ಪೊಲೀಸ್ ಸಿಬ್ಬಂದಿಗಳು ಸಮವಸ್ತ್ರದಲ್ಲಿರುವ ತಮ್ಮ ಫೋಟೋ, ವಿಡಿಯೋ, ರೀಲ್ಸ್ ಸೇರಿದಂತೆ ಕರ್ತವ್ಯಕ್ಕೆ ಸಂಬಂಧಿಸದ ಯಾವುದೇ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಬಾರದು ಎಂದು ಬೆಂಗಳೂರಿನ ಪೊಲೀಸರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಂತಹ ಪೋಸ್ಟ್‌ಗಳನ್ನು ಹಾಕುವುದು ಇಲಾಖೆಯ ಘಟನೆತೆಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.
“ಪೊಲೀಸ್ ಸಮವಸ್ತ್ರ ಬದ್ಧತೆ, ಸಮರ್ಪಣೆ ಮತ್ತು ಹೊಣೆಗಾರಿಕೆಗೆ ಸಂಕೇತವಾಗಿದೆ. ಯಾವುದೇ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಮಾಡುವ ಪೋಸ್ಟ್‌ಗಳು ಇಲಾಖೆಯ ಮೌಲ್ಯಗಳನ್ನು ಪ್ರತಿಬಿಂಸುವ ರೀತಿಯಲ್ಲಿರಬೇಕು” ಎಂದು ಸೂಚನೆ ನೀಡಿದ್ದಾರೆ.
“ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮ (ನಡತೆ) ಪ್ರಕಾರ, ಸೇವೆಗಳಿಗೆ ಸಂಬಂಧಿಸಿದ ಯಾವುದೇ ಸರ್ಕಾರಿ ನೌಕರ ಅಧಿಕೃತ ದಾಖಲೆ ಅಥವಾ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವಂತಿಲ್ಲ. ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಮಾನ್ಯತೆ ಪಡೆದ ಅಧಿಕೃತ ಅಧಿಕಾರಿ ಮಾತ್ರವೇ ಅಧಿಕೃತ ಮಾಹಿತಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲು ಅವಕಾಶವಿದೆಲ. ಇಂದರಲ್ಲಿ ಯಾವುದೇ ಲೋಪಗಳಾಗಬಾರದು. ಒಂದು ವೇಳೆ, ಲೋಪಗಳು ಕಂಡುಬಂದಿಲ್ಲ, ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.