ಶಿರೂರು ದುರಂತ | ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ; ಮುಂದುವರಿಸಲು ಕೇರಳ ಆಗ್ರಹ

Date:

Advertisements

ಅಂಕೋಲಾದ ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿದ ನಂತರದ ಶೋಧ ಕಾರ್ಯಾಚರಣೆ ರವಿವಾರವೂ ನಡೆದು ಒಟ್ಟಾರೆಯಾಗಿ 13 ದಿನ ಮುಕ್ತಾಯವಾಗಿದ್ದು, ನಿರೀಕ್ಷಿತ ಯಶಸ್ಸು ದೊರೆಯದೇ ಇರುವುದರಿಂದ, ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನೇ ಕೈ ಬಿಟ್ಟಿದೆ.

ಈ ದುರ್ಘಟನೆಯಲ್ಲಿ ನಾಪತ್ತೆಯಾಗಿ ಈವರೆಗೂ ಪತ್ತೆಯಾಗದ ಕೇರಳ ಮೂಲದ ಅರ್ಜುನ್, ಗೋಕರ್ಣ ಗಂಗೆಕೊಳ್ಳದ ಲೋಕೇಶ್ ನಾಯ್ಕ ಮತ್ತು ಶಿರೂರಿನ ಜಗನ್ನಾಥ ನಾಯ್ಕ ಪತ್ತೆ ಕಾರ್ಯಾಚರಣೆಗೆ ಹೆಸರಾಂತ ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ತಂಡದವರನ್ನು ಕರೆಸಲಾಗಿತ್ತು. ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ನೇತೃತ್ವದ ತಂಡ, ಗಂಗಾವಳಿ ನದಿ ನೀರಿನಲ್ಲಿ ಮೆಟಲ್ ಅಂಶ ಪತ್ತೆ ಮಾಡಿ ಗುರುತಿಸಿರುವ 4 ಸ್ಥಳಗಳಲ್ಲಿ, ಸ್ಕೂಬಾ ಡೈವಿಂಗ್ ಮಾದರಿಯಲ್ಲಿ ಈಶ್ವರ ತಂಡ ತಾವು ಕಾರ್ಯಾಚರಣೆಗಿಳಿದ ಮೊದಲ ದಿನ ಅಂದರೆ ಶನಿವಾರ, 3 ಸುತ್ತುಗಳ ಶೋಧ ಕಾರ್ಯಾಚರಣೆ ನಡೆಸಿದ್ದರು.

ಈ ವೇಳೆ ಈಶ್ವರ ಮಲ್ಪೆ ಕೆಲವೊಮ್ಮೆ ಅರ್ಧ ಗಂಟೆಗೂ ಹೆಚ್ಚು ಕಾಲ ನದಿ ನೀರಿನಲ್ಲಿ ಮುಳುಗಿ, ಶೋಧ ಕಾರ್ಯ ನಡೆಸಿ ತಮ್ಮ ಸಾಮರ್ಥ್ಯದ ಮೂಲಕ ಗಮನ ಸೆಳೆದಿದ್ದರು. ಇದೇ ವೇಳೆ ತಂಡದ ಸಹ ಸದಸ್ಯ ದೀಪು ಎನ್ನುವವರಿಗೆ ಚಿಕ್ಕ ಪುಟ್ಟ ಗಾಯಗಳಾಗಿ, ವೈದ್ಯಕೀಯ ಉಪಚಾರ ನೀಡಲಾಗಿತ್ತು. ಶನಿವಾರ ಮಳೆ ಪ್ರಮಾಣ ಈ ಹಿಂದಿಗಿಂತ ಕಡಿಮೆ ಇದ್ದರೂ, ನದಿ ನೀರಿನ ಒಳ ಪ್ರವಾಹದ ವೇಗ ಹೆಚ್ಚಾಗಿರುವುದರಿಂದ ಶೋಧ ಕಾರ್ಯಾಚರಣೆ ಸುಲಭ ಸಾಧ್ಯವಲ್ಲ ಎನ್ನುವಂತಾಗಿತ್ತು.

