ಬುಡಕಟ್ಟು ಮಹಿಳೆಯರು ಮಂಗಳಸೂತ್ರ ಧರಿಸಬಾರದು, ಕುಂಕುಮ ಅವರಿಗೆ ಅನ್ವಯವಾಗುವುದಿಲ್ಲ ಎಂದು ಹೇಳಿದ್ದ ಮಹಿಳಾ ಶಿಕ್ಷಕಿ ಮೇನಕಾ ದಮೋರ್ ಅವರನ್ನು ರಾಜಸ್ಥಾನ ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.
ರಾಜಸ್ಥಾನದ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಶಿಕ್ಷಣ ಇಲಾಖೆಯ ಕಳಂಕಕ್ಕೆ ಧಕ್ಕೆ ತಂದ ಆರೋಪದ ಮೇಲೆ ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 19ರಂದು ಬನ್ಸ್‌ವಾರಾದ ಮನ್‌ಗ್ರಹ್ ಧಾಮ್‌ನಲ್ಲಿ ಹಮ್ಮಿಕೊಂಡಿದ್ದ ಬೃಹತ್ ರ್ಯಾಲಿಯಲ್ಲಿ ಬುಡಕಟ್ಟು ಮಹಿಳೆಯರು ಪಂಡಿತರು ಹೇಳುವುದನ್ನು ಕೇಳಬಾರದು ಎಂದು ಹೇಳಿದ್ದರು.
“ಬುಡಕಟ್ಟು ಮಹಿಳೆಯರಿಗೆ ಕುಂಕುಮ ಅನ್ವಯವಾಗುವುದಿಲ್ಲ. ಅವರು ಮಂಗಳಸೂತ್ರ ಧರಿಸಬಾರದು. ಬುಡಕಟ್ಟು ಸಮುದಾಯದ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಶಿಕ್ಷಣದ ಮೇಲೆ ಗಮನಹರಿಸಬೇಕು. ಇಂದಿನಿಂದ ಇವೆಲ್ಲ ಪದ್ಧತಿಗಳನ್ನು ನಿಲ್ಲಿಸಿ. ನಾವು ಹಿಂದೂಗಳಲ್ಲ” ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದಿನಕ್ಕೆ 14 ಗಂಟೆ ಕೆಲಸ ಅಮಾನವೀಯ ನಡೆ, ಸರ್ಕಾರ ತಿರಸ್ಕರಿಸಲಿ
ಮೇನಕಾ ದಮೋರ್ ಅವರ ಹೇಳಿಕೆಗಳಿಗೆ ಬುಡಕಟ್ಟು ಸಮುದಾಯದ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದರು.
ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಈ ವಿಷಯದ ಬಗ್ಗೆ ಕ್ರಮ ಕೈಗೊಂಡು ಮಹಿಳೆಯನ್ನು ಅಮಾನತುಗೊಳಿಸಿದ್ದಾರೆ.
ಮೇನಕಾ ದಮೋರ್ ಅವರು ಆದಿವಾಸಿ ಪರಿವಾರ ಸಂಸ್ಥೆಯ ಸಂಸ್ಥಾಪಕರಾಗಿದ್ದು, ಸಾದಾ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.
ಬನ್ಸ್‌ವಾರಾದ ಮನ್‌ಗ್ರಹ್ ಧಾಮ್‌ನಲ್ಲಿ ಹಮ್ಮಿಕೊಂಡಿದ್ದ ಬೃಹತ್ ರ್ಯಾಲಿಯಲ್ಲಿ ರಾಜಸ್ಥಾನ, ಮಧ್ಯ ಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರದ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಭಿಲ್ ಎಂಬ ರಾಜ್ಯವನ್ನು ರಚಿಸುವ ರಾಜಕೀಯ ನಿರ್ಣಯವನ್ನು ಇಲ್ಲಿ ಅಂಗೀಕರಿಸಲಾಯಿತು.

Sathyavannu Heliddare,