ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ನಡೆಸಬೇಕು. ಜನಪರವಾಗಿ ಕೆಲಸ ಮಾಡಬೇಕೆಂದು ತಮ್ಮ ಐಎಎಸ್ ಹುದ್ದೆಯನ್ನು ತ್ಯಜಿಸಿದ್ದ ಕರ್ನಾಟಕದ ಮಾಜಿ ಐಎಎಸ್ ಅಧಿಕಾರಿ, ತಮಿಳುನಾಡಿನ ಸಂಸದ ಸಸಿಕಾಂತ್ ಸೆಂತಿಲ್ ಜೊತೆ ಜಾಗೃತ ಕರ್ನಾಟಕ ಸಂಘಟನೆಯು ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದೆ.
ಕಾರ್ಯಕ್ರಮದ ಬಗ್ಗೆ ಜಾಗೃತ ಕರ್ನಾಟಕದ ಮುಖಂಡ ರಾಜಶೇಖರ್ ಅಕ್ಕಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ‘ಜನಾದೇಶ 2024: ಸಂವಿಧಾನ ಕಲ್ಪಿಸಿದ ಭಾರತಕ್ಕಾಗಿ ಹೊಸ ರಾಜಕಾರಣ ಹೇಗೆ?’ ಎಂಬ ವಿಷಯದಡಿ ಕಾರ್ಯಕ್ರಮವು ಜುಲೈ 12ರಂದು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಸ್ಕೌಟ್ಸ್ ಅಂಡ್ ಗೈಡ್ಸ್ (ಕೊಂಡಜ್ಜಿ ಬಸಪ್ಪ) ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
“ಸಂವಿಧಾನದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆ – ಆಶಯಗಳಿಗೆ ಅನುಗುಣವಾಗಿ ರಾಜಕಾರಣ ಕಟ್ಟುವ ಉದ್ದೇಶದೊಂದಿಗೆ ಜಾಗೃತ ಕರ್ನಾಟಕವು ‘ಮರಳಿ ಸಂವಿಧಾನದೆಡೆಗೆ’ ಎಂಬ ಶೀರ್ಷಿಕೆಯಲ್ಲಿ ಸರಣಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅದರ ಭಾಗವಾಗಿ ಹಮ್ಮಿಕೊಳ್ಳುತ್ತಿದೆ. ಅದರ ಭಾಗವಾಗಿ ಕರ್ನಾಟಕದ ಮಾಜಿ ಐಎಎಸ್ ಅಧಿಕಾರಿ, ತಮಿಳುನಾಡಿನ ಸಂಸದರಾದ ಸಸಿಕಾಂತ್ ಸೆಂತಿಲ್ ಜೊತೆಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದು ರಾಜಶೇಖರ್ ಅಕ್ಕಿ ತಿಳಿಸಿದ್ದಾರೆ.