ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹದಿಂದ ಹಲವು ಕಡೆಗಳಲ್ಲಿ ಹಾನಿಯುಂಟಾದ ವಿವಿಧ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ನಗರದ ತುಂಗಾ ನದಿಯ ಹೊಸ ಸೇತುವೆ ಸವಾಯಿಪಾಳ್ಯ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಕೂಡ ವೀಕ್ಷಿಸಿದರು. ಸವಾಯಿಪಾಳ್ಯದಲ್ಲಿ ನದಿ ಪ್ರವಾಹದಿಂದ ಹಾನಿಗೊಳಗಾದ ಮಸೀದಿಯ ಪ್ರದೇಶಕ್ಕೂ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದರು. ತದನಂತರ ತುಂಗಾ ನದಿ ದಂಡೆ ಮೇಲಿರುವ ಜಾಗ ಸುತ್ತಮುತ್ತಲಿನಲ್ಲಿ 300 ಮೀಟರ್ ತಡೆಗೋಡೆ ನಿರ್ಮಾಣಕ್ಕೆ ನೀರಾವರಿ ವತಿಯಿಂದ ಮಾಡಿಸಿಕೊಡುವುದಾಗಿ ತಿಳಿಸಿದರು.

“ಮಸೀದಿ ಪಕ್ಕದಲ್ಲಿ ಸರ್ಕಾರಿ ಉರ್ದು ಶಾಲೆ ಹಾಗೂ ಅಂಗನವಾಡಿ ಸಹ ಇದೆ. ಹಾಗಾಗಿ ತುರ್ತಾಗಿ ತಡೆಗೋಡೆ ಅವಶ್ಯಕತೆ ಇದೆ” ಮುಸ್ಲಿಂ ಮುಖಂಡರಾದ ಜೀಲಾನ್ ಸಚಿವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ, ಜಾಮಿಯಾ ಮಸೀದಿ ಕಮಿಟಿಯ ಪದಾಧಿಕಾರಿಗಳು, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್, ಎಂ ಎಲ್ ಸಿ ಬಲ್ಕಿಸ್ ಬಾನು, ಎಚ್ ಸಿ ಯೋಗೇಶ್ ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಜಿಲ್ಲಾ ಎಸ್ ಡಿ ಪಿ ಐ ಮುಖಂಡರು ಉಪಸ್ಥಿತರಿದ್ದರು.

ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.