ಒಂದು ಕಂಪನಿ ಹಲವಾರು ಜನರಿಂದ ಹಣವನ್ನು ಸಂಗ್ರಹಿಸಿ ದೊಡ್ಡ ದೊಡ್ಡ ಕಂಪನಿಗಳು ಮತ್ತು ಬಾಂಡ್‌ಗಳ ಮೇಲೆ ಹೂಡಿಕೆ ಮಾಡುತ್ತದೆ. ನಂತರ, ಹೂಡಿಕೆಯ ಮೇಲೆ ಬಂದ ಗಳಿಕೆಯನ್ನು ಹೂಡಿಕೆದಾರರು ಹೂಡಿಕೆ ಮಾಡಿದ ಮೊತ್ತಕ್ಕೆ ಅನುಗುಣವಾಗಿ ಹಂಚುವ ವಿಧಾನವನ್ನೇ ‘ಮ್ಯೂಚುಯಲ್ ಫಂಡ್’ ಎಂದು ಕರೆಯಲಾಗುತ್ತದೆ.
ಇದನ್ನು ನಾವು ಪರೋಕ್ಷ ಹೂಡಿಕೆ (indirect investment) ಅಂತಲೂ ಕರೆಯಬಹುದು. ಏಕೆಂದರೆ, ನೇರವಾಗಿ ಹೂಡಿಕೆದಾರರು ಯಾವುದೇ ಕಂಪನಿಗಳ ಮೇಲೆ ಹೂಡಿಕೆ ಮಾಡುತ್ತಿಲ್ಲ. ಬದಲಿಗೆ ಒಂದು ಕಂಪನಿಯ ಮೂಲಕ ಪರೋಕ್ಷವಾಗಿ ಹೂಡಿಕೆಗಳನ್ನು ಮಾಡಲಾಗುತ್ತದೆ.
ಫಂಡ್‌ನ ವ್ಯವಹಾರಗಳನ್ನು ‘ಮ್ಯೂಚುಯಲ್ ಫಂಡ್ ಮ್ಯಾನೇಜರ್’ ನಿಯಂತ್ರಿಸುತ್ತಿರುತ್ತಾರೆ. ಹೂಡಿಕೆದಾರರ ಹಣವನ್ನು ವ್ಯವಹರಿಸಿ ಕೊಡುವ ಕಾರಣಕ್ಕೆ ‘ಮ್ಯೂಚುವಲ್ ಫಂಡ್’ ಕಂಪನಿಗೆ ಅಥವಾ ‘ಫಂಡ್ ಮ್ಯಾನೇಜರ್’ಗೆ ಅಲ್ಪ ಪ್ರಮಾಣದ ಕಮಿಷನ್ ಕೊಡಬೇಕಾಗುತ್ತದೆ.
ಮ್ಯೂಚುಯಲ್ ಫಂಡ್‌ನ ಅನುಕೂಲಗಳೇನು?
- ಸಾಮರ್ಥ್ಯಕ್ಕೆ ತಕ್ಕ ಹೂಡಿಕೆ: ಇಲ್ಲಿ ಹೂಡಿಕೆ ಮಾಡಲು ದೊಡ್ಡ ಪ್ರಮಾಣದ ಹಣ ಇರಲೇಬೇಕು ಎನ್ನುವ ಯಾವ ನಿಯಮವೂ ಇಲ್ಲ. ಬದಲಿಗೆ ತಿಂಗಳಿಗೆ ಕೇವಲ 500 ರೂ.ಗಳನ್ನು ಹೂಡಿಕೆ ಮಾಡಬಹುದು. 50,000 ರೂ.ಗಳನ್ನು ಹೂಡಿಕೆ ಮಾಡಬಹದು. ಅಂದರೆ, ಸಾಮರ್ಥ್ಯಕ್ಕೆ ತಕ್ಕಂತೆ ಹೂಡಿಕೆ ಮಾಡಲು ಬಯಸುವ ಪ್ರತಿಯೊಬ್ಬರೂ ಇಲ್ಲಿ ಪಾಲ್ಗೊಳ್ಳಬಹುದು.
