ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಟಿಎಂಸಿ ರ್‍ಯಾಲಿಯಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಿಸಿದರು.
ಟಿಎಂಸಿಯ ಹುತಾತ್ಮರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್, “ಅಧಿಕಾರಕ್ಕೆ ಬಂದವರು ಕೆಲವೇ ದಿನಗಳ ಅತಿಥಿಗಳು. ಕೇಂದ್ರದಲ್ಲಿ ಈ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ ಮತ್ತು ಶೀಘ್ರದಲ್ಲೇ ಬೀಳುತ್ತದೆ. ಇಂತಹ ಕೋಮುವಾದಿ ಶಕ್ತಿಗಳು ಯಾವುದೇ ಬೆಲೆ ತೆತ್ತಾದರೂ ಅಧಿಕಾರದಲ್ಲಿರಲು ಬಯಸುತ್ತಾರೆ. ಆದರೆ ಅದರಲ್ಲಿ ಯಶಸ್ವಿಯಾಗುವುದಿಲ್ಲ” ಎಂದು ಬಿಜೆಪಿ ಅಥವಾ ಎನ್‌ಡಿಎ ಹೆಸರಿಸದೆ ಹೇಳಿದರು.
“ಕೇಂದ್ರದಲ್ಲಿರುವ ಕೋಮುವಾದಿ ಶಕ್ತಿಗಳು ಪಿತೂರಿಗಳನ್ನು ರೂಪಿಸುತ್ತಿವೆ. ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ. ದೇಶವನ್ನು ಕೋಮುವಾದದ ಆಧಾರದಲ್ಲಿ ವಿಭಜಿಸಲು ಬಯಸುವ ಶಕ್ತಿಗಳು ತಾತ್ಕಾಲಿಕ ಯಶಸ್ಸನ್ನು ಅನುಭವಿಸಬಹುದು. ಆದರೆ ಅವರು ಅಂತಿಮವಾಗಿ ಸೋಲಿಸುತ್ತಾರೆ. ಅಂತಹ ಕೋಮುವಾದಿ ಶಕ್ತಿಗಳು ಯಾವುದೇ ಬೆಲೆಯಲ್ಲಿ ಅಧಿಕಾರದಲ್ಲಿರಲು ಬಯಸುತ್ತವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮುಂಬೈ | ಉದ್ಧವ್ ಠಾಕ್ರೆ ಭೇಟಿ ಬಳಿಕ ‘ಆಟ ಆರಂಭ’ ಎಂದ ಮಮತಾ ಬ್ಯಾನರ್ಜಿ
ಇನ್ನು ಅಖಿಲೇಶ್ ಯಾದವ್ ಹೇಳಿಕೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೆಂಬಲಿಸಿದರು. “ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ‘ಬೆದರಿಕೆ’ ಮೂಲಕ ರಚಿಸಲಾಗಿದೆ. ಆದ್ದರಿಂದ ಹೆಚ್ಚು ಕಾಲ ಉಳಿಯುವುದಿಲ್ಲ” ಎಂದು ಹೇಳಿದರು.
“ಕೇಂದ್ರದಲ್ಲಿ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ, ಇದು ಸ್ಥಿರ ಸರ್ಕಾರವಲ್ಲ ಮತ್ತು ಶೀಘ್ರದಲ್ಲೇ ಪತನವಾಗಲಿದೆ” ಎಂದರು.
ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿ ಸಾಧನೆಗಾಗಿ ಅಖಿಲೇಶ್ ಯಾದವ್ ಅವರನ್ನು ಶ್ಲಾಘಿಸಿದ ಬ್ಯಾನರ್ಜಿ, “ನೀವು ಯುಪಿಯಲ್ಲಿ ಆಡಿದ ‘ಖೇಲ್’ (ಆಟ) ಬಿಜೆಪಿ ಸರ್ಕಾರವನ್ನು (ಯುಪಿಯಲ್ಲಿ) ರಾಜೀನಾಮೆ ನೀಡುವಂತೆ ಮಾಡಬೇಕಾಗಿತ್ತು. ಆದರೆ ಆದರೆ ನಾಚಿಕೆಯಿಲ್ಲದ ಸರ್ಕಾರವು ಏಜೆನ್ಸಿಗಳು ಮತ್ತು ಇತರ ವಿಧಾನಗಳನ್ನು ದುರುಪಯೋಗಪಡಿಸಿಕೊಂಡು ಅಧಿಕಾರದಲ್ಲಿ ಮುಂದುವರಿಯುತ್ತಿದೆ” ಎಂದು ದೂರಿದರು.
“ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ನೀವು ನಮ್ಮನ್ನು ಕೆಣಕಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದಿಂದ ಮಾತ್ರ ಭಾರತದ ಅಸ್ತಿತ್ವವನ್ನು ಕಾಪಾಡಬಹುದು, ಬಂಗಾಳವಿಲ್ಲದೆ ಭಾರತವಿಲ್ಲ” ಎಂದರು.
VIDEO | West Bengal CM Mamata Banerjee (@MamataOfficial) and Samajwadi Party chief Akhilesh Yadav (@yadavakhilesh) arrive at TMC’s Martrys’ Day rally being organised in Kolkata.
(Full video available on PTI Videos – https://t.co/dv5TRARJn4) pic.twitter.com/FEntFwWGYh
— Press Trust of India (@PTI_News) July 21, 2024