ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಚಟುವಟಿಕೆಗಳಲ್ಲಿ ಭಾಗವಹಿಸಲು ಸರ್ಕಾರಿ ನೌಕರರ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರವು ತೆಗೆದುಹಾಕಿದ್ದು ಇದು ವಿಪಕ್ಷಗಳು ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ವಿಪಕ್ಷಗಳು ಖಂಡಿಸಿದೆ.
ಬಿಜೆಪಿ ನಾಯಕ ಅಮಿತ್ ಮಾಳವಿಯಾ ತನ್ನ ಎಕ್ಸ್ ಪೋಸ್ಟ್‌ನಲ್ಲಿ, “58 ವರ್ಷಗಳ ಹಿಂದೆ, 1966ರಲ್ಲಿ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸುವ ಅಸಂವಿಧಾನಿಕ ಆದೇಶವನ್ನು ಮೋದಿ ಸರ್ಕಾರವು ಹಿಂಪಡೆದಿದೆ. ಮೂಲ ಆದೇಶವನ್ನು ಮೊದಲ ಸ್ಥಾನದಲ್ಲಿ ರವಾನಿಸಬಾರದಿತ್ತು” ಎಂದು ಬರೆದುಕೊಂಡಿದ್ದಾರೆ.
“1966ರ ನವೆಂಬರ್ 7ರಂದು ಸಂಸತ್ತಿನಲ್ಲಿ ಬೃಹತ್ ಗೋಹತ್ಯೆ-ವಿರೋಧಿ ಪ್ರತಿಭಟನೆ ನಡೆದ ಕಾರಣ ನಿಷೇಧವನ್ನು ವಿಧಿಸಲಾಯಿತು. ಆರ್‌ಎಸ್‌ಎಸ್-ಜನಸಂಘಕ್ಕೆ ಲಕ್ಷಾಂತರ ಜನರ ಬೆಂಬಲವಿತ್ತು. ಅನೇಕರು ಪೋಲೀಸ್ ಗುಂಡಿನ ದಾಳಿಯಲ್ಲಿ ಸತ್ತರು. 1966ರ ನವೆಂಬರ್ 30ರಂದು ಆರ್‌ಎಸ್‌ಎಸ್-ಜನಸಂಘದ ಪ್ರಭಾವದಿಂದ ನಡುಗಿದ ಇಂದಿರಾಗಾಂಧಿ ಸರ್ಕಾರಿ ಸಿಬ್ಬಂದಿ ಆರ್‌ಎಸ್‌ಎಸ್‌ಗೆ ಸೇರುವುದನ್ನು ನಿಷೇಧಿಸಿದ್ದರು” ಎಂದು ಪೋಸ್ಟ್ ಮಾಡಿದ್ದಾರೆ.
The unconstitutional order issued 58 years ago, in 1966, imposing a ban on Govt employees taking part in the activities of the Rashtriya Swayamsevak Sangh has been withdrawn by the Modi Govt. The original order shouldn’t have been passed in the first place.
The ban was imposed… pic.twitter.com/Gz0Yfmftrp
— Amit Malviya (@amitmalviya) July 22, 2024
ಇದನ್ನು ಓದಿದ್ದೀರಾ? ಕಲಬುರಗಿ ಕೇಂದ್ರೀಯ ವಿವಿ ವಿವಾದ: ಆರ್‌ಎಸ್‌ಎಸ್‌ನ ಧ್ಯೇಯಗೀತೆ ಹಾಡಿದರು, ಬೆದರಿಕೆ ಒಡ್ಡಿದರು
ಕೇಂದ್ರ ಸರ್ಕಾರದ ಈ ಆದೇಶವನ್ನು ವಿಪಕ್ಷವನ್ನು ತೀವ್ರವಾಗಿ ಖಂಡಿಸಿದೆ. “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜನರ ತೀರ್ಪಿನಿಂದ ಯಾವುದೇ ಪಾಠ ಕಲಿಯುತ್ತಿಲ್ಲ” ಎಂದು ಕಾಂಗ್ರೆಸ್ ಸಂಸದ ಕೆಸಿ ವೇಣುಗೋಪಾಲ್ ಹೇಳಿದ್ದಾರೆ. ಹಾಗೆಯೇ ಕೇಂದ್ರ ಸರ್ಕಾರದ ಆದೇಶವನ್ನು, “ಅತ್ಯಂತ ದುರದೃಷ್ಟಕರ ಕ್ರಮ” ಎಂದು ಕರೆದಿದ್ದಾರೆ.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲಿನ ನಿಷೇಧವನ್ನು ತೆಗೆದುಹಾಕಿರುವ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
“ಇದು ನಿಜವಾಗಿದ್ದರೆ, ಇದು ಭಾರತದ ಸಮಗ್ರತೆ ಮತ್ತು ಏಕತೆಗೆ ವಿರುದ್ಧವಾಗಿದೆ. ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಅಂಗೀಕರಿಸಲು ನಿರಾಕರಿಸಿದ ಕಾರಣ ಆರ್‌ಎಸ್‌ಎಸ್ ಮೇಲೆ ನಿಷೇಧವಿದೆ. ಪ್ರತಿಯೊಬ್ಬ ಆರ್‌ಎಸ್‌ಎಸ್ ಸದಸ್ಯರು ಹಿಂದುತ್ವವನ್ನು ರಾಷ್ಟ್ರದಲ್ಲಿ ಜಾರಿ ಮಾಡುವ ಪ್ರತಿಜ್ಞೆ ಮಾಡುತ್ತಾರೆ. ಯಾವುದೇ ನಾಗರಿಕ ಸೇವಕ ಆರ್‌ಎಸ್‌ಎಸ್ ಸದಸ್ಯನಾಗಿದ್ದರೆ ರಾಷ್ಟ್ರಕ್ಕೆ ನಿಷ್ಠನಾಗಿರಲು ಸಾಧ್ಯವಿಲ್ಲ” ಎಂದು ಅಸಾದುದ್ದೀನ್ ಓವೈಸಿ ಅಭಿಪ್ರಾಯಿಸಿದ್ದಾರೆ.
