಶೈಕಣಿಕ ಸಾಲಿನ ಶಾಲಾ ಸಂಸತ್ ರಚನೆ ಮಾಡಿದರು.
ಚುನಾವಣಾ ಅಧಿಸೂಚನೆ ಹೊರಡಿಸಿ ನಾಮಪತ್ರ ಸಲ್ಲಿಸುವುದು, ವಾಪಸ್ ತೆಗೆದುಕೊಳ್ಳುವುದು, ಅಣುಕು ಮತದಾನ, ತೋರು ಬೆರಳಿಗೆ ಶಾಹಿ ಹಚ್ಚುವುದು ಸೇರಿದಂತೆ ಚುನಾವಣೆಯಲ್ಲಿ ಅನುಸರಿಸುವ ಬಹುತೇಕ ವಿಧಾನಗಳನ್ನು ಅನುಸರಿಸಿದರು. ಸರದಿ ಸಾಲಿನಲ್ಲಿ ನಿಂತು ವಿದ್ಯಾರ್ಥಿನಿಯರು ಇವಿಎಂ ಆ್ಯಪ್ ಮೂಲಕ ಮತ ಚಲಾಯಿಸಿದರು. ಹೊಸ ಮತದಾರರು(6ನೇ ತರಗತಿ) ಉತ್ಸಾಹದಿಂದ ಮತದಾನ ಮಾಡುವುದು ಕಂಡುಬಂದಿತು.
ಪ್ರಾಚಾರ್ಯ ಡಾ ರಾಜಶೇಖರ ಮಾಂಗ್ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಶಿವಾನಂದ ಬೀಳಗಿ, ನಾಗಶೆಟ್ಟಿ, ಅಶೋಕ, ತುಕಾರಾಮ, ಮಹಾನಂದ, ರೇಖಾ, ಸಾಲೇಹ ಫರೀನ್, ಶಿವಕುಮಾರ ಹಿರೇಮಠ, ಮಹೇಶ ಎಸ್ ಜಿ, ಬಸವರಾಜ, ಭಾಗ್ಯ ಜ್ಯೋತಿ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಚುನಾವಣಾ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ನಂತರ ಮತ ಎಣಿಕೆ ನಡೆದು ಮಂತ್ರಿಮಂಡಲ ರಚಿಸಿದರು.

ಈ ಸುದ್ದಿ ಓದಿದ್ದೀರಾ ಹಾವೇರಿ | ಲಿಡ್ಕರ್ ನಿಗಮದಿಂದ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡಲು ದಸಂಸ ಒತ್ತಾಯ
ಮಂತ್ರಿ ಮಂಡಲ ವಿವರ:
- ಗೀತಾ ಭೀಮಸಿಂಗ್ – ಪ್ರಧಾನಿ,
- ಅನುರಾಧಾ, ಪ್ರಿಯಾ – ಶಿಕ್ಷಣ ಮಂತ್ರಿ
- ನಾವಿನ್ಯ ಸೂರ್ಯಕಾಂತ – ಆರೋಗ್ಯ ಮಂತ್ರಿ
- ರಂಜಿತಾ ವೆಂಕಟೇಶ, ಪ್ರಜ್ಞಾ ಪರಮೇಶ್ವರ – ಆಹಾರ ಮಂತ್ರಿಗಳು
- ಕೀರ್ತಿ ಲೋಕೇಶ್, ಸ್ನೇಹಾ ಅಶೋಕ – ಶಿಸ್ತು ಮತ್ತು ಸ್ವಚ್ಚತಾ ಮಂತ್ರಿಗಳು
- ಶೃತಿ ಸೂರ್ಯಕಾಂತ, ಐಶಾ ಸಂತೋಷ – ಸಾಂಸ್ಕೃತಿಕ ಮಂತ್ರಿಗಳು
- ಲಕ್ಷ್ಮೀಬಾಯಿ ಶಿವರಾಮ, ಅನುಶ್ರೀ ನರಸಪ್ಪ – ಕ್ರೀಡಾ ಮಂತ್ರಿಗಳು
- ಶಾಲಿನಿ ದಶರಥ – ಪರಿಸರ ಮತ್ತು ಅರಣ್ಯ ಮಂತ್ರಿ
- ಕಾವೇರಿ ತುಕಾರಾಮ – ಪ್ರವಾಸ ಮಂತ್ರಿ
- ಕರೀನಾ ತುಕಾರಾಮ, ಶಿಲ್ಪಾ ನಾಗೇಂದ್ರಪ್ಪ – ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿಗಳಾಗಿ ನೇಮಕಗೊಂಡರು.