ಕೇಂದ್ರ ಬಜೆಟ್ | ಚುನಾವಣಾ ಫಲಿತಾಂಶಗಳು ಮತ್ತು ಆರ್ಥಿಕ ವಾಸ್ತವಗಳೇ ಆಧಾರ

Date:

Advertisements

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಬಜೆಟ್‌ ಮಂಡಿಸಿದ್ದಾರೆ. ಅವರು ಮಂಡಿಸಿದ ಬಜೆಟ್‌ – ಲೋಕಸಭಾ ಚುನಾವಣೆ ಫಲಿತಾಂಶಗಳಿಂದ ಪ್ರಭಾವಿತಗೊಂಡಿದೆ ಎಂಬುದು ಆಂಧ್ರ ಪ್ರದೇಶ ಮತ್ತು ಬಿಹಾರಕ್ಕೆ ಹೆಚ್ಚಿನ ಹಂಚಿಕೆಗಳನ್ನು ನೀಡಿರುವುದರಿಂದ ಸ್ಪಷ್ಟವಾಗಿದೆ. ತಮ್ಮ ಸರ್ಕಾರವನ್ನು ಯಾವಾಗ ಬೇಕಿದ್ದರೂ ಅಲುಗಾಡಿಸಬಹುದಾದ ನಿತೀಶ್ ಕುಮಾರ್ ಮತ್ತು ಎನ್‌ ಚಂದ್ರಬಾಬು ನಾಯ್ಡು ಅವರನ್ನು ಬಜೆಟ್‌ನಲ್ಲಿ ಓಲೈಸಲಾಗಿದೆ ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತದೆ.

ಹಾಗೆಯೇ ಇತರ ರಾಜ್ಯಗಳ ನಿರೀಕ್ಷೆಗಳಿಗೆ ಎಳ್ಳು-ನೀರು ಬಿಡಲಾಗಿದೆ. ಪ್ರಮುಖ ಕಾಳಜಿ ಕ್ಷೇತ್ರಗಳೆಂದು ಗುರುತಿಸಲಾಗಿರುವ ವಲಯಗಳ ಮೇಲೂ ಬಜೆಟ್‌ನಲ್ಲಿ ಕರುಣೆ ತೋರಿಸಲಾಗಿಲ್ಲ. ಹಣಕಾಸು ಸಚಿವರು ತಮ್ಮ ಭಾಷಣದ ಆರಂಭದಲ್ಲಿ ನಾಲ್ಕು ಪ್ರಮುಖ ವಿಷಯಗಳನ್ನು ಪಟ್ಟಿ ಮಾಡಿದರು – ಉದ್ಯೋಗ, ಕೌಶಲ್ಯ, MSMEಗಳು ಹಾಗೂ ಮಧ್ಯಮ ವರ್ಗ. ಇವುಗಳನ್ನು ಒಂಬತ್ತು ಕ್ರಿಯಾಶೀಲ ಆದ್ಯತೆಗಳಾಗಿ ವಿವರಿಸಲಾಗಿದೆ. ಜೊತೆಗೆ, ಭವಿಷ್ಯದಲ್ಲಿ ಈ ಕ್ಷೇತ್ರಗಳಲ್ಲಿ ನಿರಂತರ ಬೆಳವಣಿಗೆಗೆ ಯೋಜನೆಗಳನ್ನು ಚಾಲಕ ಶಕ್ತಿಗಳಾಗಿ ಬಳಸಲಾಗುತ್ತದೆ ಎಂದು ಹೇಳಿದರು.

