ದರ್ವೇಶ್ ಗುಂಪಿನಿಂದ ಅವ್ಯವಹಾರ ನಡೆಸಿದ್ದ ಮೂರು ಮಂದಿ ಆರೋಪಿಗಳನ್ನು ಎರಡನೇ ಹೆಚ್ಚುವರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆ ಮುಂದೂಡಲಾಗಿದೆ ಎಂದು ರಾಯಚೂರು ಪೊಲೀಸರು ತಿಳಿಸಿದ್ದಾರೆ.
ದರ್ವೇಶ್ ಗುಂಪಿನಲ್ಲಿ ಹಣ ಹೂಡಿದ್ದ ವ್ಯಕ್ತಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರನ್ನು ಸೋಮವಾರದಂದು ಎರಡನೇ ಹೆಚ್ಚುವರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ದರ್ವೇಶ್ ಗುಂಪಿನ ಪಾಲುದಾರರಾದ ಸೈಯದ್ ವಸೀಂ, ಸೈಯದ್ ಮಸ್ಕೀನ್, ಬಬ್ಲೂ ಎಂಬುವವರು ಹೂಡಿಕೆ ಮಾಡಿದ ಹಣ ನೀಡದೆ ವಂಚಿಸಿದ್ದಾರೆಂದು ವೆಂಕಟೇಶ ಎಂಬುವವರು ರಾಯಚೂರು ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕಬ್ಬು ಅರೆಯುವಿಕೆ ವಿಚಾರ: ರೈತರು- ಎನ್‌ಎಸ್ಎಲ್ ಶುಗರ್ಸ್ ಅಧಿಕಾರಿಗಳ ನಡುವೆ ಮಾತುಕತೆ
ದರ್ವೇಶ್ ಗುಂಪಿನ ಮುಖ್ಯಸ್ಥ ಮಹ್ಮದ್ ಸೂಜಾ ಸೇರಿದಂತೆ ನಾಲ್ವರ ವಿರುದ್ದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದ್ದಾರೆ.
ವರದಿ: ಹಫೀಜುಲ್ಲ