ಭಾರತದ ಪ್ರಜಾಪ್ರಭುತ್ವಕ್ಕೆ ಹೊಸ ಆದರ್ಶವಾದ ರಾಹುಲ್ ಗಾಂಧಿಯ ‘ಡರೋ ಮತ್’

Date:

Advertisements

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮ್ಮ ಚುನಾವಣಾ ಪ್ರಚಾರದ ಉದ್ದಕ್ಕೂ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಮೊದಲ ಭಾಷಣದಲ್ಲಿಯೂ ‘ಡರೋ ಮತ್’ (ಭಯಪಡಬೇಡಿ) ಎಂಬ ಪದವನ್ನು ಹೆಚ್ಚಾಗಿ ಬಳಸುತ್ತಿದ್ದರು. ಈ ಪದ ಬಳಕೆ ಭಾರತೀಯ ಪ್ರಜಾಪ್ರಭುತ್ವಕ್ಕೆ ಹೊಸ ಭಾಷಾವೈಶಿಷ್ಟ್ಯವನ್ನು ಸೇರಿಸಿದೆ. ನಿಸ್ಸಂದೇಹವಾಗಿ, ಈ ರಾಜಕೀಯದಲ್ಲಿ ಈ ಪದದ ಘೋಷಣೆ ಟೀಕೆ ಮತ್ತು ಮೆಚ್ಚುಗೆ ಎರಡಕ್ಕೂ ಗುರಿಯಾಗಿದೆ. ಸಾಮಾಜಿಕ ಮತ್ತು ರಾಜಕೀಯ ಎರಡೂ ವ್ಯವಸ್ಥೆಗಳಲ್ಲಿ ಅಸಮಾನತೆಯಿಂದಾಗಿ ನಾನಾ ರೀತಿಯಲ್ಲಿ ತತ್ತರಿಸುತ್ತಿರುವ ಭಾರತೀಯ ಪ್ರಜಾಪ್ರಭುತ್ವದ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರಿದೆ. ಇಂತಹ ಸಮಯದಲ್ಲಿ ಭಾರತೀಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅಲೆಕ್ಸಿ ಡ ಟಾಕ್ವಿಲ ಅವರ ಕೆಲಸಗಳು ನಮಗೆ ನೆರವಾಗುತ್ತವೆ.