Advertisements

ಆದರೂ ಪ್ರಯತ್ನ ಬಿಡದ ಈಶ್ವರ ಮಲ್ಪೆ ತಂಡ ಅಂಕೋಲಾದ ಸ್ಥಳೀಯ ಮೀನುಗಾರರ ಮತ್ತು ವಿಪ್ಪತ್ತು ನಿರ್ವಹಣಾ ತಂಡಗಳ ಸಹಕಾರ ಪಡೆದು ಕಾರ್ಯಚರಣೆ ನಡೆಸಿದ್ದರು. ಆದರೂ ಕಾರ್ಯಾಚರಣೆಗೆ ಯಶಸ್ಸು ಸಿಗದೇ, ನದಿ ನೀರಿನಲ್ಲಿ ರವಿವಾರ ಕೊನೆಯ ಪ್ರಯತ್ನ ಎಂಬಂತೆ, ನಿಗದಿತ ಸ್ಥಳದಲ್ಲಿ ಮತ್ತೆ ಕಾರ್ಯಾಚರಣೆ ನಡೆಸಿದ್ದರು.

ನದಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗಳಿಂದಾಗಿ ಕಾರ್ಯಾಚರಣೆಗೆ ಅಡೆತಡೆಯಾಗುತ್ತದೆ ಎಂಬ ಕಾರಣಕ್ಕೆ ಹೆಸ್ಕಾಂ ಇಲಾಖೆಯವರನ್ನು ಬಳಸಿಕೊಂಡು, ತಂತಿಗಳನ್ನು ತುಂಡರಿಸಿ ತಕ್ಕಮಟ್ಟಿನ ಅನುಕೂಲ ಕಲ್ಪಿಸಲಾಗಿತ್ತು. ನಂತರ ಈಶ್ವರ್ ಮಲ್ಪೆ ಹಾಗೂ ಅವರ ಜೊತೆ ಎನ್ ಡಿ ಆರ್ ಎಫ್ ಸಿಬ್ಬಂದಿಯೋರ್ವರೂ ಸಹ ಸ್ಕೂಬಾ ಡೈವಿಂಗ್ ಮಾದರಿಯಲ್ಲಿ ಜಂಟಿ ಕಾರ್ಯಾಚರಣೆ ಗಿಳಿದಿದ್ದರು.

ಉತ್ತರ ಕನ್ನಡ ಎಸ್‌ಪಿ ನಾರಾಯಣ ಎಂ, ಖುದ್ದು ಕಾರ್ಯಾಚರಣೆ ಸ್ಥಳದಲ್ಲಿ ಹಾಜರಿದ್ದು ಕಾರ್ಯಾಚರಣೆಯ ಸಹಾಯಕ ನೇತೃತ್ವ ವಹಿಸಿರುವ ಹಿಂದೆ ಅಂಕೋಲಾದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಮಂಕಿ ಪೋಲಿಸ್ ಠಾಣೆಯ ಪಿಎಸ್ಐ ಆಗಿರುವ ಮುಷಾಯದ್ ಮತ್ತು ತಂಡಕ್ಕೆ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದರು.

ಸshirro

ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ , ಡಿವೈಎಸ್ಪಿ ಗಿರೀಶ್ ಸ್ಥಳದಲ್ಲಿದ್ದು ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದರು. ಮಳೆ ಹೆಚ್ಚಾಗಿ ಕಂಡು ಬರದೇ , ತೆಳು ಬಿಸಿಲಿನ ಪೂರಕ ವಾತಾವರಣದಲ್ಲಿ ಗಂಗಾವಳಿ ನದಿ ನೀರಿನ ಮಟ್ಟವೂ ಶನಿವಾರಕ್ಕಿಂತ ಸುಮಾರು ಐದು ಅಡಿ ಕಡಿಮೆಯಾಗಿರುವುದು ಈ ದಿನ ಕಾರ್ಯಾಚರಣೆ ಯಶಸ್ವಿಯಾಗಬಹುದೆಂಬ ನಿರೀಕ್ಷೆ ಇತ್ತು.

