ಕಾವಡ್ ಯಾತ್ರೆ ಮಾರ್ಗದಲ್ಲಿ ಅಂಗಡಿ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸಬೇಕೆಂಬ ತನ್ನ ನಿರ್ದೇಶನವನ್ನು ಪ್ರಶ್ನಿಸುವ ಅರ್ಜಿಗಳನ್ನು ಉತ್ತರ ಪ್ರದೇಶ ಸರ್ಕಾರ ವಿರೋಧಿಸಿದ್ದು, ತನ್ನ ಆದೇಶ ಸಮರ್ಥಿಸಿ ಸುಪ್ರೀಂ ಕೋರ್ಟ್‌ಗೆ ವಿವರವಾದ ಸಲ್ಲಿಕೆಯಲ್ಲಿ ತಿಳಿಸಿದೆ.
ಶಾಂತಿಯುತ ಮತ್ತು ವ್ಯವಸ್ಥಿತ ಯಾತ್ರೆಯನ್ನು ಖಚಿತಪಡಿಸಿಕೊಳ್ಳಲು ಈ ನಿರ್ದೇಶನ ನೀಡಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಅಂಗಡಿಗಳು ಮತ್ತು ತಿನಿಸುಗಳ ಹೆಸರುಗಳಿಂದ ಉಂಟಾದ ಗೊಂದಲದ ಬಗ್ಗೆ ಯಾರ್ಥಾರ್ಥಿಗಳಿಂದ ಬಂದ ದೂರುಗಳಿಗೆ ಪ್ರತಿಕ್ರಿಯೆಯಾಗಿ ಈ ನಿರ್ದೇಶನವನ್ನು ನೀಡಲಾಗಿದೆ ಎಂದು ರಾಜ್ಯ ಸರ್ಕಾರ ವಿವರಿಸಿದೆ.
“ಯಾತ್ರೆಯು ಪ್ರಯಾಸಕರ ಪ್ರಯಾಣವಾಗಿದೆ. ಅಲ್ಲಿ ಕೆಲವು ಕಾವಡಿಗಳು, ಅಂದರೆ ದಕ್ ಕಾವಡಿಯಾಗಳು, ಕಾವಡ್ ತಮ್ಮ ಹೆಗಲ ಮೇಲೆ ಒಮ್ಮೆ ವಿಶ್ರಾಂತಿ ಪಡೆಯಲು ಸಹ ನಿಲ್ಲುವುದಿಲ್ಲ. ತೀರ್ಥಯಾತ್ರೆಯಲ್ಲಿ ಪವಿತ್ರವಾದ ವೈಶಿಷ್ಟ್ಯಗಳಿವೆ. ಉದಾಹರಣೆಗೆ ಪವಿತ್ರ ಗಂಗಾಜಲವನ್ನು ನೆಲದ ಮೇಲೆ ಅಥವಾ ಗುಲಾರ್ ಮರದ ನೆರಳಿನಲ್ಲಿ ಇಡಬಾರದು. ಕಾವಡಿ ಯಾತ್ರೆಯನ್ನು ವರ್ಷಗಳ ತಯಾರಿಯ ನಂತರ ಪ್ರಾರಂಭಿಸಲಾಗಿದೆ ಎಂಬುದನ್ನು ಇಲ್ಲಿ ಗಮನಿಸಬಹುದು” ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಕಾವಡ್ ಯಾತ್ರೆ ವೇಳೆ ಅಂಗಡಿ ಮಾಲೀಕರ ಹೆಸರುಳ್ಳ ಫಲಕ ಹಾಕಲು ಆದೇಶ; ‘ಸಂವಿಧಾನದ ಮೇಲಿನ ದಾಳಿ’ ಎಂದ ಪ್ರಿಯಾಂಕಾ
ಕಾವಡ್ ಯಾತ್ರೆ, ಕಾವಡಿಗಳು ಎಂದು ಕರೆಯಲ್ಪಡುವ ಶಿವನ ಭಕ್ತರು ಗಂಗಾ ನದಿಯಿಂದ ಪವಿತ್ರ ನೀರನ್ನು ತರಲು ಪ್ರಯಾಣಿಸುವ ವಾರ್ಷಿಕ ತೀರ್ಥಯಾತ್ರೆಯಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ಭಾಗವಹಿಸುತ್ತಾರೆ.
ಕಾವಡಿಯಾಗಳ ನಿರ್ದಿಷ್ಟ ದೂರುಗಳಿಗೆ ಪ್ರತಿಕ್ರಿಯೆಯಾಗಿ ಈ ನಿರ್ದೇಶನವನ್ನು ಪರಿಚಯಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿಕೊಂಡಿದೆ.
ಪ್ರತಿಪಕ್ಷಗಳು ಉತ್ತರ ಪ್ರದೇಶದ ನಿರ್ದೇಶನವನ್ನು ‘ಮುಸ್ಲಿಂ ವಿರೋಧಿ’ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಮಾಜದಲ್ಲಿ ಒಡಕುಗಳನ್ನು ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ ವಾಗ್ದಾಳಿ ನಡೆಸಿವೆ.
ಜುಲೈ 22 ರಂದು ‘ಸಾವನ್’ ನ ಮೊದಲ ಸೋಮವಾರದ ಸಂದರ್ಭದಲ್ಲಿ ರಾಷ್ಟ್ರದಾದ್ಯಂತ ಭಕ್ತರು ತಮ್ಮ ಕಾವಡ್ ಯಾತ್ರೆಯನ್ನು ಪ್ರಾರಂಭಿಸಿದರು.
