ಹಿಮಾಚಲ ಪ್ರದೇಶದಲ್ಲಿ ಮುಂಗಾರು ಅಬ್ಬರ ಹೆಚ್ಚಾಗಿದ್ದು ಮುಂಗಾರು ಆರಂಭವಾದ ಬಳಿಕ ಈವರೆಗೆ 22 ಮಂದಿ ಸಾವನ್ನಪ್ಪಿದ್ದರೆ, 172 ಕೋಟಿ ರೂಪಾಯಿ ನಷ್ಟವಾಗಿದೆ.
ಹಿಮಾಚಲ ಪ್ರದೇಶದಲ್ಲಿ ಜೂನ್ 27ರಂದು ಮುಂಗಾರು ಪ್ರಾರಂಭವಾಗಿದೆ. ಇದಾದ ಎರಡು ವಾರಗಳಲ್ಲಿಯೇ 22 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯವು 172 ಕೋಟಿ ರೂಪಾಯಿ ನಷ್ಟವನ್ನು ಕಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಂಟು ಮಂದಿ ನೀರಿನಲ್ಲಿ ಮುಳುಗಿದ್ದರೆ, ಆರು ಮಂದಿ ಎತ್ತರದಿಂದ ಬಿದ್ದು, ನಾಲ್ವರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಮೂವರು ಹಾವು ಕಡಿದು ಸಾವನ್ನಪ್ಪಿದ್ದಾರೆ. ಮತ್ತೆ ಇನ್ನಿಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಮಂಡಿಯಲ್ಲಿ ಐದು, ಶಿಮ್ಲಾದಲ್ಲಿ ನಾಲ್ಕು ಮತ್ತು ಕಂಗ್ರಾದಲ್ಲಿ ಮೂರು ರಸ್ತೆಗಳನ್ನು ಮುಚ್ಚಲಾಗಿದೆ.
ಇದನ್ನು ಓದಿದ್ದೀರಾ? ಕರಾವಳಿಯಲ್ಲಿ ಮುಂದುವರೆದ ಮಳೆ; ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಬುಡಕಟ್ಟು ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ಲಿಂದೂರ್ ಗ್ರಾಮದಲ್ಲಿ ಕಳೆದ ಮಾನ್ಸೂನ್ ಅವಧಿಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು ಈ ಮುಂಗಾರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ 14 ಮನೆಗಳು ನೆಲಸಮವಾಗುವ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಸೋಲನ್ ಜಿಲ್ಲೆಯ ಚೈಲ್‌ನ ಘೇವಾ ಪಂಚಾಯತ್‌ನಲ್ಲಿ ಭೂಕುಸಿತದಿಂದ ಗೋಶಾಲೆಯ ಗೋಡೆ ಕುಸಿದು ಹಸು ಸಾವನ್ನಪ್ಪಿದೆ.
ಶಿಮ್ಲಾದ ಹವಾಮಾನ ಇಲಾಖೆಯು ಗುರುವಾರ ಮತ್ತು ಶುಕ್ರವಾರದಂದು ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆ, ಗುಡುಗು ಮತ್ತು ಮಿಂಚು ಕಾಣಿಸಿಕೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.
ಹಾಗೆಯೇ ತೋಟಗಳು, ಬೆಳೆಗಳಿಗೆ ಹಾನಿಯಾಗುವ, ಗುಡಿಸಲುಗಳಿಗೆ ಹಾನಿಯಾಗುವ, ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗುವ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿದೆ.
#Video | Massive Landslide In Himachal Pradesh’s Shimla After Heavy Rain https://t.co/AcVivKu7Dw… pic.twitter.com/kuPEoaWXLl
— sunshine@Nature🏝️🌲 (@sunshinesandy00) July 7, 2024