ಕೊಪ್ಪಳ | ಗ್ರಾಹಕನಿಗೆ ದೋಸೆ ಬದಲು ‘ಹಣದ ಬಂಡಲ್‌’ ಅನ್ನೇ ಕೊಟ್ಟ ಹೋಟೆಲ್ ಮಾಲೀಕ!

Date:

Advertisements

ದೋಸೆಯನ್ನು ಪಾರ್ಸಲ್‌ ಕಟ್ಟಿಕೊಡಲು ಆರ್ಡರ್‌ ಮಾಡಿದ್ದ ಗ್ರಾಹಕನಿಗೆ ಹೋಟೆಲ್ ಮಾಲೀಕ ದೋಸೆ ಬದಲು ಹಣದ ಬಂಡಲ್‌ಅನ್ನೇ ಕಟ್ಟಿಕೊಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಶನಿವಾರ ನಡೆದಿದೆ.

ಹೋಟೆಲ್ ಮಾಲೀಕರೊಬ್ಬರು ಗ್ರಾಹಕರಿಗೆ ಆಹಾರ ಪಾರ್ಸೆಲ್‌ ಕಟ್ಟುವ ಭರದಲ್ಲಿ ದೋಸೆ ಬದಲಿಗೆ, ಬ್ಯಾಂಕಿಗೆ ಕಟ್ಟಲು ಕೂಡಿಸಿಟ್ಟಿದ್ದ 49,625 ರೂ.ದ ಚೀಲವನ್ನು ಕೊಟ್ಟು ಕಳಿಸಿದ್ದಾರೆ. ಮನೆಯಲ್ಲಿ ಚೀಲವನ್ನು ತೆರೆದು ನೋಡಿದಾಗ, ಹಣವಿರುವುದನ್ನು ಕಂಡ ಗ್ರಾಹಕ ಶ್ರೀನಿವಾಸ ಎನ್.ದೇಸಾಯಿ ಎಂಬವರು ಹಣವನ್ನು ಹೋಟೆಲ್ ಮಾಲೀಕನಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಇದನ್ನು ಓದಿದ್ದೀರಾ? ಅಂಕೋಲಾ ಗುಡ್ಡ ಕುಸಿತ | ಮುಂದುವರಿದ ರಕ್ಷಣಾ ಕಾರ್ಯಾಚರಣೆ; ಲಾರಿ ಚಾಲಕ ಜೀವಂತ ಮರಳಲು ಜನರ ಪ್ರಾರ್ಥನೆ

Advertisements

ಶಿಕ್ಷಕನಾಗಿರುವ ದೇಸಾಯಿ ಶನಿವಾರ ಬೆಳಗ್ಗೆ ಶಾಲೆಗೆ ಹೋಗುವ ಗಡಿಬಿಡಿಯಲ್ಲಿ, ತಮ್ಮ ಮಗಳಿಗಾಗಿ ಹೋಟೆಲ್‌ನಲ್ಲಿ ದೋಸೆ ಕಟ್ಟಿಸಿಕೊಂಡು ಬಂದಿದ್ದರು. ಆದರೆ, ಹೋಟೆಲ್ ಮಾಲೀಕ ರಸೂಲ್ ಖಾನ್ ಅವರು ದೋಸೆ ಪಾರ್ಸೆಲ್ ಕಟ್ಟಿದ್ದ ಚೀಲ ಕೊಡುವ ಬದಲು, ಬ್ಯಾಂಕಿಗೆ ಕಟ್ಟಲು ಇಟ್ಟುಕೊಂಡಿದ್ದ 49,625 ರೂ ಹಣದ ಬಂಡಲ್ ಅನ್ನು ಕೊಟ್ಟಿದ್ದರು ಎಂದು ವರದಿಯಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಕೊಲೆಯಾದ ದಲಿತ ವಿದ್ಯಾರ್ಥಿನಿ ಮನೆಗೆ ಎಸ್ಎಫ್ಐ ನಿಯೋಗ; ಪೋಷಕರ ಭೇಟಿ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೋವೆರಹಟ್ಟಿ ಗ್ರಾಮದ ಕೊಲೆಗೀಡಾದ ದಲಿತ ವಿದ್ಯಾರ್ಥಿನಿ...

ಸಿಎಂ ಸ್ಥಾನ ಸಿಗುತ್ತೆ ಎಂದರೆ ನಾನು ಕೂಡ ಆರ್‌ಎಸ್‌ಎಸ್‌ ಗೀತೆ ಹಾಡುತ್ತೇನೆ: ಸಚಿವ ಸತೀಶ್ ಜಾರಕಿಹೊಳಿ

ಆರ್‌ಎಸ್‌ಎಸ್‌ ಗೀತೆ ಹಾಡಿದರೆ ಮುಖ್ಯಮಂತ್ರಿ ಸ್ಥಾನ ಸಿಗುತ್ತೆ ಎಂದರೆ ನಾನು, ಶಾಸಕ...

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

Download Eedina App Android / iOS

X