ಜೂನ್ 18ರಂದು 317 ನಗರಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಯುಜಿಸಿ ನೆಟ್ ಪರೀಕ್ಷೆಗೆ ಹಾಜರಾಗಿದ್ದಾರೆ. ಇದಾದ ಕೇವಲ ಒಂದು ದಿನದ ನಂತರ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸಾಕ್ಷಿ ಲಭ್ಯವಾದ ಕಾರಣ ಶಿಕ್ಷಣ ಸಚಿವಾಲಯವು ಪರೀಕ್ಷೆಯನ್ನು ರದ್ದುಗೊಳಿಸಿದೆ. ಆದರೆ ಈ ಸಾಕ್ಷ್ಯಾಧಾರವನ್ನೇ ಸೃಷ್ಟಿ ಮಾಡಲಾಗಿದೆ ಎಂಬುವುದು ಸಿಬಿಐ ತನಿಖೆಯಿಂದ ಪತ್ತೆಯಾಗಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಜೂನ್ 19ರಂದು, ‘ಪರೀಕ್ಷೆಯ ಸಮಗ್ರತೆಗೆ ಧಕ್ಕೆಯುಂಟಾಗಿರಬಹುದು’ ಎಂದು ದೇಶದ ಅತೀ ಉನ್ನತ ಪರೀಕ್ಷೆಗಳಲ್ಲಿ ಒಂದಾದ ಯುಜಿಸಿ ನೆಟ್ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಜೂನ್ 18ರಂದು ಪರೀಕ್ಷೆಯ ದಿನದಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಟೆಲಿಗ್ರಾಮ್ ಚಾನೆಲ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಸೈಬರ್‌ಕ್ರೈಮ್‌ಗೆ ತಿಳಿದುಬಂದಿದೆ.
ಈ ಸೈಬರ್‌ಕ್ರೈಮ್‌ಗೆ ಲಭಿಸಿದ ಸಾಕ್ಷಿಯ ಆಧಾರದಲ್ಲಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಜೂನ್ 23ರಂದು, ಶಿಕ್ಷಣ ಸಚಿವಾಲಯದ ಆದೇಶದಂತೆ ಕೇಂದ್ರೀಯ ತನಿಖಾ ದಳವು (ಸಿಬಿಐ) ಈ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತು.
ಇದನ್ನು ಓದಿದ್ದೀರಾ? ಯುಜಿಸಿ-ನೆಟ್| ಹೊಸ ದಿನಾಂಕ ಪ್ರಕಟ; ಆಗಸ್ಟ್ 21ರಿಂದ ಸೆಪ್ಟೆಂಬರ್ 4ರವರೆಗೆ ಪರೀಕ್ಷೆ
ಆದರೆ ಸರ್ಕಾರಿ ಮೂಲಗಳ ಪ್ರಕಾರ, ಪ್ರಶ್ನೆ ಪತ್ರಿಕೆಯ ಸ್ಕ್ರೀನ್‌ಶಾಟ್ ಪರೀಕ್ಷೆಯ ಮೊದಲೇ ಲೀಕ್ ಆಗಿದೆ ಎಂಬಂತೆ ದಾಖಲೆಯನ್ನು ಸೃಷ್ಟಿ ಮಾಡಲಾಗಿದೆ ಎಂದು ಸಿಬಿಐ ಪತ್ತೆ ಮಾಡಿದೆ.
ಯುಜಿಸಿ ನೆಟ್‌ನ ಬೆಳಿಗ್ಗೆಯ ಪರೀಕ್ಷೆಯ ಬಳಿಕ ಮಧ್ಯಾಹ್ನದ ಪರೀಕ್ಷೆಗೂ ಮುನ್ನ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಟೆಲಿಗ್ರಾಮ್ ಚಾನೆಲ್‌ನಲ್ಲಿ ಪ್ರಶ್ನೆ ಪತ್ರಿಕೆಯ ಫೋಟೋವನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಧ್ಯಾಹ್ನ 3 ಗಂಟೆಗೆ ಪರೀಕ್ಷೆ ನಡೆದಿದೆ.
ಈ ಛಾಯಾಚಿತ್ರವು ಪರೀಕ್ಷೆಗೆ ಮುಂಚೆಯೇ ಜನರ ಬಳಿ ಲಭ್ಯವಿತ್ತು ಎಂದು ಸೂಚಿಸುವಂತೆ ಸಾಕ್ಷಿ ಸೃಷ್ಟಿಸಲಾಗಿದೆ. ಆದರೆ ಯಾವ ರೀತಿಯ ಸಾಕ್ಷಿ ಎಂಬ ಬಗ್ಗೆ ಮಾಹಿತಿ ತಿಳಿದಿಲ್ಲ ಎಂದು ವರದಿ ಉಲ್ಲೇಖಿಸಿದೆ.