ಬೆಂಗಳೂರಿನ ಕೋರಮಂಗಲದ ವಿ.ಆರ್ ಬಡಾವಣೆಯಲ್ಲಿ ಭಾರ್ಗವಿ ಮಹಿಳಾ ಪಿಜಿಗೆ ನುಗ್ಗಿ ಯುವತಿಯನ್ನು ಹತ್ಯೆಗೈದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ ಪಿಜಿಗೆ ನುಗ್ಗಿದ್ದ ಆರೋಪಿ ಬಿಹಾರ ಮೂಲದ ಯುವತಿ ಕೃತಿ ಕುಮಾರ್ ಎಂಬರನ್ನು ಚಾಕುವಿನಿಂದ ಇರುದು ಕೊಲೆ ಮಾಡಿ, ಪಾರಾರಿಯಾಗಿದ್ದ. ಆತನಿಗಾಗಿ ಶೋಧ ನಡೆಸುತ್ತಿದ್ದ ಕೋರಮಂಗಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ.
ಆರೋಪಿಯು ಯುವತಿಯ ಕತ್ತು ಹಾಗೂ ಹೊಟ್ಟೆ ಭಾಗಕ್ಕೆ ಇರಿಯುವುದು ಸಿಸಿ ಟಿವಿ ಕ್ಯಾಮೆರಾದಲ್ಲಿಸ ಸೆರೆಯಾಗಿತ್ತು. ಆ ದೃಶ್ಯಾವಳಿಗಳನ್ನು ಆಧಿರಿಸಿ, ಆರೋಪಿಯ ಗುರುತು ಪತ್ತೆ ಮಾಡಿದ್ದ ಪೊಲೀಸರು ಆರೋಪಿಯ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಅಭಿಷೇಕ್ ಯುವತಿ ಕೃತಿ ಕುಮಾರಿ ಅವರ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದ. ಆದರೆ, ಆತ ಯಾವುದೇ ಕೆಲಸಕ್ಕೂ ಹೋಗದೆ, ಅಡ್ಡಾಡಿಕೊಂಡಿದ್ದ. ಆತನಿಗೆ ಉದ್ಯೋಗ ಮಾಡುವಂತೆ ಆತ ಪ್ರೇಯಸಿ ಬುದ್ದಿಮಾತು ಹೇಳಿದ್ದರು. ಆದರೆ, ಆತನ ವರ್ತನೆ ಬದಲಾಗಿರಲಿಲ್ಲ. ಹೀಗಾಗಿ, ಕೃತಿ ಕುಮಾರಿ ಅವರ ಸ್ನೇಹಿತೆ ಮತ್ತು ಅಭಿಷೇಕ ಪ್ರೇಮ ಮುರಿದುಬಿದ್ದಿತ್ತು ಎಂದು ತಿಳಿದುಬಂದಿದೆ
ತನ್ನ ಪ್ರೇಯಸಿ ದೂರವಾಗಲು ಕೃತಿ ಕುಮಾರಿಯೇ ಕಾರಣವೆಂದು ಸಿಟ್ಟಾಗಿದ್ದ ಅಭಿಷೇಕ್, ಆಕೆಯಿದ್ದ ಪಿಜಿಗೆ ನುಗ್ಗಿ ಯುವತಿಯನ್ನು ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.