ಅಂದಹಾಗೆ, ಹದಿನೆಂಟನೇ ಶತಮಾನದ ಪ್ರಮುಖ ಫ್ರೆಂಚ್ ಸಿದ್ಧಾಂತಿಗಳು ಮತ್ತು ದಾರ್ಶನಿಕರಲ್ಲಿ ಅಲೆಕ್ಸಿ ಡ ಟಾಕ್ವಿಲ ಒಬ್ಬರು. ಫ್ರೆಂಚ್‌ ಕಾಂತ್ರಿಯ ನಂತರ ಫ್ರಾನ್ಸ್‌ ಚೇತರಿಸಿಕೊಳ್ಳಲು ಆರಂಭಿಸಿದ ಸಮಯದಲ್ಲಿ ಅಮೆರಿಕದ ಪ್ರಜಾಪ್ರಭುತ್ವವು ಹೇಗೆ ಕಾರ್ಯನಿರ್ವಹಿಸಿತು ಎಂಬುದನ್ನು ತನಿಖೆ ಮಾಡಲು ಅವರನ್ನು ನೇಮಿಸಲಾಗಿತ್ತು. ಅವರು ತಮ್ಮ ಪುಸ್ತಕ ‘ಡೆಮಾಕ್ರಸಿ ಇನ್ ಅಮೇರಿಕ’ದಲ್ಲಿ, ಅಮೆರಿಕವು ತನ್ನ ಜನರಿಗೆ ಸಮಾನವಾದ ಆದ್ಯತೆಗಳನ್ನು ನೀಡುವ ಮೂಲಕ ತನ್ನ ಪ್ರಯಾಣವನ್ನು ಆರಂಭಿಸಿತು ಎಂದು ಗುರುತಿಸಿದ್ದರು. ಇದು ಫೆಡರಲ್ ವ್ಯವಸ್ಥೆ, ಎರಡು ಸದನಗಳು, ಎರಡು ಪಕ್ಷಗಳ ವ್ಯವಸ್ಥೆ, ಸ್ವತಂತ್ರ ಮತ್ತು ಸ್ವಾಯತ್ತ ನ್ಯಾಯಾಂಗ ಹಾಗೂ ಪುಟ್ಟ ಸಂವಿಧಾನದ ಮೂಲಕ ವಿವಿಧ ಅಧಿಕಾರ ಕ್ಷೇತ್ರಗಳನ್ನು ಸ್ಥಾಪಿಸಲು ಅನುವು ಮಾಡಿಕೊಟ್ಟಿತು. ಸಮಾನತೆಯು ಅಮೆರಿಕವನ್ನು ಶಕ್ತಿಯುತ ದೇಶವನ್ನಾಗಿ ಮಾಡಿದ್ದರೂ ಸಹ, ಅಸಮರ್ಪಕ ಪ್ರಾತಿನಿಧ್ಯ, ಕ್ಷೀಣಿಸುತ್ತಿರುವ ಜೀವನ ಮಟ್ಟ, ಘೆಟ್ಟೋಲೈಸೇಶನ್ ಹಾಗೂ ವರ್ಣಭೇದಕ್ಕೆ ತುತ್ತಾಗಿದ್ದ ಜನರು(ಕಪ್ಪುವರ್ಣೀಯರು) ಮತ್ತು ಜನಾಂಗೀಯ ಅಲ್ಪಸಂಖ್ಯಾತರು ಎದುರಿಸುತ್ತಿದ್ದ ಜೀವನಾಧಾರದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಿಲ್ಲ.

ಬ್ಯಾಂಕಿಂಗ್, ಹಣಕಾಸು ಮತ್ತು ಬಹುರಾಷ್ಟ್ರೀಯ ವಲಯಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರಬಲ ಕುಟುಂಬಗಳು ಮತ್ತು ದೊಡ್ಡ ನಿಗಮಗಳು ಪ್ರಸ್ತುತ ಅಮೆರಿಕವನ್ನು ಆಳುತ್ತಿವೆ. ಅವರು ಅಮೆರಿಕದ ಮೇಲೆ ನಿಯಂತ್ರಣ ಸಾಧಿಸಿದ್ದು, ಲಾಬಿ ಮಾಡುವ ಮೂಲಕ ನೀತಿ ನಿರೂಪಣೆಗಳು, ಪ್ರಚಾರ ದೇಣಿಗೆಗಳು ಹಾಗೂ ಪ್ರಮುಖ ಸರ್ಕಾರಿ ಹುದ್ದೆಗಳಿಗೆ ಸಿಬ್ಬಂದಿಗಳ ನೇಮಕದಲ್ಲಿ ಮಧ್ಯಸ್ಥಿಕೆ ವಹಿಸುತ್ತವೆ. ಇದು, ವ್ಯವಸ್ಥೆಯನ್ನು ಸಮಾನತೆಯಿಂದ ಅಸಮಾನತೆಗೆ ಕೊಂಡೊಯ್ಯುತ್ತಿದೆ. ಒಂದು ರಾಷ್ಟ್ರದ ಮಾದರಿಯಲ್ಲಿ ಬದಲಾವಣೆ ಉಂಟುಮಾಡುತ್ತಿದೆ. ಈ ಕಾರಣಕ್ಕಾಗಿಯೇ, ಅನೇಕರು ಅಮೆರಿಕವನ್ನು ‘ವಿಫಲ ಪ್ರಜಾಪ್ರಭುತ್ವ’ ಎಂದು ಟೀಕಿಸುತ್ತಿದ್ದಾರೆ. ಆದಾಗ್ಯೂ, ಹೆಚ್ಚು ಅಭಿವೃದ್ಧಿ ಹೊಂದಿದ ದೇಶಗಳು ಸಹ ಆತಂಕಗಳಿಂದ ಮುಕ್ತವಾಗಿಲ್ಲ ಎಂಬುದನ್ನು ಅಮೆರಿಕಾ ಎತ್ತಿ ತೋರಿಸುತ್ತದೆ. ಅಂತಹ ಆತಂಕಗಳು ಸಮಾನತೆಯ ಹೆಸರಿನಲ್ಲಿ ಅಧಿಕಾರಗಳ ಅಸಮಾನ ಹಂಚಿಕೆಯ ಉಪ-ಉತ್ಪನ್ನದಂತೆ ಕಂಡುಬರುತ್ತದೆ.

