ರಾಜಸ್ಥಾನದ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಯೊಬ್ಬನ ಅಕ್ರಮವಾಗಿ ನಿರ್ಮಿಸಿದ ಮನೆಯನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಚುರು ಜಿಲ್ಲೆಯಲ್ಲಿದ್ದ ಆರೋಪಿಯ ಅಕ್ರಮ ಮನೆಯನ್ನು ಬಿಗಿ ಭದ್ರತೆಯ ನಡುವೆ ಚುರು ಮುನ್ಸಿಪಲ್ ಕೌನ್ಸಿಲ್ ಸೋಮವಾರ ರಾತ್ರಿ ಈ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ಹೇಳಿದರು.
“ಎಸ್‌ಐ ಪೇಪರ್ ಸೋರಿಕೆ ಪ್ರಕರಣದಲ್ಲಿ ಬಂಧಿತ ಆರೋಪಿ ವಿವೇಕ್ ಭಂಬು ಎಂಬುವರು ಅಕ್ರಮವಾಗಿ ನಿರ್ಮಾಣ ಮಾಡಿದ್ದಾರೆ. ಅದನ್ನು ಸೋಮವಾರ ಕೆಡವಲಾಗಿದೆ” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ: ಏಮ್ಸ್-ಪಾಟ್ನಾದ ಮೂವರು ವಿದ್ಯಾರ್ಥಿಗಳು ಸಿಬಿಐ ವಶಕ್ಕೆ
ಸಹಾಯಕ ಇಂಜಿನಿಯರ್ ರವಿ ರಾಘವ್ ನೇತೃತ್ವದ ಪುರಸಭೆಯ ತಂಡವು ಪೂನಿಯಾ ಕಾಲೋನಿಯಲ್ಲಿನ ಪ್ಲಾಟ್ ಸಂಖ್ಯೆ 114 ಮತ್ತು 115ರಲ್ಲಿನ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿದೆ ಎಂದು ಹೇಳಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡವು ತನಿಖೆ ನಡೆಸುತ್ತಿದ್ದು, ಟ್ರೈನಿ ಸಬ್ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಿದೆ.