ಐದಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳ ತಂಡವು ಹಾಲಿನ ವಾಹನವನ್ನೇ ಲೂಟಿಗೈದ ಘಟನೆ ರಾಜಸ್ಥಾನದ ಜೋಧ್‌ಪುರ ನಗರದ ಮಥುರಾದಾಸ್ ಮಾಥುರ್ ಆಸ್ಪತ್ರೆ ಬಳಿ ಭಾನುವಾರ ನಡೆದಿದೆ. ಈ ವೈದ್ಯರು ಖೀರ್ ಮಾಡಲೆಂದು ಹಾಲಿನ ವಾಹನದೊಂದಿಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಐವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಘಟನೆ ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಸ್ಥಳೀಯ ವರದಿಗಳ ಪ್ರಕಾರ, 5ಕ್ಕೂ ಹೆಚ್ಚು ಎಂಬಿಬಿಎಸ್ ವಿದ್ಯಾರ್ಥಿಗಳ ಗುಂಪು ಭಾನುವಾರ ಮುಂಜಾನೆ 4 ಗಂಟೆಗೆ ಸರಸ್ ಮಿಲ್ಕ್ ವ್ಯಾನ್ ಮಾಲೀಕ ಸುಖದೇವ್ ವಿಷ್ಣೋಯ್ ಅವರು ಚಲಾಯಿಸುತ್ತಿದ್ದ ಹಾಲಿನ ವಾಹನವನ್ನು ತಡೆದು ನಿಲ್ಲಿಸಿದೆ. ಬಳಿಕ ಸುಖದೇವ್ ಜೊತೆ ಅನುಚಿತವಾಗಿ ವರ್ತಿಸಿ ಹಾಲು ಇದ್ದ ವಾಹನದೊಂದಿಗೆ ಪರಾರಿಯಾಗಿದ್ದಾರೆ ಎಂದು ಈ ಬಗ್ಗೆ ಪೊಲೀಸ್ ಅಧಿಕಾರಿ ದೇವೇಂದ್ರ ಸಿಂಗ್ ದೇವ್ಡಾ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ದಿನವೊಂದಕ್ಕೆ 1 ಕೋಟಿ ಲೀಟರ್ ಹಾಲು ಉತ್ಪಾದನೆಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ
ಬಂಧಿತರನ್ನು ಡಾ ಎಸ್‌ಎನ್ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ಧೋರಿಮಣ್ಣ ಗ್ರಾಮದ 22 ವರ್ಷದ ವಿಕಾಸ್ ವಿಷ್ಣೋಯ್, ಸೇಡ್ವಾದ ಓಗಾಲಾ ನಿವಾಸಿ 23 ವರ್ಷದ ಓಂಪ್ರಕಾಶ್ ಜಾಟ್, ಗುಡಾ ಮಲಾನಿಯ ದಬರ್ ಗ್ರಾಮದ ನಿವಾಸಿ 22 ವರ್ಷದ ಮಹೇಶ್ ವಿಷ್ಣೋಯ್ ಎಂದು ಗುರುತಿಸಲಾಗಿದೆ. ಮೂವರು ಕೂಡಾ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ.
ಈ ಬಗ್ಗೆ ಸುಖದೇವ್ ವಿಷ್ಣೋಯ್ ವಾಹನದಲ್ಲಿದ್ದ 24 ಲೀಟರ್ ಹಾಲಿನ ಎರಡು ಕ್ರೇಟ್‌ಗಳ ಮತ್ತು ಹಣವನ್ನು ಕಳ್ಳತನ ಮಾಡಿದ ಆರೋಪದಲ್ಲಿ ಈ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಕಾರ್ಯಾಚರಣೆಗಿಳಿದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಭಾಗಿಯಾಗಿರುವ ಇತರ 2 ಮಂದಿಗಾಗಿ ಶೋಧ ನಡೆಯುತ್ತಿದೆ. ಹೆಚ್ಚಿನ ತನಿಖೆಯ ನಂತರ ಹಾಲಿನ ವಾಹನವನ್ನು ಪಾಲ್ ರಸ್ತೆಯಲ್ಲಿ ಬಿಟ್ಟುಹೋಗಿರುವುದು ಕಂಡುಬಂದಿದೆ. ಆರೋಪಿಗಳ ಮೇಲೆ ದರೋಡೆ ಮತ್ತು ಶಾಂತಿ ಕದಡುವ ಪ್ರಕರಣಗಳು ದಾಖಲಾಗಿವೆ.
Doctors loot milk van.
You read that right!
A milk van was looted in Jodhpur, Rajasthan. In this case, three MBBS students from the medical college, Vikas Bishnoi, Omprakash Jat, and Mahesh Bishnoi, have been caught. Two students are absconding. It is being said that they… pic.twitter.com/qfhKqaAfvP
— Sneha Mordani (@snehamordani) July 15, 2024