ಭಾರತ ಹಿಂದೂರಾಷ್ಟ್ರವಾಗಬೇಕಾದರೆ ಎಲ್ಲ ಹಿಂದೂ ಮಹಿಳೆಯರು ತಮ್ಮ ದೇಹದ ಸೌಂದರ್ಯದ ಚಿಂತೆಯನ್ನು ಬಿಟ್ಟು ಕನಿಷ್ಠ ನಾಲ್ಕು ಮಕ್ಕಳಿಗೆ ಜನ್ಮ ನೀಡಬೇಕು ಎಂದು ಸ್ವಾಮೀಜಿಯೊಬ್ಬರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ನಡೆಯುತ್ತಿರುವ ಶ್ರೀಮದ್ ಭಾಗವತ ಕಥಾದಲ್ಲಿ ಪ್ರವಚನ ನೀಡಿದ ಪಂಚಯತಿ ನಿರಾಂಜನಿ ಅಖಾಡಾದ ಮಹಾಮಂಡಲೇಶ್ವರ ಸ್ವಾಮಿ ಪ್ರೇಮಾನಂದ ಮಹಾರಾಜ್ ಈ ಪ್ರಚೋದನಕಾರಿ ಹೇಳಿಕೆಯನ್ನು ಮಾಡಿದ್ದಾರೆ.
“ನಾನು ಭಗವತ್ ಕಥಾದಲ್ಲಿ ನಿಮಗೆ ಇಷ್ಟವಾಗುವ ವಿಷಯವನ್ನು ಹೇಳಲು ಬಂದಿಲ್ಲ. ನಾನು ಸನಾತನ ಧರ್ಮವನ್ನು ಮುಂದಕ್ಕೆ ಕೊಂಡೊಯ್ಯುವ ವಿಷಯವನ್ನು ಹೇಳುತ್ತಿದ್ದೇನೆ. ಉತ್ತರ ಪ್ರದೇಶದ 17 ಜಿಲ್ಲೆಗಳು ನಮ್ಮ ಕೈ ತಪ್ಪಿಹೋಗಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬುಡಕಟ್ಟು ಮಹಿಳೆಯರು ಹಿಂದೂಗಳಲ್ಲ, ಮಂಗಳಸೂತ್ರ ಧರಿಸಬಾರದು ಎಂದು ಹೇಳಿದ ಶಿಕ್ಷಕಿ ಅಮಾನತು
“ಪಶ್ಚಿಮ ಬಂಗಾಳದಲ್ಲೂ ಇದೇ ಪರಿಸ್ಥಿತಿಯಿದೆ. ಅಸ್ಸಾಂನಲ್ಲಿ 5 ಲಕ್ಷ ಜನರಿಗೆ ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲ. ಸರಳವಾಗಿ ಹೇಳುವುದಾದರೆ 2 ಕೋಟಿ ಆಗಿದ್ದವರು 9 ಕೋಟಿ ಆದರು, ಈಗ 38 ಕೋಟಿ ಆಗಿದ್ದಾರೆ” ಎಂದು ಮುಸ್ಲಿಮರ ಜನಸಂಖ್ಯೆಯನ್ನು ಉದ್ದೇಶಿಸಿ ದ್ವೇಷ ಬಿತ್ತುವ ಪ್ರವಚನ ಮಾಡಿದ್ದಾರೆ.
“ಇನ್ನೂ ಸಮಯವಿದೆ, ಜಾಗರೂಕರಾಗದಿದ್ದರೆ ಭಾರತವೂ ಇಂಡೋನೇಷ್ಯಾ ಆಗುತ್ತದೆ. ಶೀಘ್ರದಲ್ಲೇ ನೀವು ಅಲ್ಪಸಂಖ್ಯಾತರಾಗುತ್ತೀರಿ” ಎಂದಿದ್ದಾರೆ.
“ಸನಾತನ ಸಂಸ್ಕೃತಿಯನ್ನು ರಕ್ಷಿಸಲು ಮಹಿಳೆಯರು ತಲಾ ನಾಲ್ಕು ಮಕ್ಕಳಿಗೆ ಜನ್ಮ ನೀಡಬೇಕಾಗಿದೆ. ಹಿಂದೂ ಮಹಿಳೆಯರು ಒಂದೆರಡು ಮಕ್ಕಳನ್ನು ಹೆರಲು ಕೂಡ ಹಿಂಜರಿಯುತ್ತಿದ್ದಾರೆ. ಆದರೆ ಇತರ ಸಮುದಾಯದ ಜನರು 8-8 ಮಕ್ಕಳನ್ನು ಹೆರುತ್ತಾರೆ. ಹಿಂದೂ ಮಹಿಳೆಯರು ನಿಮ್ಮ ದೇಹ ಸೌಂದರ್ಯದ ಚಿಂತೆಯನ್ನು ಬಿಟ್ಟು ಸನಾತನ ಧರ್ಮ ಮತ್ತು ದೇಶಕ್ಕಾಗಿ ಏನಾದರೂ ಮಾಡಬೇಕು” ಎಂದು ಹೇಳಿದರು.
ತಮ್ಮ ನಕಲಿ ಅಸ್ತಿತ್ವ ಉಳಿಸಿಕೊಳ್ಳಲು ಅವರಿಗೆ ಗೊತ್ತಿರುವ ಪಾಂಡಿತ್ಯ ಇಷ್ಟೇ,,ಇದೇ ಬಂಡವಾಳ ಪಾಪ