ಈಶ್ವರ ಮಲ್ಪೆ ಮತ್ತು ತಂಡ ಸತತ ಪ್ರಯತ್ನ ಮಾಡಿದರೂ ನದಿ ನೀರಿನ ಒಳ ಹರಿವು, ನದಿ ಒಳಗಡೆ ಬಿದ್ದಿರುವ ಆಲದ ಮರ, ಇತರೆ ಅಪಾಯಕಾರಿ ಸಾಮಗ್ರಿಗಳು ಕಾರ್ಯಾಚರಣೆಗೆ ಹಿನ್ನಡೆ ಉಂಟು ಮಾಡುತ್ತಿದ್ದವಲ್ಲದೇ, ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕಾರ್ಯಾಚರಿಸುವುದು ತುಂಬಾ ಅಪಾಯಕಾರಿ ಸಹ ಎನಿಸಿತ್ತು. ಈ ಎಲ್ಲ ಕಾರಣಗಳಿಂದ ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಕ್ಕೆ ತೀರ್ಮಾನ ತೆಗೆದುಕೊಂಡಿದೆ.

ಶೋಧ ಕಾರ್ಯಾಚರಣೆಯ ನಿರೀಕ್ಷಿತ ಯಶಸ್ಸು ದೊರೆಯದೇ, ಕೆಲ ಕಾರಣಗಳಿಂದ ಆಡಳಿತ ವರ್ಗ, ಜನ ಪ್ರತಿನಿಧಿಗಳು, ನೊಂದ ಕುಟುಂಬಗಳು ಮತ್ತಿತರರಲ್ಲಿ ತೀವ್ರ ನಿರಾಸೆ ಮೂಡಿಸುವಂತಾಗಿದೆ.

ಇಂದು 13ನೇ ದಿನದ ಹುಡುಕಾಟದ ಬಳಿಕ ಟ್ರಕ್‌ನ ಯಾವುದೇ ಭಾಗಗಳು ಪತ್ತೆಯಾಗಿಲ್ಲ ಎಂದು ಈಶ್ವರ್ ಮಲ್ಪೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನದಿಯ ಕೆಳಭಾಗದಲ್ಲಿ ಕಂಡದ್ದು ಮರದ ದಿಮ್ಮಿಗಳು, ಮನೆ ಹಾಗೂ ಅಂಗಡಿಯ ಭಾಗವಾಗಿದ್ದ ತಗಡಿನ ಹಾಳೆಗಳು, ವಿದ್ಯುತ್ ತಂತಿಗಳು ಮತ್ತು ಕಂಬಗಳು. ಗಂಗಾವಳಿ ನದಿ ಶಾಂತವಾದರೆ ತಾನಿನ್ನೂ ಕರೆದರೆ ನೆರವಿಗೆ ಬರುವುದಾಗಿ ಈಶ್ವರ್ ಮಲ್ಪೆ ಭರವಸೆ ನೀಡಿದರು. ಮಲ್ಪೆ ತಂಡ ಇಂದು ಶಿರೂರಿನಿಂದ ವಾಪಸಾಗಿದೆ.