ಗಮನಾರ್ಹವಾಗಿ, ಬಜೆಟ್‌ಗೂ ಮುಂಚೆ ಪ್ರಕಟವಾದ, ಬೆಳವಣಿಗೆ ಮತ್ತು ಒಟ್ಟಾರೆ ಆರ್ಥಿಕತೆಗೆ ಸಂಬಂಧಿಸಿದ ಆರ್ಥಿಕ ಸಮೀಕ್ಷೆಯು ಹಣದುಬ್ಬರ-ಹೊಂದಾಣಿಕೆಯ ಹಣಕಾಸು ವರ್ಷ 2024-2025ರಲ್ಲಿ ಒಟ್ಟು ದೇಶೀಯ ಉತ್ಪನ್ನದ (GDP) ಬೆಳವಣಿಗೆಯು 6.5% ರಿಂದ 7% ಇರಲಿದೆ ಎಂದು ಮುನ್ಸೂಚನೆ ನೀಡಿದೆ. ಕೈಗಾರಿಕಾ ಚಟುವಟಿಕೆ, ಉತ್ಪಾದನೆ, ಸೇವಾ ರಫ್ತು, ವಿಮಾನಯಾನ ಸಂಚಾರ, ಹೋಟೆಲ್ ಉದ್ಯಮ ಮತ್ತು ಇನ್ನೂ ಅನೇಕ ಉದ್ಯಮಗಳು ಹೆಚ್ಚು ಬೆಳವಣಿಗೆ ಕಾಣದಿದ್ದರೂ, ಆರೋಗ್ಯಕರವಾಗಿ ಮುಂದುವರೆಯುತ್ತವೆ ಎಂದೂ ಸಮೀಕ್ಷೆ ಹೇಳಿದೆ. ಷೇರು ಮಾರುಕಟ್ಟೆಗಳು ಪ್ರತಿ ತಿಂಗಳು ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗುತ್ತಿದ್ದರೂ, ಭಾರತದಲ್ಲಿನ ಕುಟುಂಬಗಳ ಮಾಸಿಕ ಉಳಿತಾಯವು ಪ್ರತಿ ತಿಂಗಳು ಕಡಿಮೆಯಾಗುತ್ತಿದೆ ಎಂದು ಸಮೀಕ್ಷೆ ವಿವರಿಸಿದೆ.

Advertisements

ಆದಾಗ್ಯೂ ಬೆಳವಣಿಗೆಯ ಮೇಲಿನ ಕೇಂದ್ರ ಸರ್ಕಾರದ ದೃಢವಾದ ದೃಷ್ಟಿಕೋನವು ಮೂಲಸೌಕರ್ಯ ವಿತರಣೆಯ ವಿಚಾರದಲ್ಲಿ ಹೆಚ್ಚು ಆತಂಕವನ್ನು ಹುಟ್ಟು ಹಾಕುತ್ತಿದೆ. ಆದಾಯ ಮತ್ತು ಸಂಪತ್ತಿನ ಅಸಮಾನತೆಯ ಮೇಲಿನ ಅಂಕಿಅಂಶಗಳು ವಿವಾದಾಸ್ಪದವಾಗಿದೆ. ಜಿಡಿಪಿ ದತ್ತಾಂಶವು ಒಟ್ಟಾರೆ ಬೆಳವಣಿಗೆಗಿಂತ ಗೃಹಬಳಕೆಯ ವೆಚ್ಚವು ತೀರಾ ಕಡಿಮೆ ಪ್ರಮಾಣದಲ್ಲಿ ಬೆಳೆಯುತ್ತಿದೆ ಎಂದು ತೋರಿಸುತ್ತಿದೆ. ಗ್ರಾಮೀಣ ಬಳಕೆಯು ಹಣದುಬ್ಬರಕ್ಕೆ ಸರಿಹೊಂದಿಸಲಾದ ಗ್ರಾಮೀಣ ವೇತನಗಳಿಂದ ಬಾಧಿಸುತ್ತಿದೆ. ಗ್ರಾಮೀಣ ಹಣದುಬ್ಬರವು ನಗರ ಹಣದುಬ್ಬರಕ್ಕಿಂತ ಹೆಚ್ಚಾಗುತ್ತಿದೆ. ಗ್ರಾಮೀಣ ಭಾಗದ ಕುಟುಂಬಗಳು ತೀರಾ ಕಡಿಮೆ ಆದಾಯವನ್ನು ಗಳಿಸುತ್ತಿವೆ.

ಹೆಚ್ಚುತ್ತಿರುವ ಬೆಲೆ ಮತ್ತು ಉತ್ತಮ ಸಂಬಳದ ಉದ್ಯೋಗಗಳ ಕೊರತೆಯು ಗ್ರಾಮೀಣ ಭಾಗದಲ್ಲಿ ಬಳಕೆ ಮತ್ತು ವೆಚ್ಚವನ್ನು ನಿಶಬ್ದಗೊಳಿಸಿದೆ. ಗ್ರಾಮೀಣ ಭಾಗದಲ್ಲಿ ಸಂಬಳದ ಉದ್ಯೋಗಕ್ಕಿಂತ ಅರೆಕಾಲಿಕ ಉದ್ಯೋಗಗಳು ಹೆಚ್ಚಾಗುತ್ತಿವೆ. ಸಂಬಳ ಪಡೆಯುವ ವರ್ಗಗಳಲ್ಲಿಯೂ ಸಹ ಗುತ್ತಿಗೆ ಕಾರ್ಮಿಕರ ಸಂಖ್ಯೆಯೇ ಹೆಚ್ಚುತ್ತಿದೆ. ಯಾವುದೇ ವರ್ಗವು ಪಿಂಚಣಿ ಸೌಲಭ್ಯಗಳನ್ನು ಹೊಂದಿಲ್ಲ. ಈ ಎಲ್ಲರೂ ಆರ್ಥಿಕ ಕುಸಿತಗಳಲ್ಲಿ ತಮ್ಮ ಉದ್ಯೋಗಗಳನ್ನೂ ಕರೆದುಕೊಳ್ಳುವ ಆತಂಕದಲ್ಲಿದ್ದಾರೆ.

ಮತ್ತೊಂದೆಡೆ, ಕಳೆದ 3-4 ವರ್ಷಗಳಲ್ಲಿ ಹೆಚ್ಚುತ್ತಿರುವ ಚಿಲ್ಲರೆ ಹೂಡಿಕೆದಾರರಿಂದ ಷೇರು ಮಾರುಕಟ್ಟೆಗಳಿಗೆ ಹಣ ಹರಿದುಬರುತ್ತಿದೆ. ಈ ಹರಿವು ಹೆಚ್ಚಾಗಿ ಮ್ಯೂಚುವಲ್ ಫಂಡ್‌ಗಳ ಮೂಲಕ ಬರುತ್ತಿದೆ. ಚಿಲ್ಲರೆ ಹೂಡಿಕೆದಾರರ ಈ ಹರಿವು ಕುಟುಂಬದ ಉಳಿತಾಯವನ್ನು ಪೇರುಗಳ ಮೇಲೆ ತಿರುಗಿಸಲಾಗುತ್ತಿದೆ ಎಂಬ ಊಹಾಪೋಹಗಳನ್ನೂ ಹುಟ್ಟುಹಾಕುತ್ತಿದೆ.

ಷೇರು ಮಾರುಕಟ್ಟೆ ನಿಯಂತ್ರಕರ ಹೇಳಿಕೆಗಳಿಗೆ ಅನುಗುಣವಾಗಿಯೇ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿನ F&O (ಫ್ಯೂಚರ್ಸ್‌ ಅಂಡ್ ಆಪ್ಶನ್ಸ್‌) ವಹಿವಾಟುಗಳ ಮೇಲಿನ ತೆರಿಗೆಯನ್ನು 0.02%ನಿಂದ 0.1%ಗೆ ಅಂದರೆ, ಐದು ಪಟ್ಟು ಹೆಚ್ಚಿಸಿದೆ. ಶಾರ್ಟ್‌ ಟರ್ಮ್‌ ಕ್ಯಾಪಿಟಲ್ ಗೇನ್ಸ್ (STCG) ತೆರಿಗೆಯನ್ನು 15%ನಿಂದ 20%ಗೆ ಹೆಚ್ಚಿಸಿದೆ ಹಾಗೂ ಲಾಂಗ್ ಟರ್ಮ್‌ ಕ್ಯಾಪಿಟಲ್ ಗೇನ್ಸ್ (LTCG) ತೆರಿಗೆಯನ್ನು 10% ರಿಂದ 12.5%ಗೆ ಹೆಚ್ಚಿಸಿದೆ. ಈ ಬದಲಾವಣೆಗಳಿಂದಾಗಿ, ವೈಯಕ್ತಿಕ ಆದಾಯ ತೆರಿಗೆಯಲ್ಲಿ 37,000 ಕೋಟಿ ರೂಪಾಯಿಗಳ ನಿವ್ವಳ ಆದಾಯದ ನಷ್ಟಕ್ಕೆ ಕಾರಣವಾಗುತ್ತದೆ. ಇದೇ ವೇಳೆ, ಬಂಡವಾಳ ಲಾಭದ ತೆರಿಗೆ ಹೆಚ್ಚಳದಿಂದ 30,000 ಕೋಟಿ ರೂ. ಲಾಭವಾಗುತ್ತದೆ. ಮಾತ್ರವಲ್ಲದೆ, ಸರಕುಗಳ ಮೇಲಿನ ಪರೋಕ್ಷ ತೆರಿಗೆಗಳ ಕಡಿತದಿಂದ ಇನ್ನೂ 8,000 ಕೋಟಿ ರೂ.ಗಳಷ್ಟು ನಷ್ಟವಾಗುತ್ತದೆ ಎಂದು ಸರ್ಕಾರ ಅಂದಾಜಿಸಿದೆ.

