ರಾಣೆಬೆನ್ನೂರು | ‘ಅಂಬೇಡ್ಕರ್ ಸರ್ಕಲ್’ ನಾಮಕರಣಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ದಸಂಸ ಮನವಿ

Date:

Advertisements

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರಸಭೆ ಹಾಗೂ ಸಂಗಮ ಟಾಕೀಸ್‌ ಮಧ್ಯದಲ್ಲಿರುವ ವೃತ್ತಕ್ಕೆ ಡಾ.ಬಿ.ಆರ್. ಅಂಬೇಡ್ಕರ ನಾಮಫಲಕವನ್ನು ಅಳವಡಿಸಲಾಗಿದೆ. ಈ ವೃತ್ತಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಎಂದು ನಾಮಕರಣ ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಹಾವೇರಿಯ ನೂತನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಜಿಲ್ಲಾಡಳಿತ ಭವನದಲ್ಲಿ ನೂತನ ಜಿಲ್ಲಾಧಿಕಾರಿಗಳಾದ ವಿಜಯ ಮಹಾಂತೇಶ್ ದಾನಮ್ಮನವರ ಅವರನ್ನು ಭೇಟಿಯಾದ ದಲಿತ ಸಂಘರ್ಷ ಸಮಿತಿಯ ಮುಖಂಡರು, ಗೌರವಿಸಿ ಸನ್ಮಾನಿಸಿದರು. ಆ ಬಳಿಕ ಮನವಿ ಸಲ್ಲಿಸಲಾಯಿತು.

ರಾಣೆಬೆನ್ನೂರು ನಗರದಲ್ಲಿ ಸಂವಿಧಾನ ಶಿಲ್ಪಿ ಮಹಾಮಾನವತಾವಾದಿ ಭಾರತರತ್ನ ಡಾ ಬಿ. ಆರ್. ಅಂಬೇಡ್ಕರ್ ಅವರ ನಾಮ ಫಲಕವನ್ನು ಅಳವಡಿಸಿದ್ದು, ನಗರದ ಬೃಹತ್ ವೃತ್ತಕ್ಕೆ ಡಾ.ಬಿ. ಆರ್. ಅಂಬೇಡ್ಕರ್ ಅವರ ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡಲು ಅನೇಕರು ಹಲವಾರು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಗಳಿಗೆ, ನಗರಸಭೆಗೆ ಮನವಿ ಸಲ್ಲಿಸುತ್ತಾ ಬಂದಿದೆ. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಂಬೇಡ್ಕರ್ ಸರ್ಕಲ್ ಎಂದು ನಾಮಕರಣ ಮಾಡುವುದರ ಜೊತೆಗೆ ಅಂಬೇಡ್ಕರ್‌ ಅವರ ಪುತ್ಥಳಿಯನ್ನು ಕೂಡ ಪ್ರತಿಪ್ಠಾಪಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿಗೆ ಸ್ಪಂದಿಸದಿದ್ದಲ್ಲಿ ಹೋರಾಟ ನಡೆಸುವುದಾಗಿ ನಿಯೋಗ ತಿಳಿಸಿದೆ.

Advertisements

ಈ ಸಂದರ್ಭದಲ್ಲಿ ದಸಂಸ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ, ರಾಜ್ಯ ಮುಖಂಡರಾದ ಅಕ್ಷತಾ ಕೆ ಸಿ, ಜಿಲ್ಲಾ ಪ್ರಧಾನ ಸಂಚಾಲಕರಾದ ಮಲ್ಲೇಶಪ್ಪ ಡಿ, ಮೆಣಸಿನಹಾಳ ಜಿಲ್ಲಾ ಸಂಚಾಲಕರಾದ ಮಂಜಪ್ಪ ಮರೋಳ, ರೇಣುಕಾ ಬಡಕ್ಕಣ್ಣನವರ, ಹನುಮಂತಪ್ಪ ಕಬ್ಬಾರ, ಮಲ್ಲೇಶ ಕಜ್ಜರಿ, ಮೈಲಪ್ಪ ಡಿ,ಜಗದೀಶ ಹರಿಜನ, ಪ್ರವೀಣ ಸಣ್ಣ ನೀಲಪ್ಪನವರ, ಮಲ್ಲೇಶ ನಿಂಗಮ್ಮನವರ, ಸೋನು ಕರೆತಿಮ್ಮಣ್ಣನವರ, ಭರತ್ ಪೂಜಾರ, ನವೀನ ಮೆಣಿಸಿನಹಾಳ, ಪ್ರವೀಣ ಮುದೇನೂರ, ನೀಕಿತ್ ಮೆಣಿಸಿನಹಾಳ, ಮಂಜು ಗುಡ್ಡಣ್ಣನವರ, ಮಲ್ಲೇಶಪ್ಪ ಹರಿಜನ, ಶ್ಯಾಮ್ ಪೂಜಾರ, ರಾಕೇಶ್ ಪೂಜಾರ, ಆಕಾಶ್, ಹಾಲೇಶ, ಸುರೇಶ, ಪ್ರೇಮ, ಕಿರಣ, ಮಾಂತೇಶ ಬಸವಣ್ಣೆಪ್ಪ, ಫಕೀರಪ್ಪ, ನೀಲಪ್ಪ ಹಾಗೂ ಇತರರು ಇದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದ.ಕ. | ಹೊಂಡ ಗುಂಡಿಗಳಿಗೆ ಬಿದ್ದು ವಾಹನ ಸವಾರರು ಮೃತಪಟ್ಟರು ಜನಪ್ರತಿನಿಧಿಗಳಿಗೆ ಲೆಕ್ಕವಿಲ್ಲ: ಡಿವೈಎಫ್ಐ

ಬೈಕಂಪಾಡಿ ಕೈಗಾರಿಕಾ ವಲಯದ ಹೆದ್ದಾರಿ ಸಂಪರ್ಕಿಸುವ ರಸ್ತೆ ಸೇರಿದಂತೆ ಬಹುತೇಕ ಒಳ...

ಬೀದರ್‌ | ಬಸವಲಿಂಗ ಪಟ್ಟದ್ದೇವರದ್ದು ಬಸವಮಯ ಬದುಕು : ನಿವೃತ್ತ ನ್ಯಾ. ಶಿವರಾಜ ಪಾಟೀಲ್

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರದ್ದು ಬಸವಮಯ ಬದುಕು...

ಕೊಡಗು | ಮಾನಸಿಕ ಸಮತೋಲನಕ್ಕೆ ಕ್ರೀಡಾಭ್ಯಾಸ ಅತ್ಯಗತ್ಯ : ಶಾಸಕ ಎ ಎಸ್ ಪೊನ್ನಣ್ಣ

ಕೊಡಗು ಜಿಲ್ಲೆ, ವಿರಾಜಪೇಟೆಯ ಪ್ರಗತಿ ಶಾಲೆ ಆವರಣದಲ್ಲಿ ಆಯೋಜನೆಗೊಂಡಿರುವ, ವಿರಾಜಪೇಟೆ ತಾಲೂಕು...

Download Eedina App Android / iOS

X