Advertisements

ಭಾರತವು ಕಳೆದ ಕೆಲ ವರ್ಷಗಳಲ್ಲಿ ತನ್ನ ಪ್ರಯಾಣವನ್ನು ಹೇಗೆ ಬದಲಿಸಿಕೊಂಡಿದೆ ಎಂಬುದರ ಕುರಿತು ಕೆಲವು ಪ್ರಶ್ನೆಗಳನ್ನು ಎತ್ತಬಹುದು. ಭಾರತೀಯ ಪ್ರಜಾಪ್ರಭುತ್ವವು ಯಾವ ಆತಂಕಗಳನ್ನು ಎದುರಿಸಿತು? ಈ ಆತಂಕಗಳು ಸ್ಪರ್ಧಿಸುವ ಗುಂಪುಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಿವೆಯೇ? ಇತ್ಯಾದಿ…

ಭಾರತೀಯ ಪ್ರಜಾಪ್ರಭುತ್ವವು ವಸಾಹತುಶಾಹಿಗಳಿಂದ ಹೊರಬಂದ ಬಳಿಕ ಅಸಮಾನ ಪರಿಸ್ಥಿತಿಗಳನ್ನು ಮೊದಲು ತ್ಯಜಿಸಿ, ಸಮಾನತೆಯ ಹಾದಿಯಲ್ಲಿ ಸಾಗಿತು. ಅಸಮಾನತೆಯನ್ನು ಸಮಾನತೆಗೆ ಪರಿವರ್ತಿಸುವಲ್ಲಿ ಈ ಆರಂಭಿಕ ಯಶಸ್ಸು ಅದರ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಯಿತು.

