ಚಿಕ್ಕನಾಯಕನಹಳ್ಳಿ | ಸಡಗರದಿಂದ ಜರುಗಿದ ಹಳೆಯೂರು ಆಂಜನೇಯ ಬ್ರಹ್ಮರಥೋತ್ಸವ

Date:

Advertisements

ಎಪಿಗ್ರಾಫಿಯ ಆಫ್ ಕರ್ನಾಟಕದಲ್ಲಿ ದಾಖಲಿರುವ ಹಳೆಯೂರು ಆಂಜನೇಯ ದೇವಸ್ಥಾನವು ದ್ರಾವಿಡ ಶೈಲಿಗೆ ಹೋಲುವಂಥದ್ದು. ಇದು 800 ವರ್ಷಗಳಷ್ಟು ಹಳೆಯದು ಎಂದು ಅಂದಾಜಿದೆ. ಗತಕಾಲದ ಇಂಥ ಇತಿಹಾಸ ಪ್ರಸಿದ್ಧ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹಳೆಯೂರು ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಇತ್ತೀಚೆಗೆ ಜರುಗಿತು.

ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವ ತೇರುಬೀದಿಯುದ್ದಕ್ಕೂ ಭಕ್ತಾದಿಗಳ ಪೂಜೆ-ಪುನಸ್ಕಾರಗಳನ್ನು ಹಾದು ನೆಹರೂ ಸರ್ಕಲ್’ನಲ್ಲಿ ಗದ್ದಿಗೆಯಾಯಿತು. ಇಡೀ ದಿನ ತೇರುಬೀದಿಯ ಉದ್ದಕ್ಕೂ ತುಂಬಿ ತುಳುಕುತ್ತಿದ್ದ ಶ್ರದ್ಧಾಭಕ್ತಿಗೆ ಇಡೀ ಊರೇ ಸಾಕ್ಷಿಯಾಗಿತ್ತು. ನೆಹರೂ ಸರ್ಕಲ್’ನಿಂದ ಮರಳಿ ದೇವಸ್ಥಾನದವರೆಗೂ ತೇರನ್ನು ಎಳೆಯುವ ರಥೋತ್ಸವ ಪ್ರಾರಂಭವಾಗಿ, ಕೊನೆಗೆ ಸ್ವಸ್ಥಾನ ತಲುಪಿತು.

ಹಳೆಯೂರು

ಈ ಸಂದರ್ಭದಲ್ಲಿ, ಕ್ಷೇತ್ರದ ಪ್ರಮುಖರು, ಪುರಸಭಾ ಪ್ರಮುಖರು, ತಹಶೀಲ್ದಾರರು, ಪೊಲೀಸ್ ಪ್ರಮುಖರು, ದೇವಸ್ಥಾನ ಭಕ್ತಮಂಡಳಿ ಪ್ರಮುಖರು ಹಾಗೂ ಮುಜರಾಯಿ ಅಧಿಕಾರಾದಿ ಪ್ರಮುಖರು ಉಪಸ್ಥಿತರಿದ್ದರು.

Advertisements

ಹಳೆಯೂರು ಭಾಗದ ಸುತ್ತಮುತ್ತಲೆಲ್ಲ ಏಕಾದಶಿ ಪರಿಶೆ ಎಂದೇ ಹೆಸರಾಗಿರುವ ಹಳೆಯೂರು ಆಂಜನೇಯ ಸ್ವಾಮಿ ಜಾತ್ರೆಯಲ್ಲಿ, ನೆಲಸಂಸ್ಕೃತಿ, ಶ್ರಮಸಂಸ್ಕೃತಿಗಳ ಜನಸಂಪದ ಸಂಭ್ರಮಿಸುತ್ತದೆ. ತೇರು ಕಟ್ಟುವ, ತೇರನ್ನು ಸಿಂಗರಿಸುವ, ತೇರಿನ ರಥ ಚಕ್ರಗಳಿಗೆ ಸನ್ನೆ ಕೊಡುವ, ತೇರನ್ನು ಎಳೆಯುವ, ಇತ್ಯಾದಿ ಬಹುತೇಕ ಎಲ್ಲ ಕೆಲಸಗಳನ್ನು ಪರ್ಯಾಯ ಸಾಂಸ್ಕೃತಿಕ ಧಾರೆಗಳ ಜನಸಮೂಹ ಸಂಭ್ರಮಿಸುತ್ತಾ ನೆರವೇರಿಸುತ್ತದೆ. ಕಾಲ, ದೇಶ, ಸಮಾಜ, ಸಮೂಹಗಳಿಗೆ ಗ್ರಾಮೀಣ ಕರ್ನಾಟಕದ ಈ ವಿಶ್ವಬಂಧುರತೆ ಸಂದೇಶ ಕೂಡಿಬಾಳುವ ಸಾಮರಸ್ಯದ ತಿಳಿವನ್ನು ಜಗತ್ತಿಗೆ ಸಾರುತ್ತಿರುವಂತಿದೆ.

