ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23ರಂದು ಕೇಂದ್ರ ಬಜೆಟ್ ಮಂಡಿಸಿದ್ದು ಹಲವಾರು ವಸ್ತುಗಳ ಸುಂಕವನ್ನು ಹೆಚ್ಚಳ ಮತ್ತು ಇಳಿಕೆ ಮಾಡಿದ್ದಾರೆ. ಇದರಿಂದಾಗಿ ಕೆಲವು ವಸ್ತುಗಳ ಬೆಲೆ ಇಳಿಕೆಯಾದರೆ, ಕೆಲವು ವಸ್ತುಗಳ ಬೆಲೆ ಏರಿಕೆಯಾಗಲಿದೆ.
ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರಿಗೆ ಕೆಲವು ಹಣಕಾಸು ಆಸ್ತಿಗಳ ಮೇಲಿನ ಬಂಡವಾಳ ಲಾಭದ ವಿನಾಯಿತಿ ಮಿತಿಯನ್ನು ವರ್ಷಕ್ಕೆ 1.25 ಲಕ್ಷ ರೂ.ಗೆ ಏರಿಸಲು ಸರ್ಕಾರ ಪ್ರಸ್ತಾಪಿಸಿದೆ. ಹಾಗೆಯೇ ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡುವವರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಮೊತ್ತವನ್ನು 50,000 ರೂ.ನಿಂದ 75,000 ರೂ.ಗೆ ಏರಿಕೆ ಮಾಡಲಾಗಿದೆ.
ಆದರೆ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇಕಡ 15ರಿಂದ ಶೇಕಡ 5ಕ್ಕೆ ಇಳಿಸಲಾಗಿದೆ. ಇದು ವಿಶ್ವದ ಎರಡನೇ ಅತಿ ದೊಡ್ಡ ಚಿನ್ನದ ಗ್ರಾಹಕ ದೇಶವಾದ ಭಾರತದಲ್ಲಿ ಚಿನ್ನದ ಕಳ್ಳಸಾಗಣೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಿಸಿದೆ. ಲಿಥಿಯಂ ಸೇರಿದಂತೆ 25 ಖನಿಜಗಳ ಆಮದು ಸುಂಕ ವಿನಾಯಿತಿಯನ್ನು ಘೋಷಿಸಿದರು.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ | ಬಿಹಾರ, ಆಂಧ್ರ ಪ್ರದೇಶಕ್ಕೆ ಬಂಪರ್; ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್‌ಗಳು ವೈರಲ್
“ಚಿನ್ನ ಮತ್ತು ಅಮೂಲ್ಯವಾದ ಲೋಹದ ಆಭರಣಗಳಲ್ಲಿ ದೇಶೀಯ ಮೌಲ್ಯವರ್ಧನೆ ಹೆಚ್ಚಿಸಲು, ಚಿನ್ನ ಮತ್ತು ಬೆಳ್ಳಿಯ ಕಸ್ಟಮ್ಸ್ ಸುಂಕವನ್ನು ಶೇಕಡ 6ಕ್ಕೆ ಇಳಿಸಲು ನಾನು ಪ್ರಸ್ತಾಪಿಸುತ್ತೇನೆ” ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.
ಯಾವೆಲ್ಲ ವಸ್ತುಗಳು ಅಗ್ಗ?
ಸೋಲರ್ ಸೆಟ್‌ಗಳು
ಮೊಬೈಲ್ ಫೋನ್‌ಗಳು
ಮೊಬೈಲ್‌ನ ಬ್ಯಾಟರಿ, ಇತ್ಯಾದಿ
ಮೊಬೈಲ್ ಚಾರ್ಜರ್‌ಗಳು
ಕ್ಯಾನ್ಸರ್ ಔಷಧಿಗಳು
ಚಿನ್ನ ಮತ್ತು ಬೆಳ್ಳಿ
ಪ್ಲಾಟಿನಂ ಜ್ಯುವೆಲ್ಲರಿ
ಬಟ್ಟೆ
ಶೂಗಳು
ಎಕ್ಸ್-ರೇ ಉಪಕರಣಗಳು
ಎಲೆಕ್ಟ್ರಿಕ್ ಕಾರುಗಳು
ಲಿಥಿಯಂ ಬ್ಯಾಟರಿ
ತಾಮ್ರದ ಸರಕುಗಳು
ಚರ್ಮದ ಸಾಮಗ್ರಿಗಳು
ಮೀನು ಮತ್ತು ಮೀನು ಉತ್ಪನ್ನಗಳು
25 ಅಗತ್ಯ ಖನಿಜಗಳು
ಯಾವೆಲ್ಲ ವಸ್ತುಗಳು ದುಬಾರಿ?
ಪ್ಲಾಸ್ಟಿಕ್ ವಸ್ತುಗಳು
ಟೆಲಿಕಾಂ ಉಪಕರಣಗಳು