“ಅಬಕಾರಿ ನೀತಿ ಹಗರಣದ ಆರೋಪದಲ್ಲಿ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉದ್ದೇಶಪೂರ್ವಕವಾಗಿ ಕಡಿಮೆ ಕ್ಯಾಲೋರಿ ಸೇವಿಸಿದ್ದಾರೆ. ಅವರಿಗೆ ಸೂಚಿಸಿದ ಆಹಾರ ಮತ್ತು ಔಷಧಿಗಳನ್ನು ತೆಗೆದುಕೊಳ್ಳುತ್ತಿಲ್ಲ” ಎಂದು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಆರೋಪಿಸಿದ್ದಾರೆ.
ಈ ಬಗ್ಗೆ ವಿಕೆ ಸಕ್ಸೇನಾ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್‌ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಸಕ್ಸೇನಾ ಅವರು ಕೇಜ್ರಿವಾಲ್ ಅವರ ಆರೋಗ್ಯದ ಕುರಿತು ಉಲ್ಲೇಖ ಮಾಡಿದ್ದಾರೆ. “ಮುಖ್ಯಮಂತ್ರಿ ಅವರಿಗೆ ಮನೆಯಲ್ಲೇ ತಯಾರಿಸಿದ ಆಹಾರ ಸಾಕಷ್ಟು ಲಭ್ಯವಿದ್ದರೂ ಕೂಡಾ ಅವರು ಉದ್ದೇಶಪೂರ್ವಕವಾಗಿ ಕಡಿಮೆ ಕ್ಯಾಲೊರಿಗಳನ್ನು ಸೇವಿಸಿದ್ದಾರೆ” ಎಂದು ದೂರಿದ್ದಾರೆ.
ಟೈಪ್-II ಡಯಾಬಿಟಿಸ್ ಮೆಲ್ಲಿಟಸ್‌ನ ಇತಿಹಾಸವನ್ನು ಹೊಂದಿರುವುದರಿಂದ ನಿರ್ದಿಷ್ಟಪಡಿಸಿದ ಆಹಾರದ ಹೊರತಾಗಿ ಔಷಧಿ ಮತ್ತು ಇನ್ಸುಲಿನ್‌ನ ನಿಗದಿತ ಡೋಸೇಜ್ ಅನ್ನು ಅನುಸರಿಸಲು ಜೈಲು ಅಧಿಕಾರಿಗಳು ಸಿಎಂಗೆ ಸಲಹೆ ನೀಡಬೇಕೆಂದು ಸಕ್ಸೇನಾ ಶಿಫಾರಸು ಮಾಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
Delhi Raj Niwas writes to Chief Secretary Naresh Kumar regarding Chief Minister Arvind Kejriwal’s health status.
Citing the prison Superintendent report, the letter reads, “LG has expressed concern on the non-consumption of prescribed medical diet and medications by Chief… pic.twitter.com/oVYrc326Ze
— ANI (@ANI) July 20, 2024
“ಕೇಜ್ರಿವಾಲ್ ಅವರ ತೂಕ ಭಾರೀ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣವೂ ಕೂಡಾ ಆಗಾಗೆ ಕಡಿಮೆಯಾಗುತ್ತಿದೆ. ಒಂದೇ ರಾತ್ರಿಯಲ್ಲಿ ಐದು ಬಾರಿ ರಕ್ತದೊತ್ತಡ 50 ಮಿಗ್ರಾಂ/ಡಿಎಲ್‌ಗೆ ಇಳಿದಿದೆ. ಇದರಿಂದ ಕೇಜ್ರಿವಾಲ್ ಕೋಮಾಕ್ಕೆ ಜಾರಬಹುದು ಅಥವಾ ಅವರ ಮೆದುಳಿಗೆ ಹಾನಿಯಾಗಬಹುದು. ಜೈಲಿನಲ್ಲಿ ಕೇಜ್ರಿವಾಲ್ ಅವರ ಆರೋಗ್ಯಕ್ಕೆ ಹಾನಿ ಮಾಡಲು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಪಿತೂರಿ ನಡೆಸುತ್ತಿದೆ. ” ಎಂದು ಎಎಪಿ ಆರೋಪಿಸಿದೆ.
ಇದನ್ನು ಓದಿದ್ದೀರಾ? ಅರವಿಂದ್ ಕೇಜ್ರಿವಾಲ್ ಕೋಮಾಗೆ ಜಾರಬಹುದು ಎಂದ ಎಎಪಿ, ತಿಹಾರ್ ಜೈಲು ಹೇಳುವುದೇನು?
“ಜೂನ್ 6 ಮತ್ತು ಜುಲೈ 13ರ ನಡುವೆ ಕೇಜ್ರಿವಾಲ್ ಅವರು ದಿನದ ಎಲ್ಲಾ ಮೂರು ಊಟಗಳಿಗೆ ನಿಗದಿಪಡಿಸಿದ ಆಹಾರವನ್ನು ಸಂಪೂರ್ಣವಾಗಿ ಸೇವಿಸಿಲ್ಲ ಎಂದು ಡಯಟ್ ಮಾನಿಟರಿಂಗ್ ಚಾರ್ಟ್ ಹೇಳುತ್ತದೆ. (ಜೂನ್ 2ರಂದು 63.5 ಕೆಜಿ ಇತ್ತು. ಈ ಹೊತ್ತಿಗೆ 61.5 ಕೆಜಿ ಇದೆ) ಇದು ಅವರು ಕಡಿಮೆ ಕ್ಯಾಲೋರಿ ಸೇವಿಸಿರುವುದರಿಂದ ಆಗಿದೆ” ಎಂದು ಸಕ್ಸೇನಾ ತನ್ನ ಪತ್ರದಲ್ಲಿ ತಿಳಿಸಿದ್ದಾರೆ.
“ಜೂನ್ 18ರಂದು, ಅವರಿಗೆ ಇನ್ಸುಲಿನ್ ನೀಡಲಾಗಿಲ್ಲ ಅಥವಾ ಜೈಲು ಅಧಿಕಾರಿಗಳು ವರದಿಯಲ್ಲಿ ದಾಖಲಿಸಿಲ್ಲ ಎಂದು ತೋರುತ್ತದೆ. ಇದರಿಂದಾಗಿ ನಿರಂತರವಾಗಿ ಗ್ಲೂಕೋಸ್ ಮಾನಿಟರಿಂಗ್ ಸಿಸ್ಟಮ್ ಗಮನಾರ್ಹ ವ್ಯತ್ಯಾಸ ಕಂಡಿದೆ. ಜುಲೈ 6ರಂದು ಎಲ್ಲಾ ಮೂರು ಊಟದ ಸಮಯದಲ್ಲಿ ಸಿಎಂ ನಿಗದಿತ ಆಹಾರವನ್ನು ಸೇವಿಸಲಿಲ್ಲ. ಜುಲೈ 7ರಂದು ನಿಗದಿತ ಆಹಾರವನ್ನು ಮತ್ತೆ ಸೇವಿಸಲಿಲ್ಲ, ಇನ್ಸುಲಿನ್ ಕೂಡಾ ನಿರಾಕರಿಸಿದ್ದಾರೆ” ಎಂದು ಜೈಲು ವರದಿಯನ್ನು ಉಲ್ಲೇಖಿಸಿ ಸಕ್ಸೇನಾ ಪತ್ರ ಬರೆದಿದ್ದಾರೆ.
LG साहब, क्या आप ख़ुद समझ रहे हैं आपने क्या लिखा है? आप बताइए कि क्या कोई व्यक्ति ख़ुद ही अपनी जान से खिलवाड़ करेगा?
CM @ArvindKejriwal जी की सेहत और जान से खिलवाड़ करने की आपकी और BJP की साज़िश का खुलासा होने के बाद आपसे जवाब देते नहीं बन रहा।
इसी उलझन का नतीजा यह पत्र है,… pic.twitter.com/rhIqpU5nD3
— AAP (@AamAadmiParty) July 20, 2024
ಗವರ್ನರ್ ಪತ್ರಕ್ಕೆ ತಿರುಗೇಟು ನೀಡಿರುವ ದೆಹಲಿ ಸಚಿವ ಸೌರಭ್ ಭಾರದ್ವಾಜ್, “ಎಲ್‌ಜಿ ಸಾಹೇಬರು ವೈದ್ಯರಾಗಿದ್ದರೇ? ನನಗೆ ತಿಳಿದಿರುವಂತೆ, ಎಲ್‌ಜಿ ಸಾಹೇಬರು ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರೂ ಕೂಡಾ ವೈದ್ಯರಾಗಿದ್ದರು ಎಂದು ನನಗೆ ತಿಳಿದಿರಲಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
ಜುಲೈ 13ರಂದು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಅರವಿಂದ್ ಕೇಜ್ರಿವಾಲ್ ಅವರು ಜೈಲಿನಲ್ಲಿ 8.5 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದು ‘ಗಂಭೀರ ಅನಾರೋಗ್ಯದ’ ಸಂಕೇತ ಎಂದು ಆತಂಕ ವ್ಯಕ್ತಪಡಿಸಿದ್ದರು.