MSME ವಲಯವು ನಿರ್ದಿಷ್ಟವಾಗಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಲ್ಲಿನ ಉದ್ಯೋಗದ ಕೊರತೆಯನ್ನು ಎದುರಿಸುತ್ತಿರುವ ಮತ್ತೊಂದು ಕ್ಷೇತ್ರವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳು 6.5 ಕೋಟಿ ಅಸಂಘಟಿತ ಉದ್ಯಮಗಳು 2022-2023ರಲ್ಲಿ 11 ಕೋಟಿ ಕಾರ್ಮಿಕರನ್ನು ನೇಮಿಸಿಕೊಂಡಿವೆ; ಆದರೆ, ಈ ಉದ್ಯಮಗಳು ಅನೌಪಚಾರಿಕ ವಲಯವಾದ್ದರಿಂದ, ಗುರುತರವಾದ ಅಧಿಕಾರಶಾಹಿ ಅನುಸರಣೆ ಮತ್ತು ನಿಬಂಧನೆಗಳಿಂದ ಹೆಣಗಾಡುತ್ತಿವೆ. ಮಾತ್ರವಲ್ಲದೆ, ಮಧ್ಯಮ ಮತ್ತು ದೊಡ್ಡ ಕಾರ್ಪೊರೇಟ್‌ಗಳನ್ನು ದಾಟಿ ಔಪಚಾರಿಕ ಸಾಲ ಪಡೆಯುವುದು ಕಠಿಣವಾಗಿದೆ. ಲೇವಾದೇವಿದಾರರಿಂದ ಪಡೆದ ಸಾಲದ ಮೇಲಿನ ಬಡ್ಡಿ ದರಗಳು ವಿಪರೀತವಾಗಿ ಕಾಡುತ್ತಿವೆ. ಬಜೆಟ್‌ನಲ್ಲಿನ ಕ್ರಿಯಾ ಯೋಜನೆಯು “ಹಣಕಾಸು, ರೆಗ್ಯುಲೇಟರಿ ಚೇಂಜಸ್‌ ಹಾಗೂ ಜಾಗತಿಕ ಸ್ಪರ್ಧೆಗೆ ನೆರವಾಗಲು ತಂತ್ರಜ್ಞಾನದ ಬೆಂಬಲವನ್ನು ಒಳಗೊಂಡ ಪ್ಯಾಕೇಜ್‌ಅನ್ನು ರೂಪಿಸುತ್ತದ” ಎಂದು ಹೇಳಲಾಗಿದೆ.

ಇನ್ನು, ಬಜೆಟ್‌ನಲ್ಲಿ ಮುದ್ರಾ ಸಾಲದ ಮಿತಿಗಳನ್ನು ಹೆಚ್ಚಿಸಲಾಗಿದೆ. ಉತ್ತಮ ಕಾರ್ಯನಿರತ ಬಂಡವಾಳ ನಿರ್ವಹಣೆಯೊಂದಿಗೆ ಮುದ್ರಾ ಸಾಲಗಳನ್ನು ಹೆಚ್ಚಿಸಲು ಬ್ಯಾಂಕ್‌ಗಳನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಈ ವರದಿ ಓದಿದ್ದೀರಾ?: ಕೇಂದ್ರ ಬಜೆಟ್ | ಇನ್ಮುಂದೆ ಯಾವುದು ಅಗ್ಗ? ಯಾವುದು ದುಬಾರಿ?

