“ನಾವು ಅಧಿಕಾರಕ್ಕೆ ಬಂದ ತಕ್ಷಣ ಅಗ್ನಿವೀರ ಯೋಜನೆಯನ್ನು ರದ್ದುಗೊಳಿಸಲಾಗುವುದು” ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶನಿವಾರ ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿವೃತ್ತ ಅಗ್ನಿವೀರರಿಗೆ ಮೀಸಲಾತಿ ಘೋಷಿಸಿದ ಒಂದು ದಿನದ ನಂತರ ಅಖಿಲೇಶ್ ಯಾದವ್ ಈ ಟ್ವೀಟ್ ಮಾಡಿದ್ದಾರೆ.
ಲೋಕಸಭೆ ಚುನಾವಣೆಗೆ ಪ್ರಚಾರ ಮಾಡುವಾಗ ಸಮಾಜವಾದಿ ಪಕ್ಷವು ಒಂದು ಘಟಕವಾಗಿರುವ ಇಂಡಿಯಾ ಒಕ್ಕೂಟವು ಅಧಿಕಾರಕ್ಕೆ ಬಂದರೆ ಅಲ್ಪಾವಧಿಯ ಮಿಲಿಟರಿ ನೇಮಕಾತಿ ಯೋಜನೆ ಅಗ್ನಿವೀರ್ ಅನ್ನು ರದ್ದುಗೊಳಿಸುವುದಾಗಿ ಯಾದವ್ ಪದೇ ಪದೇ ಭರವಸೆ ನೀಡಿದ್ದರು. ಈಗ ಮತ್ತೆ ಅದೇ ಭರವಸೆಯನ್ನು ನೀಡಿದ್ದಾರೆ.
ಇದನ್ನು ಓದಿದ್ದೀರಾ? ಬಿಜೆಪಿ ಭಿನ್ನಮತೀಯರಿಗೆ ‘ಮಾನ್ಸೂನ್ ಆಫರ್’ ನೀಡಿದ ಅಖಿಲೇಶ್ ಯಾದವ್
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, “ನಾವು ಅಧಿಕಾರಕ್ಕೆ ಬಂದ ತಕ್ಷಣ, ದೇಶದ ಭದ್ರತೆಗೆ ರಾಜಿ ಮಾಡಿಕೊಳ್ಳುವ ಮತ್ತು ಸೈನಿಕರ ಭವಿಷ್ಯದ ಜೊತೆ ಆಟವಾಡುವ ಅಲ್ಪಾವಧಿಯ ‘ಅಗ್ನಿವೀರ್’ ಸೇನಾ ನೇಮಕಾತಿಯನ್ನು 24 ಗಂಟೆಗಳಲ್ಲಿ ರದ್ದುಗೊಳಿಸಲಾಗುವುದು” ಎಂದು ತಿಳಿಸಿದ್ದಾರೆ.
“ಅಗ್ನಿವೀರ್ನಲ್ಲಿ ಇದು ನಮ್ಮ ಬೇಡಿಕೆಯಾಗಿದೆ. ಹಳೆಯ ನೇಮಕಾತಿ (ಮಾದರಿ) ಅನ್ನು ಮರುಸ್ಥಾಪಿಸಬೇಕು” ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಪೊಲೀಸ್ ಮತ್ತು ಪ್ರಾಂತೀಯ ಸಶಸ್ತ್ರ ಕಾನ್ಸ್ಟಾಬ್ಯುಲರಿ (ಪಿಎಸಿ) ನೇಮಕಾತಿಯಲ್ಲಿ ಸೇವೆಯಿಂದ ಹಿಂದಿರುಗಿದ ಅಗ್ನಿವೀರರಿಗೆ ಉತ್ತರ ಪ್ರದೇಶ ಸರ್ಕಾರವು ನೇಮಕಾತಿ ನೀಡಲಿದೆ ಎಂದು ಆದಿತ್ಯನಾಥ್ ಶುಕ್ರವಾರ ಹೇಳಿದ್ದಾರೆ.
सत्ता में आते ही 24 घंटे में रद्द होगी, देश के सुरक्षा से समझौता करनेवाली और सैनिकों के भविष्य से खिलवाड़ करनेवाली अल्पकालिक ‘अग्निवीर’ सैन्य भर्ती।
‘अग्निवीर’ पर यही माँग हमारी
पुरानी भर्ती की फिर हो बहाली pic.twitter.com/UiETODhWiH— Akhilesh Yadav (@yadavakhilesh) July 27, 2024