ಕುತ್ತು ತಂದ ಕಾಂಟ್ಯಾಕ್ಟ್ ಲೆನ್ಸ್; ಕಣ್ಣು ಕಳೆದುಕೊಳ್ಳುವ ಭೀತಿಯಲ್ಲಿ ಕನ್ನಡದ ನಟಿ?

Date:

Advertisements

ಕನ್ನಡ, ತಮಿಳು ಸಿನಿಮಾಗಳು ಹಾಗೂ ಹಲವು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಜಾಸ್ಮಿನ್ ಭಾಸಿನ್ ಅವರ ಜೀವನ ಈಗ ಸಂಕಷ್ಟಕ್ಕೆ ಸಿಲುಕಿದೆ. ಕಣ್ಣಿಗೆ ಲೆನ್ಸ್ ಹಾಕುವ ಪ್ರಯತ್ನದಲ್ಲಿದ್ದ ಅವರು ಕಣ್ಣಿನ ಕಾರ್ನಿಯಲ್​ಗೆ ಹಾನಿ ಮಾಡಿಕೊಂಡಿದ್ದಾರೆ. ಇದರಿಂದ ಅವರ ದೃಷ್ಟಿಗೆ ತೊಂದರೆಯಾಗಿ ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಜುಲೈ 17ರಂದು ನಾನು ದೆಹಲಿಯಲ್ಲಿ ಕಾರ್ಯಕ್ರಮ ಒಂದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ನನ್ನ ಕಾಂಟ್ಯಾಕ್ಟ್ ಲೆನ್ಸ್​ನಲ್ಲಿ ಏನು ಸಮಸ್ಯೆ ಆಯಿತು ಅನ್ನೋದು ಗೊತ್ತಿಲ್ಲ. ಅದನ್ನು ಧರಿಸಿದಾಗ ನನ್ನ ಕಣ್ಣಿಗೆ ತೊಂದರೆಯಾಗಿ ಉರಿಯುವುದಕ್ಕೆ ಆರಂಭಿಸಿತು. ನಂತರದಲ್ಲಿ ಉರಿ ಮತ್ತಷ್ಟು ಹೆಚ್ಚಾಯಿತು’ ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕನ್ನಡ ವಿರೋಧಿ ಫೋನ್ ಪೇ ವಿರುದ್ಧ ನಟ ಸುದೀಪ್ ಆಕ್ರೋಶ: ರಾಯಭಾರಿ ಒಪ್ಪಂದದಿಂದ ಹೊರಬರುವ ಸೂಚನೆ?

Advertisements

“ಈ ಘಟನೆ ಬಳಿಕ ನನಗೆ ಕಣ್ಣು ಸರಿಯಾಗಿ ಕಾಣುತ್ತಿಲ್ಲ. ನಾನು ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಅವರು ಪರೀಕ್ಷೆ ಮಾಡಿ ಹೇಳಿದ ಪ್ರಕಾರ ನನ್ನ ಕಾರ್ನಿಯಲ್​ಗೆ ಡ್ಯಾಮೇಜ್ ಆಗಿದೆಯಂತೆ. ಅವರು ಕಣ್ಣಿಗೆ ಪಟ್ಟಿ ಹಾಕಿದ್ದಾರೆ. ನನಗೆ ನೋವು ವಿಪರೀತವಾಗುತ್ತಿದ್ದು ಶೀಘ್ರದಲ್ಲಿ ಚೇತರಿಕೆಯಾಗುವುದಾಗಿ ವೈದ್ಯರು ಭರವಸೆ ನೀಡಿದ್ದಾರೆ” ಎಂದು ಜಾಸ್ಮಿನ್ ಭಾಸಿನ್ ತಿಳಿಸಿದ್ದಾರೆ.

ಜಾಸ್ಮಿನ್ ಅವರು ಸಿನಿಮಾ ಹಾಗೂ ಹಲವು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕೋಮಲ್‌ ಅಭಿನಯದ ಕನ್ನಡದ ‘ಕ್ರೋರ್​ಪತಿ’ ಸಿನಿಮಾದಲ್ಲಿ ಜಾಸ್ಮಿನ್ ಅವರು ಅಭಿನಯಿಸಿದ್ದಾರೆ. ಹಿಂದಿಯ ಬಿಗ್ ಬಾಸ್​ನಲ್ಲೂ ಅವರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

Download Eedina App Android / iOS

X