ದೆಹಲಿಯ ದ್ವಾರಕಾ ರಸ್ತೆಗಳಲ್ಲಿ ವ್ಯಕ್ತಿಯೊಬ್ಬ ಸ್ಪೈಡರ್‌ಮ್ಯಾನ್‌ನಂತೆ ಡ್ರೆಸ್ ಹಾಕಿಕೊಂಡು ಕಾರಿನ ಬಾನೆಟ್ ಮೇಲೆ ಕುಳಿತು ಓಡಾಡುತ್ತಿದ್ದದ್ದು ಕಂಡುಬಂದಿದೆ. ದೆಹಲಿ ಸಂಚಾರ ಪೊಲೀಸರು ಆತನಿಗೆ ದಂಡ ವಿಧಿಸಿದ್ದಾರೆ.
ಸ್ಪೈಡರ್‌ಮ್ಯಾನ್‌ನಂತೆ ಬಟ್ಟೆ ಧರಿಸಿ, ಕಾರಿನ ಮೇಲೆ ಕುಳಿತು ಓಡಾಡುತ್ತಿರುವ ವ್ಯಕ್ತಿಯ ವಿರುದ್ಧ ಸಾರ್ವಜನಿಕರು ಸಾಮಾಜಿಕ ಮಾಧ್ಯಮದಲ್ಲಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು.
ದೂರು ಸ್ವೀಕರಿಸಿರುವ ಪೊಲೀಸರು ಸ್ಪೈಡರ್‌ಮ್ಯಾನ್ ವೇಷದಲ್ಲಿದ್ದ ಆದಿತ್ಯ (20) ಮತ್ತು ಆತನ ಕಾರು ಚಾಲಕ ಗೌರವ್ ಸಿಂಗ್ ಎಂಬಾತನಿಗೆ ದಂಡ ವಿಧಿಸಿದ್ದಾರೆ.
ಅಪಾಯಕಾರಿ ವಾಹನ ಚಾಲನೆ, ಮಾಲಿನ್ಯ ಪ್ರಮಾಣ ಪತ್ರ ಇಲ್ಲದೇ ವಾಹನ ಬಳಕೆ, ಚಾಲನೆ ವೇಳೆ ಸೀಟ್ ಬೆಲ್ಟ್ ಧರಿಸದೇ ಇರುವ ಆರೋಪಗಳ ವಿರುದ್ಧ ಕಾರಿನ ಮಾಲೀಕ ಮತ್ತು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳ ವಿರುದ್ಧ 26,000 ರೂ. ದಂಡ ಆಥವಾ ಸೆರೆವಾಸ ಅಥವಾ ಎರಡನ್ನೂ ವಿಧಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.