- ನಷ್ಟದ ಸಂಭಾವ್ಯತೆ ಕಡಿಮೆ: ಫಂಡ್‌ಅನ್ನು ನಿರ್ವಹಣೆ ಮಾಡುವ ಫಂಡ್ ಮ್ಯಾನೇಜರ್, ಎಲ್ಲ ಹಣವನ್ನು ಸೆಕ್ಯುರಿಟಿಗಳು, ಈಕ್ವಿಟಿ ಷೇರುಗಳು, ಚಿನ್ನ, ಇನ್ಫ್ರಾಸ್ಟ್ರಕ್ಚರ್, ಫಾರ್ಮಾ ಸೆಕ್ಟರ್, ಐಟಿ ಸೆಕ್ಟರ್ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದರಿಂದ, ಯಾವುದಾದರು ಒಂದು ಕ್ಷೇತ್ರದಲ್ಲಿ ನಷ್ಟವಾದರೂ, ಬೇರೆ ವಲಯದಲ್ಲಿ ಹಣದ ಭದ್ರತೆ ಇರುತ್ತದೆ.
- ವೃತ್ತಿಪರ ನಿರ್ವಹಣೆ: ಹೂಡಿಕೆದಾರರು ತಮ್ಮ ಹಣವನ್ನು ಯಾವ ಷೇರುಗಳ ಮೇಲೆ ಹೂಡಿಕೆ ಮಾಡಬೇಕು. ಯಾವ ಬಾಂಡ್‌ಗಳನ್ನು ಖರೀದಿಸಬೇಕು. ಷೇರು ಮಾರುಕಟ್ಟೆಯ ಏಳು-ಬೀಳುಗಳೇನು ಎಂಬುದರ ಬಗ್ಗೆ ಹೆಚ್ಚಿಗೆ ತಿಳಿಯುವ ಅಗತ್ಯ ಇಲ್ಲ. ಏಕೆಂದರೆ, ಈ ಎಲ್ಲ ವರ್ಗಗಳಲ್ಲಿ ಹೆಚ್ಚಿನ ಪರಿಣತಿ ಹೊಂದಿರುವ ವೃತ್ತಿಪರ ಫಂಡ್ ಮ್ಯಾನೇಜರ್ ಇದರ ನಿರ್ವಹಣೆಯನ್ನು ಮಾಡುತ್ತಾರೆ.
- ಸೆಬಿ(SEBI) ನಿಯಂತ್ರಣ: ಹೂಡಿಕೆದಾರರಿಗೆ ಮೊದಲು ಮೂಡುವ ಆತಂಕವೆಂದರೆ ಅದು ಹಣದ ಸುರಕ್ಷತೆ. ಆದ್ದರಿಂದಲೇ ಮ್ಯೂಚುಯಲ್ ಫಂಡ್ ಕಂಪನಿ ನಡೆಸಲು ಒಪ್ಪಿಗೆ ಕೊಡುವುದರಿಂದ ಹಿಡಿದು, ಹೂಡಿಕೆದಾರರಿಗೆ ಬೇಕಾದಾಗ ಹಣವನ್ನು ಹಿಂಪಡೆಯುವ ತನಕ ಪಾರದರ್ಶಕತೆಯಿಂದ ಕಟ್ಟುನಿಟ್ಟಾಗಿ ಕಂಪನಿಗಳು ಕಾರ್ಯನಿರ್ವಹಿಸುವಂತೆ ಕಂಪನಿಗಳನ್ನು ಸೆಬಿ(SEBI-Securities and Exchange Board Of India) ನಿಯಂತ್ರಿಸುತ್ತದೆ.
