ಬಿಹಾರದ ಪೊಲೀಸ್ ಇಲಾಖೆಗೆ ಸೇರ್ಪಡೆಯಾದ ಮೊದಲ ಲಿಂಗತ್ವ ಅಲ್ಪಸಂಖ್ಯಾತೆ ಎಂಬ ಹೆಗ್ಗಳಿಕೆಗೆ ಅಲ್ಲಿನ ಮಾನ್ವಿ ಮಧು ಕಶ್ಯಪ್ ಭಾಜನರಾಗಿದ್ದಾರೆ. ಅವರು ಬಿಹಾರ ಪೊಲೀಸ್ ಪಡೆಗೆ ಸಬ್ ಇನ್ಸ್ಪೆಕ್ಟರ್ ಆಗಿ ನೇಮಕವಾಗಿದ್ದಾರೆ.
ಪೊಲೀಸ್ ಇಲಾಖೆಗೆ ಸೇರಿದ ಮಧು ಅವರಿಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಮಧು, “ಬದುಕಿನಲ್ಲಿ ಬಹಳಷ್ಟು ಕಷ್ಟ ಎದುರಿಸಿದ್ದೇನೆ. ಲಿಂಗತ್ವ ಅಲ್ಪಸಂಖ್ಯಾತೆಯಾಗಿ ಈ ಹುದ್ದೆಗೆ ತಲುಪಲು ಭಾರೀ ಕಷ್ಟಪಟ್ಟಿದ್ದೇನೆ. ಕೊನೆಗೂ ಬದುಕಿನಲ್ಲಿ ಮಹತ್ವದ ಘಟ್ಟ ತಲುಪಿದ್ದೇನೆ” ಎಂದು ಹೇಳಿದ್ದಾರೆ.
“ಸ್ಪರ್ಧಾ ಪರೀಕ್ಷೆಗಳಿಗೆ ಸಿದ್ದತೆ ನಡೆಸಲು ಹಲವಾರು ಕೋಚಿಂಗ್ ಕೇಂದ್ರಗಳು ನನಗೆ ಪ್ರವೇಶ ನೀಡಿರಲಿಲ್ಲ.ಒಂದು ಕೇಂದ್ರವು ನನಗೆ ಪ್ರವೇಶ ಕೊಟ್ಟಿತು. ಅಲ್ಲಿಂದ ನನ್ನ ಬದುಕು ಬದಲಾಯಿತು. ಕಷ್ಟದ ದಿನಗಳಲ್ಲಿ ಪೋಷಕರು, ಸಂಬಂಧಿಗಳು ನನಗೆ ಬೆಂಬಲ ನೀಡಿದರು. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
#WATCH | Patna, Bihar: Manvi Madhu Kashya becomes the first transwoman Sub-Inspector of India. pic.twitter.com/rI1MwviREy
— ANI (@ANI) July 10, 2024