ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದಲ್ಲಿ ವಿವಿಧ ಆರೋಪಿಗಳಿಂದ 34.25 ಕೋಟಿ ರೂ. ವಸೂಲಿ ಮಾಡಲಾಗಿದೆ. ಇದುವರೆಗೆ ಸರ್ಕಾರವು 85,25,07,698 ರೂ. ಹಣವನ್ನು (ರೂ. 85.25 ಕೋಟಿ) ವಿವಿಧ ಹಂತಗಳಲ್ಲಿ ತನ್ನ ವಶಕ್ಕೆ ಪಡೆದಿದೆ. ಉಳಿದದ್ದನ್ನು ವಶಕ್ಕೆ ಪಡೆಯುವ ಕೆಲಸ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಸದನಕ್ಕೆ ತಿಳಿಸಿದರು,
ಶುಕ್ರವಾರದ ಅಧಿವೇಶನದಲ್ಲಿ ‘ಮಹರ್ಷಿ ವಾಲ್ಮೀಕಿ ನಿಗಮದ ಹಣ ದುರುಪಯೋಗದ ಕುರಿತ’ ‘ ನಿಯಮ 69ರಡಿ ಚರ್ಚೆಗೆ ಸಂಬಂಧಿಸಿದಂತೆ ಗುರುವಾರ ದಿನದ ಮುಂದುವರೆದ ಭಾಗದ ಸರ್ಕಾರದ ಉತ್ತರವನ್ನು ಸದನದ ಮುಂದೆ ಮಂಡಿಸಿ ಎಸ್ಐಟಿಯು ಇದುವರೆಗೆ ಮುಟ್ಟು ಗೋಲು ಹಾಕಿಕೊಂಡಿರುವ ಮೊತ್ತವನ್ನು ವಿವರಿಸಿದರು.
ವಶಪಡಿಸಿಕೊಂಡ ಮೊತ್ತದ ವಿವರ
1 -14/2024ರಂದು 8,21,62,600 ರೂ. ಸತ್ಯನಾರಾಯಣ ವರ್ಮಾ ಅವರಿಂದ ವಶ
2- 16/2024ರಂದು 3,62,47,200 ರೂ. ಪದ್ಮನಾಭ ಜೆ.ಜಿ. ಅವರಿಂದ ವಶ
3- 17/2024ರಂದು 30,00,000 ರೂ. ಪದ್ಮನಾಭ ಜೆ.ಜಿ. ಅವರಿಂದ ವಶ
4- 18/2024ರಂದು 1,49,65,200 ರೂ. ನಾಗೇಶ್ವರ ರಾವ್ ಅವರಿಂದ ವಶ
5- 20/2024ರಂದು 30,00,000 ರೂ. ಚಂದ್ರಮೋಹನ್ ಅವರಿಂದ ವಶ
6- 26/2024ರಂದು 12,50,000 ಜಿ.ಕೆ. ಜಗದೀಶ್ ಅವರಿಂದ ವಶ
7- 27/2024ರಂದು 3,10,000 ರೂ. ಸತ್ಯನಾರಾಯಣ ವರ್ಮಾ ಅವರಿಂದ ವಶ
8 -28/2024ರಂದು 24,00,000 ಸತ್ಯನಾರಾಯಣ ವರ್ಮಾ ಅವರಿಂದ ವಶ.
ಒಟ್ಟು ನಗದು 14,33,35,000 ರೂ. ವಶ.
9 -207 ಗ್ರಾಂ ಚಿನ್ನ 13,50,000 ರೂ. ಚಂದ್ರಮೋಹನ್ ಅವರಿಂದ ವಶ
10- 47.6 ಗ್ರಾಂ ಚಿನ್ನ 3,09,400 ಜಿ.ಕೆ. ಜಗದೀಶ್ ಅವರಿಂದ ವಶ
ಒಟ್ಟು ನಗದು 14,49,94,400 ರೂ. ವಶ.
