ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ನಮಸ್ಕರಿಸದೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮಾತ್ರ ನಮಸ್ಕರಿಸಿದ್ದು ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ಸಭೆಯು ಭಾನುವಾರ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದಿದೆ. ಈ ಸಭೆಯಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಪ್ರಧಾನಿ ಜೊತೆಗಿನ ಸಂವಾದದ ವೇಳೆ ‘ಅಹಂಕಾರ’ವನ್ನು ಉಲ್ಲೇಖಿಸಿದ ವಿರಾಟ್ ಕೊಹ್ಲಿ; ವಿಡಿಯೋ ವೈರಲ್
ಈ ಸಭೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆ ಸಭೆಯಲ್ಲಿದ್ದ ಎಲ್ಲ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಎದ್ದು ನಿಂತು ನಮಸ್ಕರಿಸಿದ್ದಾರೆ.
#WATCH | Prime Minister Narendra Modi chairs a meeting of BJP CMs and Deputy CMs at BJP headquarters in Delhi
— ANI (@ANI) July 28, 2024
Union Minister and BJP chief JP Nadda, Union HM Amit Shah, Defence Minister Rajnath Singh also present. pic.twitter.com/FDsAXAdJ0i
ಈ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಮಿತ್ ಶಾ ಮತ್ತು ಮೋದಿ ಆಗಮಿಸುವಾಗ ಎದ್ದು ನಿಂತರೂ ಕೂಡಾ ನಮಸ್ಕರಿಸದೆ, ರಾಜನಾಥ್ ಸಿಂಗ್ ಅವರಿಗೆ ಮಾತ್ರ ನಮಸ್ಕರಿಸಿದ್ದಾರೆ. ಹಾಗೆಯೇ ತನ್ನ ಬಳಿಯೇ ಆಸೀನರಾಗುವಂತೆ ರಾಜನಾಥ್ ಅವರನ್ನು ಸ್ವಾಗತಿಸಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗುತ್ತಿದ್ದಂತೆ ಬಿಜೆಪಿ ನಾಯಕತ್ವ ಮತ್ತು ಯೋಗಿ ನಡುವಿನ ಶೀತರ ಸಮರ ಮತ್ತೆ ಭುಗಿಲೆದ್ದಂತಿದೆ. ಯೋಗಿಯನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಬಗ್ಗೆಯೂ ಸುದ್ದಿಗಳಿದ್ದವು.
ಇವೆಲ್ಲವುದರ ನಡುವೆ ಯೋಗಿ ವಿಡಿಯೋ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು “ಬಿಜೆಪಿಯಲ್ಲಿ ಉದ್ವಿಗ್ನತೆ ಹೆಚ್ಚಾದಂತೆಲ್ಲ ಉನ್ನತ ಮಟ್ಟದಲ್ಲಿ ಏನೂ ಸರಿಯಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿ” ಎಂದಿದ್ದಾರೆ.
BIG BREAKING ➖ BJP
— Ravinder Kapur. (@RavinderKapur2) July 28, 2024
All is not well within the top brass in the BJP , as tensions build up 😂
At a function in the BJP Headquarters UP Chief Minister Yogi Adityanath refused to acknowledge a traditional 🙏Namaste first to Home Minister Amit Shah then to PM Narendra Modi… pic.twitter.com/ObkaeaR3Z9
“ಈಗ ಸಮಸ್ಯೆ ಏನು ಎಂಬುದು ಸ್ಪಷ್ಟವಾಗಿದೆ. ‘ಬಾಬಾ’ ಗುಜರಾತಿಗಳಿಂದ ದೂರವಾಗಿದ್ದಾರೆ” ಎಂದು ನೆಟ್ಟಿಗರೊಬ್ಬರು ಹೇಳಿಕೊಂಡಿದ್ದಾರೆ.