ಆಮೂಲಾಗ್ರ ಸುಧಾರಣೆಗಳಾದ ದೃಢೀಕರಣ ಕಾರ್ಯ, ಭೂ ಸುಧಾರಣೆಗಳು ಮತ್ತು ಹಸಿರು ಕ್ರಾಂತಿ ಸೇರಿದಂತೆ ಪರಿಸ್ಥಿತಿಗಳ ಸಮಾನತೆಯನ್ನು ಉತ್ತೇಜಿಸಲು ಅನೇಕ ರಾಜಕೀಯ ಸಂಸ್ಥೆಗಳನ್ನು ರಚಿಸಲಾಯಿತು ಅಥವಾ ಪರಿಚಯಿಸಲಾಯಿತು. ಸೈದ್ಧಾಂತಿಕ ಯೋಜನೆ ಇಲ್ಲದೆ ಸುಧಾರಣಾ ಯೋಜನೆಗಳು ಕಾರ್ಯಗತಗೊಳ್ಳಲು ಸಾಧ್ಯವಿಲ್ಲ ಎಂಬುದು ಸತ್ಯ. ಅಂತೆಯೇ, ಭಾರತೀಯ ಸರ್ಕಾರವು ತನ್ನ ಯೋಜನೆಗಳನ್ನು ಸಮಾಜವಾದಿ ಸಿದ್ಧಾಂತವನ್ನು ಅಳವಡಿಸಿಕೊಂಡಿತು. ಆದಾಗ್ಯೂ ವಿಮರ್ಶಕಿ ಗಾಯತ್ರಿ ಚಕ್ರವರ್ತಿ ಅವರು ತಮ್ಮ ‘chaarana socialism’ನಲ್ಲಿ ‘ಸಮಾಜವಾದ ಮತ್ತು ಬಂಡವಾಳಶಾಹಿ ಅಭಿವೃದ್ಧಿಯ ಮಾರ್ಗವು ಪರಸ್ಪರ ನಾಶವಾಗದೆ, ಪರಸ್ಪರ ಅಸ್ತಿತ್ವದಲ್ಲಿವೆ’ ಎಂದು ವಾದಿಸಿದ್ದರು. ಅವರು ಹೇಳಿದಂತೆ ಕಾಲಾನಂತರದಲ್ಲಿ ಸಮಾಜವಾದವು ನಶಿಸಲಾರಂಭಿಸಿತು. ಇದು, ಒಂದೆಡೆ ಜಾಗತೀಕರಣ ಅಥವಾ ಉದಾರೀಕರಣ ಮತ್ತು ಮತ್ತೊಂದೆಡೆ ಆಹಾರ ಭದ್ರತಾ ಕಾಯಿದೆ, ಅರಣ್ಯವಾಸಿಗಳ ಕಾಯಿದೆ ಮತ್ತು ಭಾಗ್ಯ ಯೋಜನೆಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದರಲ್ಲಿ ಪ್ರತಿಫಲಿಸುತ್ತದೆ. ಈ ಪ್ರತಿಫಲನವು ಉದಾರವಾದ ಮತ್ತು ದುರ್ಬಲ ಸಮಾಜವಾದದ ಪ್ರಬಲ ಸಿದ್ಧಾಂತದ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಈ ವರದಿ ಓದಿದ್ದೀರಾ?: ವಿಜಯ ದಿವಸ್ ಆಚರಣೆ | ಕಾರ್ಗಿಲ್ ಯೋಧ ಕ್ಯಾಪ್ಟನ್ ಕಾಲಿಯಾರಿಗೆ ದ್ರೋಹ ಬಗೆದ ಬಿಜೆಪಿ

ಇತ್ತೀಚೆಗೆ, ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ನೀಡುವ ಮಸೂದೆಗೆ ವ್ಯಕ್ತವಾದ ವಿರೋಧವು ಅಂತಹದೊಂದು ಉದ್ವಿಗ್ನತೆಗೆ ಉದಾಹರಣೆಯಾಗಿದೆ. ಕಾರ್ಪೊರೇಟ್ ವಲಯವು ಕರ್ನಾಟಕ ಸರ್ಕಾರದ ಉದ್ಯೋಗ ಮೀಸಲಾತಿ ಕ್ರಮವನ್ನು ವಿರೋಧಿಸಿತು. ಈ ಮೀಸಲಾತಿಯು ತನ್ನ ಕಾರ್ಯನಿರ್ವಹಣೆ ಮತ್ತು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವಾದಿಸಿತು. ದಕ್ಷತೆ, ಪ್ರತಿಭೆ ಮತ್ತು ಅರ್ಹತೆಯನ್ನು ಮುಂದಿಟ್ಟುಕೊಂಡು ಖಾಸಗಿ ವಲಯದಲ್ಲಿ ಮೀಸಲಾತಿಯನ್ನು ವಿರೋಧಿಸಿತು. ಆದರೆ, ಇದು ಕೇವಲ ಅರ್ಹತೆಗೆ ಸಂಬಂಧಿಸಿದ ವಿಷಯವಲ್ಲ. ಬದಲಾಗಿ, ಸ್ಥಳೀಯ ಮತ್ತು ಭಾಷಿಕವಾಗಿ ಖಾಸಗಿ ಉದ್ಯಮದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಅವಕಾಶ ಇರಬೇಕೆಂಬ ಸಮಾನತೆಯನ್ನು ಸೋಲಿಸುವ ವಿಷಯವಾಗಿದೆ. ಅದೇ ರೀತಿ, ಜಾತಿಗಣತಿ ವರದಿಗಳ ಬಿಡುಗಡೆಗೆ ವಿರೋಧ, ಜಾತಿಗಣತಿ ನಡೆಸುವುದಕ್ಕೆ ವಿರೋಧಗಳೂ ಕೂಡ ಸಮಾನತೆಯನ್ನು ತಡೆಯುವ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತವೆ. ಈ ರಾಜಕೀಯ ತಿಕ್ಕಾಟವು, ಅಸಮಾನತೆ ಹೇರುವಿಕೆಯು ಭಾರತೀಯ ಪ್ರಜಾಪ್ರಭುತ್ವದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುತ್ತಿದೆ.

