ಹಿರಿಯ ಪತ್ರಕರ್ತ ಶಶಿಧರ ಭಟ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದ ಸಿಎಂ ಸಿದ್ದರಾಮಯ್ಯ ಅವರು ಶಶಿಧರ್ ಭಟ್ ಅವರ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ.
ಶಶಿಧರ ಭಟ್ ಅವರು ಆಸ್ಪತ್ರೆಯ ಬೆಡ್ ಮೇಲಿಂದನೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿ, “ನಾನು ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿದ್ದೇನೆ. ಅನಾರೋಗ್ಯ ಸಮಸ್ಯೆ ಈಗ ನನ್ನ ಕಣ್ಣು ತೆರೆಸಿದೆ. ಆಸ್ಪತ್ರೆಯ ಜಗತ್ತು ಎಷ್ಟು ಕ್ರೂರವಾದದ್ದು ಎಂಬುದು ಅರಿವಿಗೆ ಬಂದಿದೆ. ಹಾಗೆಯೇ ನಮ್ಮ ಸುತ್ತ ಇರುವವರು ಈ ಘಳಿಗೆಯಲ್ಲಿ ಯಾರು ನನ್ನವರಲ್ಲ ಎಂಬುದು ಅರ್ಥವಾಗುತ್ತಿದೆ. ಪ್ರೀತಿ, ನಂಬಿಕೆ ಸಂಬಂಧ ಎಲ್ಲ ಸುಳ್ಳು ಎಂಬುದು ಅರ್ಥವಾಗಿದೆ, ಧನ್ಯವಾದಗಳು ”ಎಂದು ನೋವಿನಿಂದ ಹೇಳಿದ್ದರು.
ಶಶಿಧರ್ ಭಟ್ ಅವರ ಈ ಭಾವನಾತ್ಮಕ ಪೋಸ್ಟ್‌ಗೆ ಸಾವಿರಾರು ಅಭಿಮಾನಿಗಳು ಕಾಮೆಂಟ್ ಮೂಲಕ ಭಟ್ಟರ ಬೆನ್ನಿಗೆ ನಿಂತಿದ್ದರು. ನಿಮ್ಮ ಜೊತೆ ನಾವೂ ಇದ್ದೇವೆ ಎಂಬ ಧೈರ್ಯ ತುಂಬುವ ಕೆಲಸ ಮಾಡಿದ್ದರು.
ಸುದ್ದಿ ತಿಳಿದ ಸಿಎಂ ಸಿದ್ದರಾಮಯ್ಯ ಕೂಡ ಶಶಿಧರ್ ಭಟ್ ಅವರೊಂದಿಗೆ ಸೋಮವಾರ ಬೆಳಿಗ್ಗೆ ದೂರವಾಣಿ ಮೂಲಕ ಮಾತನಾಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.
ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಶಶಿಧರ್ ಭಟ್‌ಗೆ ತಿಳಿಸಿದ ಮುಖ್ಯಮಂತ್ರಿಗಳು, ಆಸ್ಪತ್ರೆಯ ವೈದ್ಯರ ಜೊತೆಗೂ ಮಾತನಾಡಿ ಶಶಿಧರ್ ಭಟ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಹಿರಿಯ ಪತ್ರಕರ್ತರು ಸಾಮಾಜಿಕವಾಗಿ ಶೋಷಿತ ಹಿಂದುಳಿದ ಅಲ್ಪಸಂಖ್ಯಾತರ ಸಮುದಾಯದ ಪರ ಗಟ್ಟಿ ಧ್ವನಿ ಆಗಿದ್ದ ಶಶಿಧರ್ ಭಟ್ ರವರು ಅನಾರೋಗ್ಯದಿಂದ ಆಸ್ಪತ್ರೆ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಫಲಕಾರಿಯುತ್ತಿದ್ದು ಅವರು ತನ್ನ ಅಸಹಾಯಕತೆಯನ್ನ ವೀಡಿಯೋ ಮೂಲಕ ತೋಡಿಕೊಂಡಿದ್ದಾರೆ ಎಲ್ಲರೂ ಸಹಕರಿಸಿ @DKShivakumar @siddaramaiah @SantoshSLadINC pic.twitter.com/eOKufHg8Tu
— ಕೋಮುವಾದಿಗಳ ವಿರುದ್ಧ🇮🇳 (@KomuvadiVirudda) July 20, 2024