ಮೀಸಲಾತಿ ಸುಧಾರಣೆಗಳ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿ ಪಸರಿಸುವುದನ್ನು ತಡೆಯಲು ಬಾಂಗ್ಲಾದೇಶ ದ ಶೇಖ್ ಹಸೀನಾ ಸರ್ಕಾರ ಇಂಟರ್‌ನೆಟ್ ಸ್ಥಗಿತಗೊಳಿಸಿತ್ತು. ಈಗ ಪುನಃ 10 ದಿನಗಳ ನಂತರ ಇಂದು(ಜುಲೈ 28) ಇಂಟರ್‌ನೆಟ್‌ಗೆ ವಿಧಿಸಿದ್ದ ನಿರ್ಬಂಧವನ್ನು ಹಿಂತೆಗೆದುಕೊಳ್ಳಲಾಗಿದ್ದು, ಸೇವೆಗಳನ್ನು ಪುನರಾಂಭಗೊಳಿಸಲಾಗಿದೆ.
ಬಾಂಗ್ಲಾದೇಶದ ಮಾಹಿತಿ ಮತ್ತು ಸಂವಹನ ಸಚಿವ ಜುನೈದ್ ಅಹಮದ್ ಪಾಲಕ್, 5ಜಿ ಇಂಟರ್‌ನೆಟ್‌ಅನ್ನು ಎಲ್ಲ ಬಳಕೆದಾರರಿಗೆ ಮೂರು ದಿನಗಳ ಕಾಲ ಉಚಿತವಾಗಿ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಯ ನಂತರ ಢಾಕಾದಲ್ಲಿ ರೊಬಿ, ಗ್ರಾಮೀಣ್‌ಫೋನ್, ಬಾಂಗ್ಲಾಲಿಂಕ್ ಹಾಗೂ ಇತರ ಸೇವಾ ಪೂರೈಕೆದಾರರು ಇಂಟರ್‌ನೆಟ್ ಸೇವೆಯನ್ನು ಪುನರಾಂಭಿಸಿದ್ದಾರೆ.
ದೇಶಾದ್ಯಂತ ಗಲಭೆ ಹೆಚ್ಚಾದ ನಂತರ ಜುಲೈ 18ರಂದು ಬಾಂಗ್ಲಾದೇಶ ಸರ್ಕಾರ ಮೊಬೈಲ್ ಇಂಟರ್‌ನೆಟ್‌ಅನ್ನು ಸ್ಥಗಿತಗೊಳಿಸಿತ್ತು.
“ದೇಶದಲ್ಲಿ ಸಂಘರ್ಷ ಉಂಟಾದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿಗಳನ್ನು ತಡೆಯಲು ಇಂಟರ್‌ನೆಟ್‌ಅನ್ನು ಸ್ಥಗಿತಗೊಳಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಪ್ಯಾರಿಸ್ ಒಲಿಂಪಿಕ್ಸ್ 2024 | ಭಾರತಕ್ಕೆ ಮೊದಲ ಪದಕ; 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚು ಗೆದ್ದ ಮನು ಭಾಕರ್
ಜೂಲೈ 18ರಿಂದ 23ರವರೆಗೆ ಉಂಟಾದ ಗಲಭೆಯಲ್ಲಿ ದೇಶಾದ್ಯಂತ ಬ್ಯಾಂಡ್‌ವಿಡ್ತ್ ಪೂರೈಕೆಯಲ್ಲಿ ಶೇ.30 ರಿಂದ 40ರವರೆಗೆ ಹಾನಿಯುಂಟಾಗಿತ್ತು. ಸಂಘರ್ಷ ಉಂಟಾದ ನಂತರ ಒಂದು ಗಂಟೆಯೊಳಗೆ ಬ್ರ್ಯಾಡ್‌ಬ್ಯಾಂಡ್ ಹಾಗೂ ಮೊಬೈಲ್ ಇಂಟರ್‌ನೆಟ್‌ಅನ್ನು ಬಂದ್ ಮಾಡಲಾಗಿತ್ತು. ಇಂಟರ್‌ನೆಟ್‌ಅನ್ನು ಮರಳಿ ನೀಡಿದರೂ ಮೊಬೈಲ್ ಇಂಟರ್‌ನೆಟ್ ನಾಳೆಯವರೆಗೂ ಯಥಾಸ್ಥಿತಿ ಮುಂದುವರಿಯಲಿದೆ ಎಂದು ಸಚಿವ ಜುನೈದ್ ಅಹಮದ್ ಪಾಲಕ್ ತಿಳಿಸಿದ್ದಾರೆ.
ದೇಶಾದ್ಯಂತ ಮೀಸಲಾತಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಗಲಭೆಯ ನಂತರ ಬಾಂಗ್ಲಾದೇಶ ಸುಪ್ರೀಂ ಕೋರ್ಟ್ ಹಿರಿಯರಿಗಿದ್ದ ಮೀಸಲಾತಿಯನ್ನು ಶೇ. 5ಕ್ಕೆ ಇಳಿಸಿತ್ತು.
ಶೇ. 2 ರಷ್ಟು ಮೀಸಲಾತಿಯನ್ನು ಧಾರ್ಮಿಕ ಅಲ್ಪಸಂಖ್ಯಾತರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಅಂಗವಿಕಲರಿಗೆ ನೀಡಿದರೆ, ಸರ್ಕಾರಿ ಉದ್ಯೋಗದಲ್ಲಿ ಉಳಿದ ಶೇ.93 ಮೀಸಲಾತಿ ಶ್ರೇಣಿಯಾಧಾರದ ಮೇಲೆ ಮುಂದುವರೆಯುವುದಾಗಿ ಕೋರ್ಟ್ ಆದೇಶಿಸಿತ್ತು.