ಹಳೆಯೂರು 1

ದೇವಸ್ಥಾನ ಸಮಿತಿ ಹಾಗೂ ಜಾತ್ರಾ ಸಮಿತಿಗಳವರು ಊರಿನ ದಾಸಯ್ಯ ‌ಕುಲದವರಿಗೆ ಬಿನ್ನಕೊಟ್ಟು ಆಹ್ವಾನಿಸಿದ ನಂತರ ಆರಂಭಗೊಳ್ಳುವ ಜಾತ್ರೆ, ಹತ್ತು ದಿನಗಳ ಕಾಲ ನಡೆಯುತ್ತದೆ. ಜಾತ್ರೆಯ ಈ ಹತ್ತೂದಿನಗಳ ಕಾಲ ಪ್ರತಿದಿನವೂ ಉತ್ಸವ, ಪ್ರಕಾರೋತ್ಸವ, ವಿಶೇಷ ಪೂಜೆ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ, ಇತ್ಯಾದಿ ಸೇವೆಗಳು ಸ್ವಾಮಿಯವರಿಗೆ ಸಲ್ಲುತ್ತವೆ.

ನಿತ್ಯ ಸರ್ವಪ್ರಕಾರದ ವಿಧಿ-ವಿಧಾನಗಳ ಅನುಸಾರ ಸಾಂಗೋಪಾಂಗವಾಗಿ ಧಾರ್ಮಿಕ ಆಚರಣೆಗಳು ಜರುಗುತ್ತವೆ. ಹೀಗೆ, ಅಭಯಹಸ್ತ ಹಳೆಯೂರು ಆಂಜನೇಯ ಸ್ವಾಮಿಯ ಏಕಾದಶಿ ಜಾತ್ರೆ ಸಡಗರ-ಸಂಭ್ರಮದೊಂದಿಗೆ ಸಂಪನ್ನಗೊಂಡಿದೆ.

ತೇರನೆಳೆಯುತಾರೆ ತಂಗಿ, ತೇರನೆಳೆಯುತಾರೆ!!

ಜಾತ್ರೆ, ಪರಿಸೆ, ಉರೂಸು, ಉತ್ಸವಗಳು ಇಂಡಿಯಾದ ಶ್ರಮಣಧಾರೆಗಳು ಮುಂದಿಟ್ಟ, ನಿಸರ್ಗ ವಿವೇಕವನ್ನು ಮರುಸ್ಥಾಪಿಸುವ ಅವಕಾಶಗಳನ್ನು ಪ್ರಜ್ವಲಿಸುತ್ತವೆ! ಈ ನೆಲದ ಸಮೂಹಗಳು ಬಾಳುತ್ತಿರುವ ಜೀವನ ಮೀಮಾಂಸೆ, ಜನರ ಬದುಕಿನ ಜೀವನಾಡಿಯಾದ ಬಹುತ್ವದ್ದು.

ಹೀಗಾಗಿ, ಸಮೂಹದೊಳಗಿನ ವಿವೇಕ, ಬದುಕನ್ನು ಸಹನೀಯಗೊಳಿಸಿಕೊಳ್ಳಲು ತತ್ವಪದ, ಗುರುಕಾರ್ಯ, ಗುರುದೀಕ್ಷೆ, ಮುಂತಾಗಿ ಜಾತ್ರೆ, ಪರಿಸೆ, ಉರುಸು, ಉತ್ಸವಗಳನ್ನು ಸಂಭ್ರಮಿಸುತ್ತದೆ!

ನೆಲಮೂಲ ಸಮುದಾಯಗಳಿಗೆ ಇದು, ಅಧಿಕಾರದಾಚೆಗಿನ ಅಧಿಕಾರವಿದ್ದಂತೆ.

ವರದಿ: ಸಂಚಲನ, ಚಿಕ್ಕನಾಯಕನ ಸೀಮೆಯಿಂದ

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X