ಭಾರತೀಯ ಪ್ರಜಾಪ್ರಭುತ್ವವು ರಾಜಕೀಯ ಸಂಪನ್ಮೂಲಗಳನ್ನು ವಿವೇಚನೆಯಿಂದ ವಿತರಿಸುವುದು, ಗುರುತಿಸಲಾಗದ ಸಾಮಾಜಿಕ ವರ್ಗಗಳನ್ನು ಮುನ್ನೆಲೆಗೆ ತರಲು ಉತ್ತಮ ಯೋಜನೆಗಳನ್ನು ರೂಪಿಸುವುದನ್ನು ಒತ್ತಿ ಹೇಳುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪ್ರಜಾಪ್ರಭುತ್ವದ ಆಶಯಕ್ಕೆ ವ್ಯತಿರಿಕ್ತವಾಗಿ ರಾಜಕೀಯ ವ್ಯವಸ್ಥೆ, ಆಡಳಿತಗಳು ನಡೆದುಕೊಳ್ಳುತ್ತಿವೆ. ಸಮಾನತೆಯನ್ನು ಹೆಚ್ಚಿಸಬೇಕೆಂಬ ವಿಷಯವು ಕವಲುದಾರಿಯಲ್ಲಿ ನಿಂತಿದೆ.

ಪ್ರಜಾಪ್ರಭುತ್ವ ಮತ್ತು ಸಮಾಜವಾದದ ಯಶಸ್ಸು ಒಂದು ಮಾದರಿ ಬದಲಾವಣೆಯನ್ನು ತರುವಲ್ಲಿ ವಿಫಲವಾಗಿದೆ. ಕಾಲಾನಂತರದಲ್ಲಿ ಹೆಚ್ಚುತ್ತಿರುವ ಬಿಲಿಯನೇರ್‌ಗಳ ಸಂಖ್ಯೆಯೊಂದಿಗೆ, ಭಾರತವು 2030ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಪ್ರಯತ್ನಿಸುತ್ತಿದೆ. ಆದಾಗ್ಯೂ, ಭಾರತದ ಜನಸಂಖ್ಯೆಯ 80%ಕ್ಕಿಂತ ಹೆಚ್ಚು ಜನರು ತಮ್ಮ ಬದುಕಿಗಾಗಿ ಇನ್ನೂ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಪಡಿತರ ವ್ಯವಸ್ಥೆ) ಅವಲಂಬಿಸಿದ್ದಾರೆ. ಈ ಮಧ್ಯೆ, ಅಸಮಾನತೆಯನ್ನು, ಸಮಾನತೆಗಿರುವ ಅಡೆತಡೆಗಳನ್ನು ತೊಡೆದುಹಾಕುವವರೆಗೆ ‘ಡರೋ ಮತ್’ ಎಂಬ ಪದವು ಪ್ರಜಾಪ್ರಭುತ್ವದ ಹೊಸ ಭಾಷಾವೈಶಿಷ್ಟ್ಯಕ್ಕಿಂತ ಆದರ್ಶ ಮತ್ತು ಆಶಯವಾಗಿ ಮುಂದುವರಿಯುತ್ತದೆ.

– ಮುಜಾಫರ್ ಅಸ್ಸಾದಿ
ಮೂಲ: ಡಿಎಚ್‌

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X