ಇಂಗ್ಲೆಂಡ್ ಸಂಸದೀಯ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಪ್ರಧಾನಿ ರಿಶಿ ಸುನಕ್ ಅವರ ಆಡಳಿತರೂಢ ಕನ್ಸ್‌ರ್‌ವೇಟೀವ್ ಪಕ್ಷ ಭಾರಿ ಸೋಲಿನತ್ತ ಸಾಗುತ್ತಿದೆ. ಈಗಾಗಲೇ ಬಹುಮತದ ಸಂಖ್ಯೆಗೂ ಮೀರಿ 346 ಸ್ಥಾನಗಳನ್ನು ಗೆದ್ದಿರುವ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಕೀರ್ ಸ್ಟಾರ್ಮರ್ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ.
14 ವರ್ಷಗಳಲ್ಲಿಯೇ ಮೊದಲ ಬಾರಿಗೆ ರಿಶಿ ಸುನಕ್ ಅವರ ಕನ್ಸರ್ವ್‌ವೇಟಿವ್ ಪಕ್ಷ ಭಾರಿ ಸೋಲಿನ ಆಘಾತ ಅನುಭವಿಸಿದೆ. ಇತ್ತೀಚಿನ ಫಲಿತಾಂಶಗಳಂತೆ ಒಟ್ಟು 650 ಸ್ಥಾನಗಳಲ್ಲಿ ಲೇಬರ್ ಪಕ್ಷ 346, ಕನ್ಸ್‌ರ್‌ವೇಟೀವ್ ಪಕ್ಷ 76, ಲಿಬರಲ್ ಡೆಮಾಕ್ರಾಟಿಕ್ಸ್ 21 ಹಾಗೂ ಇತರೆ ಪಕ್ಷಗಳು 10 ಸ್ಥಾನಗಳಲ್ಲಿ ಜಯಗಳಿಸಿವೆ.
ತಮ್ಮ ಪಕ್ಷದ ಸೋಲನ್ನು ಒಪ್ಪಿಕೊಂಡಿರುವ ಇಂಗ್ಲೆಂಡ್ ಪ್ರಧಾನಿ ರಿಶಿ ಸುನಕ್, ಸಾರ್ವರ್ತಿಕ ಚುನಾವಣೆಗಳಲ್ಲಿ ಲೇಬರ್ ಪಕ್ಷ ಗೆಲುವು ಸಾಧಿಸಿದೆ. ಗೆಲುವು ಸಾಧಿಸಿರುವ ಕೀರ್ ಸ್ಟಾರ್ಮರ್ ನೇತೃತ್ವದ ಪಕ್ಷಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲ ಕಡೆ ಸದುದ್ದೇಶದೊಂದಿಗೆ ಇಂದು ಅಧಿಕಾರವು ಶಾಂತಿಯುತವಾಗಿ ಹಾಗೂ ಕ್ರಮಬದ್ಧವಾಗಿ ಬದಲಾವಣೆಯಾಗಲಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೆಕ್ಕಾದಲ್ಲಿ ಮೃತಪಟ್ಟ 1300 ಹಜ್ ಯಾತ್ರಿಗಳಲ್ಲಿ ಶೇ.83 ಮಂದಿಗೆ ಅಧಿಕೃತ ಅನುಮತಿಯಿರಲಿಲ್ಲ
“ನಮ್ಮ ದೇಶದ ಭದ್ರತೆ ಹಾಗೂ ಭವಿಷ್ಯಕ್ಕೆ ನಮಗೆ ಎಲ್ಲ ರೀತಿಯ ವಿಶ್ವಾಸವನ್ನು ಒದಗಿಸುವ ಅಗತ್ಯ ಒದಗಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ನನ್ನನ್ನು ಕ್ಷಮಿಸಿ, ಸೋಲಿನ ಹೊಣೆಯನ್ನು ನಾನೆ ಹೊರುತ್ತೇನೆ” ಎಂದು ರಿಶಿ ಸುನಕ್ ಹೇಳಿದ್ದಾರೆ.
ಲೇಬರ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ಮುಂಚೂಣಿ ನಾಯಕ ಕೀರ್ ಸ್ಟಾರ್ಮರ್, ದೇಶ ಮೊದಲು ಪಕ್ಷ ನಂತರ ಇಂಗ್ಲೆಂಡ್ ಮತ್ತೆ ತನ್ನ ಭವಿಷ್ಯಕ್ಕೆ ಮರಳಲಿದೆ ಎಂದು ತಿಳಿಸಿದ್ದಾರೆ.
ಇಂಗ್ಲೆಂಡ್ ಚುನಾವಣೆಗಳು ಮುಗಿದ ನಂತರ ಚುನಾವಣೋತ್ತರ ಸಮೀಕ್ಷೆ ಕೂಡ ಲೇಬರ್ ಪಕ್ಷ 410 ಸ್ಥಾನ ಹಾಗೂ ಕನ್ಸರ್ವ್‌ವೇಟಿವ್ ಪಕ್ಷ 131 ಸ್ಥಾನಗಳಲ್ಲಿ ಗೆಲುವುಗಳಿಸುತ್ತದೆ ಎಂದು ಭವಿಷ್ಯ ನುಡಿದಿತ್ತು.