- ತೆರಿಗೆ ಪ್ರಯೋಜನ: ELSS (Equity-linked saving scheme) ಸಂಬಂಧಿತ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ 1961ರ ಸೆಕ್ಷನ್ 80c ಅನ್ವಯದಂತೆ ಒಂದು ವರ್ಷಕ್ಕೆ 1,50,000 ರೂ.ವರೆಗೆ ತೆರಿಗೆ ರಿಯಾಯಿತಿಯನ್ನೂ ಪಡೆಯಬಹುದು.
- ಕಂಪೌಂಡ್ ಇಂಟ್ರೆಸ್ಟ್: ದೀರ್ಘಕಾಲದ ಹೂಡಿಕೆ ಮತ್ತು ಪ್ರತೀ ತಿಂಗಳು ಹೂಡಿಕೆ (systematic investment plan-SIP) ಮಾಡುವ ವಿಧಾನದಿಂದ ಅತ್ಯಧಿಕ ಚಕ್ರಬಡ್ಡಿ ಶೇಖರಣೆಯಾಗುತ್ತದೆ. ಇದನ್ನು SIP Calculatorನಿಂದ ಲೆಕ್ಕಾಚಾರ ಮಾಡಬಹುದು. FD, PPF, SB, RD ಬಡ್ಡಿಗಿಂತ ಹೆಚ್ಚು ಪ್ರಮಾಣದ ರಿಟರ್ನ್ ಅನ್ನು ಮ್ಯೂಚುಯಲ್ ಫಂಡ್‌ನಲ್ಲಿ ಪಡೆಯಬಹುದು.
ಮ್ಯೂಚುಯಲ್ ಫಂಡ್‌ನ ಅನಾನುಕೂಲಗಳೇನು?
- ಕಡಿಮೆ ರಿಟರ್ನ್: ಹಣದ ಹೂಡಿಕೆಯು ಹೆಚ್ಚಾಗಿ ಷೇರು ಮಾರುಕಟ್ಟೆಯ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ, ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯ ಮೇಲೆ ದೀರ್ಘಾವಧಿ ಕೆಟ್ಟ ಪರಿಣಾಮ ಎದುರಾದರೆ ಅಥವಾ ಬೇರೆ ಬೇರೆ ವಲಯದ ಮೇಲೆ ಹೂಡಿಕೆ ಮಾಡದೆ ಒಂದೇ ವಲಯಕ್ಕೆ ಸೀಮಿತವಾಗಿದ್ದರೆ ನಷ್ಟದ ಸಾಧ್ಯತೆಯೂ ಇರುತ್ತದೆ. ಅಥವಾ ಕಡಿಮೆ ಮರುಪಾವತಿಯೂ ಕೂಡ ಬರಬಹುದು.
- ನಿಯಂತ್ರಣಕ್ಕೆ ಒಳಪಟ್ಟಿರುವುದಿಲ್ಲ: ಮ್ಯೂಚುಯಲ್ ಫಂಡ್‌ಅನ್ನು ಕಟ್ಟುವ ಮತ್ತು ಹಿಂಪಡೆಯುವ ಸ್ವಾತಂತ್ರ್ಯವನ್ನು ಮಾತ್ರ ನಾವು ಹೊಂದಿರುತ್ತೇವೆ. ಉಳಿದಂತೆ ಫಂಡ್‌ಅನ್ನು ಮ್ಯಾನೇಜ್ ಮಾಡುವ, ಬೇರೆ ಬೇರೆ ಷೇರುಗಳ ಮೇಲೆ, ಬಾಂಡ್‌ಗಳ ಮೇಲೆ ಹೂಡಿಕೆ ಮಾಡುವ ಯಾವ ಹಕ್ಕನ್ನೂ ನಾವು ಹೊಂದಿರಲು ಸಾಧ್ಯವಿಲ್ಲ.
Superrrr
MF means, if a person invest Rs.10000, -00 , the company will spend Rs.7000-00 for office, furniture, car etc etc n showing balance Rs 3000-00 to investor account..as experienced