ಏಳು ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಹಿಮಾಚಲ ಪ್ರದೇಶದ ಡೆಹ್ರಾ ವಿಧಾನಸಭೆ ಕ್ಷೇತ್ರದಲ್ಲಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಪತ್ನಿ, ಕಾಂಗ್ರೆಸ್ ಅಭ್ಯರ್ಥಿ ಕಮಲೇಶ್ ಠಾಕೂರ್ ಗೆಲುವು ಸಾಧಿಸಿದ್ದಾರೆ.
ಕಮಲೇಶ್ ಠಾಕೂರ್ ಅವರು ಬಿಜೆಪಿ ಅಭ್ಯರ್ಥಿ ಹೋಶಿಯಾರ್ ಸಿಂಗ್ ಅವರನ್ನು 9,399 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಮೊದಲ ಬಾರಿಗೆ ಡೆಹ್ರಾ ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಕಂಡಿದೆ.
ಉಪಚುನಾವಣೆಯಲ್ಲಿ ಠಾಕೂರ್ ಅವರು 32,737 ಮತಗಳನ್ನು ಪಡೆದಿದ್ದಾರೆ. ಹೋಶಿಯಾರ್ ಸಿಂಗ್ ಅವರು 23,338 ಮತಗಳನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಮೂವರು ಪಕ್ಷೇತರ ಅಭ್ಯರ್ಥಿಗಳು ತಲಾ 200 ಮತಗಳನ್ನು ಗಳಿಸಲು ಸಾಧ್ಯವಾಗಲಿಲ್ಲ.
ಇದನ್ನು ಓದಿದ್ದೀರಾ? ಉಪಚುನಾವಣೆ ಫಲಿತಾಂಶ | 1ರಲ್ಲಿ ‘ಇಂಡಿಯಾ’; ಅಭ್ಯರ್ಥಿ ಗೆಲುವು ; 10 ಮುನ್ನಡೆ; 2ರಲ್ಲಿ ಮಾತ್ರ ಎನ್‌ಡಿಎ ಮುನ್ನಡೆ
2012ರಲ್ಲಿ ಡೆಹ್ರಾ ವಿಧಾನಸಭೆ ಕ್ಷೇತವನ್ನು ರಚಿಸಲಾಗಿದೆ. ಇದಾದ ಬಳಿಕ ಇಲ್ಲಿ ಸ್ವತಂತ್ರ್ಯ ಅಭ್ಯರ್ಥಿಗಳು ಮತ್ತು ಬಿಜೆಪಿ ಮಾತ್ರ ಗೆಲುವು ಕಂಡಿತ್ತು. ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಸಚಿವ ರವಿ ಇಂದರ್ ಸಿಂಗ್ ಅವರು 2012ರಲ್ಲಿ ಗೆಲುವು ಕಂಡಿದ್ದರೆ, ಹೋಶಿಯಾರ್ ಸಿಂಗ್ ಅವರು 2017 ಮತ್ತು 2022ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಜಯ ಗಳಿಸಿದ್ದಾರೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಡೆಹ್ರಾ ಕ್ಷೇತ್ರವನ್ನು ತನ್ನ ಪಾಲಾಗಿಸಿದೆ.
ಡೆಹ್ರಾ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟಾಗಿ 86,520 ಮತದಾರರಿದ್ದು ಶೇಕಡ 65.42ರಷ್ಟು ಮತದಾರರು ಜುಲೈ 10ರಂದು ನಡೆದ ಉಪಚುನಾವಣೆಯಲ್ಲಿ ಮತದಾನ ಮಾಡಿದ್ದರು.
#WATCH | Kangra, Himachal Pradesh: On winning the Dehra assembly by-polls, CM Sukhvinder Singh Sukhu’s wife Kamlesh Thakur says, “The party leaders and workers worked day and night for this day… I will give all credit to the people who stood by the party throughout… I am… pic.twitter.com/kbbmH2iOhW
— ANI (@ANI) July 13, 2024