ಶಿಥಿಲಗೊಂಡಿದ್ದ ಮನೆಯ ಸೂರು ಕುಸಿದು ಒಂದೇ ಮನೆಯ ಮೂವರು ಮಕ್ಕಳ ಸಾವನ್ನಪ್ಪಿರುವ ಘಟನೆ ಫರಿದಾಬಾದ್‌ನ ಸಿಕ್ರಿ ಗ್ರಾಮದಲ್ಲಿ ಶನಿವಾರ ನಡೆದಿದ್ದು, ಈ ಫರಿದಾಬಾದ್ ದುರಂತದಲ್ಲಿ ಸಾವನ್ನಪ್ಪಿದ ಮೂವರು ಮಕ್ಕಳು ಸಹೋದರರು ಎಂದು ವರದಿಯಾಗಿದೆ.
ಮೃತರನ್ನು ಆಕಾಶ್ (10), ಮುಸ್ಕಾನ್ (8) ಮತ್ತು ಆದಿಲ್ (6) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಈ ಸೋರುಗಳು ಉತ್ತಮ ಸ್ಥಿತಿಯಲ್ಲಿರಲಿಲ್ಲ. ಈ ಪ್ರದೇಶದಲ್ಲಿ ಮಳೆಯ ನಂತರ ಕಾಂಕ್ರೀಟ್ ಚಪ್ಪಡಿ ಕುಸಿದಿದೆ. ಶುಕ್ರವಾರ ಸಂಜೆ ಮೂವರು ಒಡಹುಟ್ಟಿದವರು ಈ ಸೂರಿನಡಿಯಲ್ಲಿ ಕುಳಿತಿದ್ದರು.
ಮನೆ ಶಿಥಿಲಾವಸ್ಥೆಯಲ್ಲಿದೆ ಎಂದು ತಿಳಿದ ನಂತರವೂ ಬಾಡಿಗೆಗೆ ನೀಡಿದ ಮನೆ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಆತನ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಫರಿದಾಬಾದ್| ಕಾಂಗ್ರೆಸ್ ನಾಯಕನ ಸಹೋದರನಿಗೆ ಗುಂಡಿಕ್ಕಿ ಹತ್ಯೆ; ಐವರ ಬಂಧನ
ಸ್ಥಳೀಯ ನಿವಾಸಿಗಳು ಬಿದ್ದ ಸೂರನ್ನು ತೆಗೆದು ಅದರಡಿಯಲ್ಲಿ ಸಿಲುಕಿದ್ದ ಪ್ರಜ್ಞಾಹೀನ ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಮೂವರೂ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ.
ಈ ಮೂವರು ಮಕ್ಕಳ ತಂದೆ ಧರ್ಮೇಂದ್ರ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ, ಶನಿವಾರ ಸೆಕ್ಟರ್ 58 ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 105 (ಅಪರಾಧೀಯ ನರಹತ್ಯೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಸೆಕ್ಟರ್ 58 ಪೊಲೀಸ್ ಠಾಣೆಯ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ಕ್ರಿಶನ್ ಕುಮಾರ್ ತಿಳಿಸಿದ್ದಾರೆ.