ಇನ್ನು, ದೇಶದ ಜನರು ಹೆಚ್ಚು ಆಶ್ರಯಿಸಿರುವ ಮತ್ತು ಹೆಚ್ಚು ಉದ್ಯೋಗಗಳನ್ನು ನೀಡುವ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ಬಜೆಟ್‌ನಲ್ಲಿ ಇಲ್ಲ. ಬದಲಾಗಿ, ರಸಗೊಬ್ಬರದ ಮೇಲೆ ಸಬ್ಸಿಡಿ ಹಂಚಿಕೆಯನ್ನು 13.2%ರಷ್ಟು ಕಡಿತ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಕೃಷಿಯ ನಂತರದಲ್ಲಿ ಹೆಚ್ಚು ಉದ್ಯೋಗಗಳನ್ನು ನೀಡುತ್ತಿದ್ದ ಮನರೇಗಾ ಯೋಜನೆಗೆ 86,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. 2023ಕ್ಕೆ (98,000 ಕೋಟಿ ರೂ.) ಹೋಲಿಸಿದರೆ, 26,000 ಕೋಟಿ ರೂ. ಕಡಿತವಾಗಿದೆ.

ಹಂಚಿಕೆ ಕಡಿತ, ಮಿತಿಗಳ ಹೆಚ್ಚಳ, ಅವಕಾಶ ವಿಸ್ತರಣೆ, ಯುವಜನರಿಗೆ 12 ತಿಂಗಳ ಇಂಟರ್ನ್‌ಶಿಪ್‌ನಂತಹ ಹಲವಾರು ಭರವಸೆಗಳು ಮೂಗಿಗೆ ತುಪ್ಪ ಹಚ್ಚಿದಂತಿದೆ. ಕೇಂದ್ರ ಭರವಸೆಗಳು-ಘೋಷಣೆಗಳು ಸಾಮೂಹಿಕ ಉದ್ಯೋಗ ಸೃಷ್ಟಿಯಲ್ಲಿನ ವೈಫಲ್ಯವು ಕುಟುಂಬದ ವೆಚ್ಚದ ತಗ್ಗುವಿಕೆಯನ್ನು ನಿಯಂತ್ರಿಸಿ, ವೆಚ್ಚವನ್ನು ಹೆಚ್ಚಿಸುವುದರಲ್ಲಿ ಯಾವುದೇ ವಿಶ್ವಾಸವಿಲ್ಲ. ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಗಾಗಿ 1.48 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇದು, ಭಾರತದ ಮಕ್ಕಳು ಮತ್ತು ಯುವಜನರಿಗೆ ಹೋಲಿಸಿದರೆ, ಈ ಹಣವು ಸಾಲದು ಎಂಬುದೇ ವಾಸ್ತವ. ಅಲ್ಲದೆ, ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎನ್ನುತ್ತಿದ್ದ ಸರ್ಕಾರ, ಈಗ ಐದು ವರ್ಷಗಳಲ್ಲಿ 4.1 ಕೋಟಿ ಉದ್ಯೋಗ ಸೃಷ್ಟಿಯ ಗುರಿ ಹೊಂದಿದೆ. ಇದು ದೇಶದ ನಿರುದ್ಯೋಗಕ್ಕೆ ಹೆಚ್ಚಿನ ಆಧಾರವನ್ನು ನೀಡಲಾರದು. ಆದಾಗ್ಯೂ, ಈ ಉದ್ಯೋಗಗಳ ಸೃಷ್ಟಿ ಮತ್ತು ಗುರಿಯ ಪರಿಣಾಮಕಾರಿತ್ವವು ಅಂತಿಮವಾಗಿ ಅವುಗಳ ಅನುಷ್ಠಾನದ ಮೇಲೆ ಅವಲಂಬಿತವಾಗಿರುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X