ಇನ್ನು ಜಿಲ್ಲಾಡಳಿತ ವಿಪತ್ತು ನಿರ್ವಹಣಾ ಸಭೆ ನಡೆಸಿದ್ದು, ಈ ಸಭೆಯಲ್ಲಿ ತೀರ್ಮಾನ ಮಾಡಿದಂತೆ ನಾಳೆಯೂ ಬೋಟ್ ಮೂಲಕ ಶೋಧ ಕಾರ್ಯ ಮುಂದುವರೆಸುವುದಾಗಿ ಹೇಳಿದೆ. ಇದಲ್ಲದೇ, ಗಂಗಾವಳಿ ನದಿಯಲ್ಲಿ ಬ್ರಿಡ್ಜ್ ಮೌಂಟೆಡ್ ಡೈಜಿಂಗ್ ಮೂಲಕ ಮಣ್ಣು ತೆಗೆಯಲು ಕೇರಳದ ತ್ರಿಶೂರ್‌ನಿಂದ ಆಗಮಿಸಿದ ತಜ್ಞರ ಸಲಹೆ ಪಡೆದು NDRF, SDRF ಮೂಲಕ ಮತ್ತೆ ಕಾರ್ಯಾಚರಣೆ ಮುಂದುವರೆಸುವುದಾಗಿ ಹೇಳಿದೆ. ಈ ನಡುವೆ ಕೇರಳದ ಜನಪ್ರತಿನಿಧಿಗಳು, ಕಾರ್ಯಾಚರಣೆ ಸ್ಥಗಿತಗೊಳಿಸದೆ, ಮುಂದುವರಿಸುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ.

ಈಶ್ವರ್ ಮಲ್ಪೆ ಬೇಸರ

ಇನ್ನು ಶೋಧ ಕಾರ್ಯಾಚರಣೆ ಯಶಸ್ವಿಯಾಗದಿರುವುದಕ್ಕೆ ಮುಳುಗು ತಜ್ಞ ಈಶ್ವರ ಮಲ್ಪೆ ಬೇಸರ ವ್ಯಕ್ತಪಡಿಸಿದ್ದಾರೆ.

“ನಾನು ಈ ಹಿಂದೆ ಮಾಡಿದ ಬಹಳಷ್ಟು ಕಾರ್ಯಾಚಾರಣೆ ಯಶಸ್ಸು ಆಗಿದೆ. ಆದರೆ, ಇಂದಿನ ಶೋಧ ಕಾರ್ಯಾಚರಣೆ ಯಶಸ್ವಿಯಾಗದಿರುವುದರಿಂದ ದುಃಖವಾಗಿದೆ. ನಿರಂತರ ಮಳೆಯಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ. ನದಿ ನೀರಿನ ವೇಗ ಹೆಚ್ಚಿದೆ, ಕೆಸರುಮಯವಾಗಿದ್ದರಿಂದ ಯಶಸ್ವಿಯಾಗಿಲ್ಲ. ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಾಚರಣೆ ಯಶಸ್ಸು ಕಾಣಲಿಲ್ಲ. ನಾನು ನದಿಗೆ ಇಳಿದಾಗ ಬಂಡೆಕಲ್ಲು, ಮಣ್ಣು ಬಿಟ್ಟು ಬೇರೆ ಕಾಣಲಿಲ್ಲ. ಇಂದು ಶೋಧ ನಡೆಸಿದ ಪಾಯಿಂಟ್​ನಲ್ಲಿ ಆಲದ ಮರ ಸಿಕ್ಕಿದೆ. ನೀರಿನ ವೇಗ ಹೆಚ್ಚಾಗಿರುವುದರಿಂದ ನದಿ ಒಳಗೆ ಇರಲು ಆಗಲಿಲ್ಲ. ಕೆಸರು ನೀರು ಇರುವ ತನಕ ಕಾರ್ಯಾಚರಣೆ ಮಾಡುವುದು ಕಷ್ಟ. ನಾನು ನದಿ ಒಳಗೆ ಎಷ್ಟೇ ಇಳಿದರೂ ಸರಿಯಾಗಿ ಏನೂ ಕಾಣಲಿಲ್ಲ. ನದಿ ನೀರು ಕೆಸರುಮಯವಾಗಿರುವುದರಿಂದ ಸರಿಯಾಗಿ ಏನೂ ಕಾಣುತ್ತಿಲ್ಲ” ಎಂದು ಹೇಳಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X