फरवरी 1948 में गांधीजी की हत्या के बाद सरदार पटेल ने RSS पर प्रतिबंध लगा दिया था।
इसके बाद अच्छे आचरण के आश्वासन पर प्रतिबंध को हटाया गया। इसके बाद भी RSS ने नागपुर में कभी तिरंगा नहीं फहराया।
1966 में, RSS की गतिविधियों में भाग लेने वाले सरकारी कर्मचारियों पर प्रतिबंध लगाया… pic.twitter.com/17vGKJmt3n
— Jairam Ramesh (@Jairam_Ramesh) July 21, 2024
ಇನ್ನು ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “1948ರ ಫೆಬ್ರವರಿಯಲ್ಲಿ ಗಾಂಧೀಜಿಯವರ ಹತ್ಯೆಯ ನಂತರ ಸರ್ದಾರ್ ಪಟೇಲ್ ಆರ್‌ಎಸ್‌ಎಸ್ ಅನ್ನು ನಿಷೇಧಿಸಿದರು. ತರುವಾಯ ಉತ್ತಮ ನಡವಳಿಕೆಯ ಭರವಸೆಯ ಮೇಲಿನ ನಿಷೇಧವನ್ನು ತೆಗೆದುಹಾಕಲಾಯಿತು. ಇದಾದ ನಂತರವೂ ಆರ್‌ಎಸ್‌ಎಸ್ ನಾಗಪುರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಿಲ್ಲ” ಎಂದು ತಿಳಿಸಿದ್ದಾರೆ.
“1966ರಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲೆ ನಿಷೇಧ ಹೇರಲಾಯಿತು ಮತ್ತು ಇದು ಸರಿಯಾದ ನಿರ್ಧಾರವಾಗಿತ್ತು. ನಿಷೇಧ ಹೇರಲು 1966ರಲ್ಲಿ ಹೊರಡಿಸಿದ ಅಧಿಕೃತ ಆದೇಶ ಇದಾಗಿದೆ” ಎಂದು ಎಕ್ಸ್ ಪೋಸ್ಟ್‌ನಲ್ಲಿ ಆದೇಶ ಪ್ರತಿಯನ್ನು ಉಲ್ಲೇಖಿಸಿದ್ದಾರೆ.
“2024ರಲ್ಲಿ ಜೂನ್ 4ರ ನಂತರ ಸ್ವಯಂ-ಶೈಲಿಯ ಜೈವಿಕವಲ್ಲದ ಪ್ರಧಾನ ಮಂತ್ರಿ ಮತ್ತು ಆರ್‌ಎಸ್‌ಎಸ್ ನಡುವಿನ ಸಂಬಂಧಗಳು ಹದಗೆಟ್ಟವು. 2024ರ ಜುಲೈ 9ರಂದು ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೂ ಜಾರಿಯಲ್ಲಿದ್ದ 58 ವರ್ಷಗಳ ನಿಷೇಧವನ್ನು ತೆಗೆದುಹಾಕಲಾಯಿತು. ನೌಕರರು ಈಗ ಚಡ್ಡಿಯಲ್ಲಿಯೂ (ಆರ್‌ಎಸ್‌ಎಸ್ ಸಮವಸ್ತ್ರ) ಬರಬಹುದು ಎಂದು ನಾನು ಭಾವಿಸುತ್ತೇನೆ” ಎಂದು ವ್ಯಂಗ್ಯವಾಡಿದ್ದಾರೆ.
#WATCH | Delhi: On government employees can now participate in RSS activities, AIMIM MP Asaduddin Owaisi says, “After the assassination of Mahatma Gandhi, Sardar Patel and Nehru’s government banned RSS. The ban was lifted because they had to agree that they will respect the… pic.twitter.com/NwLQ5RzP4f
— ANI (@ANI) July 22, 2024
ಸಂಘದ ಮೋಹನ್ ಭಾಗವತ್ ರು ದಿಲ್ಲಿ ಬಾದಶಾನ ವಿರುದ್ಧ ತಿರುಗಿ ಬಿದ್ದವ್ರೆ,, ಅವರನ್ನು ತಣ್ಣಗೆ ಮಾಡಲು ಈ ಸರ್ಕಸ್ ಮಾಡುತ್ತಿರಬಹುದು