11- ವಿವಿಧ 217 ಬ್ಯಾಂಕ್ ಅಕೌಂಟ್ ಗಳನ್ನು ಗುರುತಿಸಿ ಅವುಗಳಲ್ಲಿದ್ದ 13,72,94,132 ರೂ.ಗಳನ್ನು ಫ್ರೀಜ್ ಮಾಡಲಾಗಿರುತ್ತದೆ.
12 – ಈ ಪ್ರಕರಣದಲ್ಲಿ ಭಾಗಿಯಾಗಿರುವ ಸತ್ಯನಾರಾಯಣ ವರ್ಮಾ ಮತ್ತು ಇತರೆ ಆರೋಪಿಗಳು ಅಕ್ರಮವಾಗಿ ಬೇರೆ ವ್ಯಕ್ತಿಗಳ ಖಾತೆಗಳಿಗೆ ವರ್ಗಾಯಿಸಿದ್ದ 1.50 ಕೋಟಿ ರೂ. ಹಣವನ್ನು ಜನರೇ ವಾಪಾಸ್ ಕಟ್ಟಿದ್ದಾರೆ. ಆ ಹಣ ಕೂಡ ಸರ್ಕಾರದಲ್ಲಿದೆ.
13 -ಎಸ್.ಐ.ಟಿ. ಯು ಸತ್ಯನಾರಾಯಣ ವರ್ಮಾ ಲ್ಯಾಂಬೋರ್ಗಿನಿ ಉರಸ್ ಎಂಬ ಕಾರ್‌ನ್ನು ಬಿಗ್‌ಬಾಯ್ಸ್ ಟಾಯ್ಸ್ ಲಿ. ಕಂಪನಿ ಮೂಲಕ ಖರೀದಿ ಮಾಡಿದ್ದ. ಈಗ ಆ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಸದರಿ ಕಂಪನಿಯು ಕಾರನ್ನು ವಾಪಸ್ ಪಡೆದು 3,31,19,166 ರೂ. ಹಣವನ್ನು ಸರ್ಕಾರಕ್ಕೆ ಮರಳಿಸುವುದಾಗಿ ಸಂಬಂಧಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ.
14- ಇದೇ ಸತ್ಯನಾರಾಯಣ ವರ್ಮಾ 1.21 ಕೋಟಿಗೂ ಹೆಚ್ಚು ಬೆಲೆಬಾಳುವ ಬೆಂಜ್ ಕಾರನ್ನು ಖರೀದಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಕಾರನ್ನು ಎಸ್.ಐ.ಟಿ.ಯು ತನ್ನ ವಶಕ್ಕೆ ಪಡೆದಿರುತ್ತದೆ. ಈ ಕಾರನ್ನೂ ಸಹ ಮರಳಿ ಕಂಪನಿಗೆ ನೀಡಿ ಅದರ ಮೌಲ್ಯವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಚಾಲನೆಯಲ್ಲಿದೆ.
15- 23.05.2024 ರಂದು ಅಕ್ರಮವಾಗಿ ವರ್ಗಾವಣೆಯಾಗಿದ್ದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ [ರತ್ನಾಕರ್ ಬ್ಯಾಂಕ್] ಎಸ್.ಟಿ. ನಿಗಮದ ಖಾತೆಗೆ 5 ಕೋಟಿ ರೂ. ಮರಳಿಸಿರುತ್ತಾರೆ.
16 -ಯೂನಿಯನ್ ಬ್ಯಾಂಕ್‌ನಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದ್ದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 46.00 ಕೋಟಿಗೂ ಹೆಚ್ಚು ಹಣ ರತ್ನಾಕರ್ ಬ್ಯಾಂಕ್ ನಲ್ಲಿದೆ. ಈ ಹಣವನ್ನು ನಮ್ಮ ಎಸ್.ಐ.ಟಿ. ತಂಡವು ಫ್ರೀಜ್ ಮಾಡಿರುತ್ತದೆ. ಅದನ್ನು ಹಿಂಪಡೆಯುವ ಪ್ರಕ್ರಿಯೆ ಪ್ರಾರಂಭಿಸಲಾಗುತ್ತಿದೆ. ಇದೆಲ್ಲವೂ ಒಟ್ಟು 85,25,07,698 ರೂ. ಆಗಿದೆ.